Kannada NewsKarnataka NewsLatest

*ವಿ ಟಿ ಯು ಅಥ್ಲೆಟಿಕ್ ಕ್ರೀಡಾಕೂಟ: 3ನೇ ದಿನ ಮಹಿಳೆಯರ ಟ್ರಿಪಲ್ ಜಂಪ್ ನಲ್ಲಿ ಪವಿತ್ರ ಜಿ ಹೊಸ ದಾಖಲೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು “ರಜತ ಮಹೋತ್ಸವ” ಅಂಗವಾಗಿ ೨೦೨೩ ಮೇ ದಿನಾಂಕ ೨೧ನೇ ರಿಂದ ೨೪ನೇ ರವರಿಗೆ ಬೆಳಗಾವಿಯ ವಿ ಟಿ ಯು ಮೈದಾನದಲ್ಲಿ ಹಮ್ಮಿಕೊಂಡ ‘೨೪ ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟ’ ದ ಮೂರನೇ ದಿನವೂ ಹಾಲಿ ಚಾಂಪಿಯನ್ ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದ್ಬುತ ಪ್ರದರ್ಶನವನ್ನು ತೋರಿ ಅತಿ ಹೆಚ್ಚು ಪದಕಗಳನ್ನು ಬಾಚಿಕೊಂಡಿದ್ದಾರೆ.

ಕ್ರೀಡಾ ಕೂಟದ ಎರಡನೇ ದಿನ ೨೦ ಕಿ ಮೀ ನಡಿಗೆಯಲ್ಲಿ ದಾಖಲೆ ಮಾಡಿದ್ದ ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಿದ್ಯಾರ್ಥಿನಿ ರಕ್ಷಿತಾ ಐ. ೫೦೦೦ ಮಿಟರ ಓಟದಲ್ಲೂ ಮಹಿಳೆಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ ಕರ‍್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ‍್ಗನ ವಿದ್ಯಾರ್ಥಿನಿ ಚೋ೦ದಮ್ಮ ಕೆ ಟಿ ದ್ವಿತೀಯ ಹಾಗೂ ಆರ್ ವಿ ಇಂಜಿನಿಯರಿಂಗ್ ಕಾಲೇಜಿನ ಸೀಮಾ ತೆಂಡೂಲ್ಕರ್ ಮೂರನೇ ಸ್ಥಾನವನ್ನು ಪಡೆದರು.

ಮಹಿಳೆಯರ ೪ x ೧೦೦ ಮೀ ರಿಲೇ ನಲ್ಲಿ ಪೂತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ವಿದ್ಯಾರ್ಥಿನಿ ಪವಿತ್ರ ಜಿ ನೇತೃತ್ವದ ತಂಡ ಪ್ರಥಮ ಸ್ಥಾನವನ್ನು ಗಳಿಸಿದರೆ, ಬೆಂಗಳೂರಿನ ಆರ್ ವಿ ಇಂಜಿನಿಯರಿಂಗ್ ಕಾಲೇಜಿನ ನಮ್ಯ ಎಲ್ ಜಿ ನೇತೃತ್ವದ ಹಾಗೂ ಮಂಗಳೂರಿನ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಶುಭ್ರಾ ರೈ ಡಿ ನೇತೃತ್ವದ ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡವು.

ಮಹಿಳೆಯರ ಹೆಪ್ತಾಲೊನ್ (ಏಳು ಆಟಗಳು) ವಿಭಾಗದ ಕ್ರೀಡೆಗಳಲ್ಲಿ ಅತಿ ಹೆಚ್ಚು ೨೨೦೬ ಅಂಕಗಳನ್ನು ಗಳಿಸಿದ ಪೂತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಯ ವಿದ್ಯರ‍್ಥಿನಿ ಜಯಶ್ರೀ ಬಿ. ಪ್ರಥಮ ಹಾಗೂ ೧೭೨೦ ಅಂಕ ಗಳಿಸಿದ ಎ ಎಂ ಸಿ ಇಂಜಿನಿಯರಿಂಗ್ ಕಾಲೇಜಿನ ಧ್ರುವ ಎಂ., ಮತ್ತು ೧೨೬೯ ಅಂಕ ಗಳಿಸಿದ ಮೈಸೂರಿನ ಏನ್ ಐ ಇ ಕಾಲೇಜಿನ ಅನಘಾ ಎಂ. ಎ., ತೃತೀಯ ಸ್ಥಾನವನ್ನು ಗಳಿಸಿದರು.

