
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ತುರುಸಿನಲ್ಲಿ ಸಾಗಿದ್ದು ನಾನಾ ಕಡೆ ಗಣ್ಯರು ಪರಮಾಧಿಕಾರ ಚಲಾಯಿಸಿ ಇತರರಿಗೂ ಪ್ರೇರಣೆ ನೀಡಿದ್ದಾರೆ.

ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಖಾನಾಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬೆಳಗಾವಿ ಜಿಲ್ಲಾ ಸ್ವೀಪ್ ರಾಯಭಾರಿ ರಾಘವೇಂದ್ರ ಅಣ್ವೇಕರ್ ಅವರು ಟಿಳಕವಾಡಿಯ ಬುಧವಾರಪೇಟೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಳೆದ ಹಲವು ದಿನಗಳಿಂದ ಅವರು ಸ್ವೀಪ್ ರಾಯಭಾರಿಯಾಗಿ ನಿರಂತರ ಮತದಾನ ಜಾಗೃತಿಯಲ್ಲಿ ತೊಡಗಿದ್ದರು.

ಧಾರವಾಡ ಶಾಲಾ ಶಿಕ್ಷಣ ಇಲಾಖೆ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಅವರು ಗೋಕಾಕ ನಗರದ ಮತಗಟ್ಟೆ122 ರಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಮತ ಹಕ್ಕು ಚಲಾವಣೆ ಮಾಡಿ “ಸದೃಢ ಸಮಾಜಕ್ಕೆ ನೀವು ಕೂಡ ತಪ್ಪದೇ ಮತದಾನ ಮಾಡಿ” ಎಂದು ಕರೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