Belagavi NewsBelgaum NewsKannada NewsKarnataka NewsLatest

*ಸುಸ್ಥಿರ ತ್ಯಾಜ್ಯ ನಿರ್ವಹಣೆ, ಮಾಲಿನ್ಯ ರಹಿತ ಪರಿಸರ ನೀಡುವುದು ನಮ್ಮ ಜವಾಬ್ದಾರಿ: ವಿ.ಟಿ.ಯು ಕುಲಪತಿ ಪ್ರೊ.ವಿದ್ಯಾಶಂಕರ ಎಸ್*

ವಿ ಟಿ ಯು ನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ ದಿನಾಂಕ 12ನೇ ಹಾಗೂ 13ನೇ ಫೆಬ್ರವರಿ 2024 ರಂದು ವಿತಾವಿಯ ಆವರಣದಲ್ಲಿ “ಹಜಾರಡಸ್ ವೆಸ್ಟ್ ಮ್ಯಾನೇಜ್ಮೆಂಟ್ ಮತ್ತು ಎನ್ವಿರಾನ್ಮೆಂಟಲ್ ಪ್ರಾಕ್ಟಿಸಸ್ ” ಎಂಬ ವಿಷಯದ ಮೇಲೆ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್ ಮತ್ತು ಹಜಾರಡಸ್ ಮೆಟೀರಿಯಲ್ಸ್ ಮ್ಯಾನೇಜಮೆಂಟ್, ಬೆಂಗಳೂರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಮತ್ತು ಯುಎಸ್ಎ ರಾಕ್ವಿಲೆ, ಮೇರಿಲ್ಯಾಂಡ್ ನ ಅಲಯನ್ಸ್ ಆಫ್ ಹಜಾರಡಸ್ ಮೆಟೀರಿಯಲ್ಸ್ ಪ್ರೊಫೆಶನಲ್ಸ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದಾರೆ. ಇದರ ಉದ್ಘಾಟನಾ ಸಮಾರಂಭವು ದಿನಾಂಕ ಸೋಮವಾರ ದಿನಾಂಕ 12.02.2024 ರಂದು ವಿತಾವಿಯ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಿತು.

ಗೌರವ ಅತಿಥಿಯರಲ್ಲಿ ಒಬ್ಬರಾಗಿ ಆಗಮಿಸಿದ್ದ ಡಾ. ವಿಶ್ವನಾಥ್ ರಾಂಪುರ್, ಮಾಜಿ ಹಿರಿಯ ವಿಜ್ಞಾನಿಗಳು, ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ ಕೈಗಾರಿಕಾ ಕ್ರಾಂತಿಯಿಂದ ಪರಿಸರದಲ್ಲಿ ಅಪಾಯಕಾರಿ ತ್ಯಾಜ್ಯಗಳು ಸೇರ್ಪಡೆಗೊಳ್ಳುತ್ತಿದ್ದು ಇದರ ಮೀತಿ ಅಪಾಯದ ಮಟ್ಟ ತಲುಪಿದೆ. ಇವುಗಳ ನಿರ್ವಹಣೆ ಒಂದು ದೊಡ್ಡ ಸವಾಲಾಗಿದ್ದು ಅಪಾಯಕಾರಿ ವಸ್ತುಗಳ ನಿರ್ವಹಣೆ ಮತ್ತು ಸಂಗ್ರಹಣೆ ಬಗ್ಗೆ ಸಮಾಜಕ್ಕೆ ತಿಳಿಸಕೊಡುವದರ ಜೊತೆಗೆ ಸಾಕಷ್ಟು ಸಂಶೋಧನೆ ನಡೆಯುವ ಅವಶ್ಯಕೆತೆ ಇದೆ ಎಂದು ತಿಳಿಸಿದರು. ಈ ಎರಡು ದಿನಗಳ ಸಮ್ಮೇಳನದಲ್ಲಿ ವಿಷಯ ತಜ್ಞರು ಇದರ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಎಂದು ತಿಳಿಸಿದರು.