ಮಹಿಳೆಯರ ಗುಂಡು ಎಸೆತ ಕ್ರೀಡೆಯಲ್ಲಿ ಮಂಗಳೂರಿನ ಎಸ ಐ ಟಿ ಕಾಲೇಜಿನ ವಿದ್ಯಾರ್ಥಿನಿ ರಿಕ್ತಾ ಕಿರಣ್ ೯.೯೪ ಮೀ ದೂರ ಎಸೆದು ಪ್ರಥಮ ಸ್ಥಾನವನ್ನು ಹಾಗೂ ೮.೨೦ ಮೀ ಎಸೆದ ದಾವಣಗೆರೆಯ ವಿ ಟಿ ಯು ಘಟಕ ಕಾಲೇಜು ಯು ಬಿ ಡಿ ಟಿಯ ವಿದ್ಯಾರ್ಥಿನಿ ಶ್ರೀನವಿತಾ ಟಿ ದ್ವಿತೀಯ ಮತ್ತು ೮.೧೫ ಮೀ ಎಸೆದ ಎಂ ಎಸ ಆರ್ ಐ ಟಿ ಯ ವೀಣೆಲಾ ಕೊಠಾರಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಮಹಿಳೆಯರ ಟ್ರಿಪಲ್ ಜಂಪ್ ನಲ್ಲಿ ಪೂತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಯ ಪವಿತ್ರ ಜಿ. ೧೨.೫೮ ಮೀ ಜಿಗಿಯುವದರೊಂದಿಗೆ ತನ್ನದೇ ಇದ್ದ ೧೨.೧೧ ಮೀ ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಮಾಡಿದಳು. ವಿಶೇಷವೆಂದರೆ ಮಹಿಳೆಯರ ೪ x ೧೦೦ ಮೀ ರಿಲೇ ನಲ್ಲಿ ಪ್ರಥಮ ಸ್ಥಾನ ಗೆದ್ದ ತಂಡದ ನಾಲ್ಕು ಜನರ ಸದಸ್ಯರಲ್ಲಿ ಪವಿತ್ರ ಜಿ., ಸಹ ಇದ್ದರು. ಇದೆ ಕ್ರೀಡೆಯಲ್ಲಿ ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆಯ ವಿದ್ಯಾರ್ಥಿನಿ ಮೇಧಾ ಎಸ ೯.೩೦ ಮೀ ಹಾಗೂ ಹಾಸನ್ ದ ನವಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿನಿ ಲಾವಣ್ಯ ಎ ಪಿ ೮.೮೭ ಮೀ ಜಿಗಿಯುವದರ ಮೂಲಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡರು.

ಮಹಿಳೆಯರ ವಿಭಾಗದ ೨೦೦ ಮೀ ಓಟದಲ್ಲಿ ಬಿ ಎಂ ಎಸ ರ‍್ಕಿಟೆಕ್ಚರ್ ಕಾಲೇಜಿನ ವಿದ್ಯಾರ್ಥಿನಿ ಧೃತಿ ಎಸ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪೂನಂ ಹಾಗೂ ಎಂ ಎಸ ಆರ್ ಐ ಟಿ ವಿದ್ಯಾರ್ಥಿನಿ ಸಿಮ್ರಾನ್ ಎಫ್ ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನವನ್ನು ಪಡೆದಕೊಂಡರು.

ಇನ್ನೂ ಪುರುಷರ ವಿಭಾಗದ ೪ x ೧೦೦ ಮೀ ರಿಲೇ ನಲ್ಲಿಯೂ ಪೂತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಯ ಲೋಹಿತ್ ನೇತೃತ್ವದ ತಂಡ ಪ್ರಥಮ ಸ್ಥಾನವನ್ನು ಗಳಿಸಿದರೆ, ಬೆಂಗಳೂರಿನ ಆರ್ ಏನ್ ಎಸ ಐ ಟಿಯ ನಿರಂಜನ್ ಪಿ ತಂಡ ಹಾಗೂ ರಂಜಿತ್ ನೇತೃತ್ವದ ನಿಟ್ಟೆಯ ಏನ್ ಎಂ ಎ ಎಂ ಕಾಲೇಜು ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡವು.

ಪುರುಷರ ೫೦೦೦ ಮೀ ಓಟದಲ್ಲಿ ಮೊದಲ ದಿನ ನಡೆದ ೧೦೦೦೦ ಮೀ ಓಟದಲ್ಲಿ ಜಯಭೇರಿ ಬಾರಿಸಿದ ಕ್ರೀಡಾಪಟುಗಳಾದ ರಾಮನಗರದ ರ‍್ಕಾರೀ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ರಂಗನಾಥ್ ಸಿ ಪ್ರಥಮ, ದಕ್ಷಿಣ ಕನ್ನಡದ ಕೆ ವಿ ಜಿ ಇಂಜಿನಿಯರಿಂಗ್ ಕಾಲೇಜು ವಿದ್ಯರ‍್ಥಿ ತೀಶನ್ಎ ಎಂ., ದ್ವಿತೀಯ ಮತ್ತು ಕುಶಾಲ್ ನಗರ ರ‍್ಕಾರೀ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪ್ರಶಾಂತ್ ಎಸ ಬಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಪುರುಷರ ಗುಂಡು ಎಸೆತ ಕ್ರೀಡಾ ವಿಭಾಗದಲ್ಲಿ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಂಪತ್ ಹೆಗ್ಡೆ ೧೨.೭೪ ಮೀ ದೂರ ಎಸೆದು ಪ್ರಥಮ ಸ್ಥಾನವನ್ನು ಹಾಗೂ ೧೨.೨೧ ಮೀ ಎಸೆದ ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಚಿರಾಯು ದ್ವಿತೀಯ ಮತ್ತು೧೧.೨೮ ಮೀ ಎಸೆದ ಹಾಸನ್ ದ ರಾಜೀವ್ ಇನ್ಸ್ಟಿಟ್ಯುಯೇ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಸಂದೀಪ್ ಎಚ್ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಪುರುಷರ ೧೧೦ ಮೀ ಅಡೆತಡೆ ಓಟದಳ್ಳಿ ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ರ‍್ಷ ಎಸ ಎಂ. ಪ್ರಥಮ, ಏನ್ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆಯ ವಿದ್ಯಾರ್ಥಿ ಆರ‍್ಶ ದ್ವಿತೀಯ ಹಾಗೂ ಮೈಸೂರಿನ ಎ ಟಿ ಎಂ ಈ ಕಾಲೇಜು ವಿದ್ಯರ‍್ಥಿ ವಾಗೀಶ್ ಏನ್ ಪಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಪುರುಷರ ವಿಭಾಗದ ಟ್ರಿಪಲ್ ಜಂಪ್ ನಲ್ಲಿ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಜೀವನ್ ಏನ್ ಎಂ ೧೩.೯೧ ಮೀ ಜಂಪ್ ದೊಂದಿಗೆ ಪ್ರಥಮ ಹಾಗೂ ಮೈಸೂರಿನ ಎ ಟಿ ಎಂ ಈ ಕಾಲೇಜು ವಿದ್ಯಾರ್ಥಿ ವಾಗೀಶ್ ಏನ್ ಪಿ ೧೩.೦೨ ಮೀ ಮತ್ತು ಏನ್ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆಯ ವಿದ್ಯಾರ್ಥಿ ಅಂಜನ್ ಎಂ ೧೨.೮೯ ಮೀ ಜಂಪ್ ದೊಂದಿಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಪುರುಷರ ವಿಭಾಗದ ೨೦೦ ಮೀ ಓಟದಲ್ಲಿ ಕೋಲಾರದ ತಿಮ್ಮಯ್ಯ ಇಂಜಿನಿಯರಿಂಗ್ ಕಾಲೇಜಿನ ಬಿ ಧನುಷ್, ಪುತ್ತೂರಿನ ವಿ ಸಿ ಈ ಟಿ ಯ ಲೋಹಿತ್ ಹಾಗೂ ಮುಧೋಳ್ ನ ಬಿ ಜಿ ಎಂ ಐ ಟಿ ಕಾಲೇಜಿನ ರ‍್ಯನ್ ನಿಗಾಡೆ ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನವನ್ನು ಪಡೆದಕೊಂಡರು.

ಮೂರನೇ ದಿನದ ಅಂತ್ಯಕ್ಕೆ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು ೧೧೨ ಅಂಕಗಳೊಂದಿಗೆ ಪ್ರಥಮ್ ಸ್ಥಾನದಲ್ಲಿದ್ದರೆ, ೪೬ ಅಂಕಗಳಿಸಿದ ನಿಟ್ಟೆಯ ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದ್ವಿತೀಯ ಹಾಗೂ ೩೪ ಅಂಕಗಳೊಂದಿಗೆ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ತೃತೀಯ ಮತ್ತು ೧೫ ಅಂಕಗಳಿಸಿದ ಧಾರವಾಡದ ಎಸ ಡಿ ಎಂ ಇಂಜಿನಿಯರಿಂಗ್ ಕಾಲೇಜು ನಾಲ್ಕನೇ ಸ್ಥಾನದಲ್ಲಿವೆ. ನಾಳೆ ಅಂತಿಮ ದಿನವಾಗಿದ್ದು ಇದರ ಸಮಾರೋಪ ಸಮಾರಂಭ ನಡೆಯಲಿದೆ. ಇದಕ್ಕೆ ಬೆಳಗಾವಿ ನಗರದ ಪೊಲೀಸ್ ಆಯುಕ್ತರಾದ ಡಾ. ಎಂ ಬಿ ಬೋರಲಿಂಗಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

https://pragati.taskdun.com/cm-siddaramaiahceodcmeeting/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button