ಇನ್ನೋರ್ವ ಗೌರವ ಅತಿಥಿಯಾಗಿ ಆಗಮಿಸಿದ್ದ ಡಾ.ಬಿ.ಶಿವಲಿಂಗಯ್ಯ, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಇವರು ಮಾತನಾಡುತ್ತ ಹೆಚ್ಚುತ್ತಿರುವ ತ್ಯಾಜ್ಯಗಳಿಗೆ ಕಾರಣ ಹೇಳುತ್ತಾ ಡೀಸೈರ – ಮನುಷ್ಯನ ಆಸೆಗಳು, ಡೆವೆಲೊಪಮೆಂಟ್ – ಅಭಿವೃದ್ಧಿ ಈ ಎರಡು D ಗಳು ಮೂರನೇ D ಡಿಟೋರಿಯಷನ್ ಅರ್ಥಾತ ಕೆಡುವುದು ಎಂದು ಹೇಳಿ 3 D ವಿವರಣೆ ನೀಡಿ ನಮ್ಮ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿ ಮಾಡುವುದು ತಪ್ಪಲ ಆದರೆ ಅದು ಹಾಳಾಗದಂತೆ ಪರಿಣಾಮಕಾರಿ ಯೋಜನಗೆಳ ಮುಖಾಂತರ ಪರಿಸರ ಹಾಳಾಗದಂತೆ ತಡೆಯಬೇಕು ಎಂದು ಹೇಳಿದರು.

ಮತ್ತೋರ್ವ ಗೌರವ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯದ ತಾಂತ್ರಿಕ ಸಲಹೆಗಾರ ಶ್ರೀ. ಅರವಿಂದ ಗಲಗಲಿ ಅವರು ಮಾತನಾಡುತ್ತ ಅನಿಯಮಿತ ಕೈಗಾರಿಕೀಕರಣ ಹಾಗೂ ನಗರಿಕರಣಗಳಿಂದ ಜಗತ್ತು ಅನಿಲ ಸೋರಿಕೆ, ಜಲಮಾಲಿನ್ಯ, ವಾಯುಮಾಲಿನ್ಯಗಳಿಂದ, ಕಾಡ್ಗಿಚ್ಚು ಹೀಗೆ ಅನೇಕ ದುರ್ಘಟನೆಗಳಿಂದ ಸಾಕಷ್ಟು ಸಾವು ನೋವುಗಳನ್ನು ಅನುಭವಿಸಿದೆ. ಇವೆಲ್ಲವೂ ಅಪಾಯಕಾರಿ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದೇ ಕರ್ಣ ಎಂದು ಹೇಳಿದರು. ಇಂತಹ ವೇದಿಕೆಗಳು ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಆಗದಂತೆ ಮತ್ತು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಹುಡುಕಿಕೊಡುವದರಲ್ಲಿ ಸಹಕಾರಿಯಾಗುತ್ತವೆ ಎಡನು ತಿಳಿಸಿದರು.

ಇನ್ನೋರ್ವ ಗೌರವ ಅತಿಥಿಯಾಗಿ ಆಗಮಿಸಿದ್ದ ಡಾ. ಬಿ.ಎಸ್. ಜೈಪ್ರಕಾಶ್, ಬಿ.ಆಐ.ಟಿಯ ನಿವೃತ್ತ ಪ್ರಾಂಶುಪಾಲರು ಮತ್ತು ACHMM ಇಂಡಿಯಾ ಚಾಪ್ಟರ್ ನ ಸಂಸ್ಥಾಪಕ ಉಪಾಧ್ಯಕ್ಷರು, ಅವರು ಮಾತನಾಡುತ್ತಾ ಕೈಗಾರಿಕಾ ವಲಯದ ಅಪಾಯಕಾರಿ ವಸ್ತುವಿನ ನಿರ್ವಹಣೆ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳು ಸೇರಿದಂತೆ ರಾಷ್ಟೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಖ್ಯಾತ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅದಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಈ ಸಮಾರಂಭದ ಉದ್ಘಾಟನ ಮಾಡಿ ಮಾತನಾಡಿದ ವಿತಾವಿಯ ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್. ಅವರು ಕ್ಷೀಪ್ರ ಗತಿಯಲ್ಲಿ ಕೈಗಾರಿಕೆಗಳು ಬೆಳೆಯುತ್ತಿರುವ ಇಂದಿನ ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಕೈಗಾರಿಕಾ ತ್ಯಾಜ್ಯ ವಸ್ತುಗಳು ಹಾಗೂ ಅವುಗಳ ದುಷ್ಪರಿಣಾಮಗಳ ಬಗ್ಗೆ ಮತ್ತು ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ನಮ್ಮ ರಾಷ್ಟ್ರದ ಜೊತೆಗೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಶುದ್ಧ ನೀರು, ಗಾಳಿ ಮತ್ತು ಮಣ್ಣಿನ ಅವಶ್ಯಕತೆ ಇದ್ದು, ಮುಂದಿನ ಪೀಳಿಗೆಗೆ ಮಾಲಿನ್ಯ ರಹಿತ ಮತ್ತು ಸುಸ್ಥಿರ ಪರಿಸರವನ್ನು ನೀಡುವ ಜವಾಬ್ದಾರಿ ನಮ್ಮೇಲ್ಲರ ಹೇಗಲ ಮೇಲಿದೆ ಎಂದು ಹೇಳಿದರು. ಈ ಕಾರಣಕ್ಕಾಗಿಯೇ ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ವಿತಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಎರಡು ದಿನಗಳ ನಡೆಯುವ ಈ ಸಮ್ಮೇಳನದಲ್ಲಿ ಕೈಗಾರಿಕಾ ತ್ಯಾಜ್ಯ ನಿರ್ವಹಣೆ ವಿಷಯದ ಬಗ್ಗೆ ಅನೇಕ ಗೋಷ್ಠಿಗಳು ನಡೆಯಲಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ವನ್ನು ಉಪಯೋಗಿಸಿಕೊಂಡು ಕೈಗಾರಿಕಾ ತ್ಯಾಜ್ಯವನ್ನು ಶಕ್ತಿಯಾಗಿ ಪುನರ ಬಳಕೆ ಮಾಡುವ ಸುಸ್ಥಿರ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು. ಕೈಗಾರಿಕಾ ತ್ಯಾಜ್ಯ ವಸ್ತುಗಳ ನಿರ್ವಹಣೆ ಕೇವಲ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯಕ್ಕೆ ಅಷ್ಟೇ ಸೀಮಿತವಾಗಿದೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಜಾಗೃತಿ ಮೂಡಿಸಿ, ನಿರ್ವಹಣೆ ಯೋಜನೆಯು ಸಾಮಾಜಿಕ ಜನಾಂದೋಲನವಾಗಬೇಕು ಕಾರಣ ಮುಂದಿನ ಜನಾಂಗಕ್ಕೆ ಸುಸ್ಥಿರವಾದ ತ್ಯಾಜ್ಯ ನಿರ್ವಹಣೆಯ ಯೋಜನೆಯನ್ನು ಜಗತ್ತಿಗೆ ನೀಡಬೇಕಾದ ಅವಶ್ಯಕತೆ ಮತ್ತು ಜವಾಬ್ದಾರಿ ನಮ್ಮ ಮೇಲಿದೆ ಇದೇ ಎಂದು ತಿಳಿಸಿದರು. ಈ ದಿಶೆಯಲ್ಲಿ ಈ ಸಮ್ಮೇಳನ ಫಲಪ್ರಧವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಮೊದಲಿಗೆ ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿಯವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ವಿತಾವಿಯ ಕುಲಸಚಿವರು(ಮೌಲ್ಯಮಾಪನ), ಪ್ರೊ. ಟಿ. ಎನ್. ಶ್ರೀನಿವಾಸ ಹಾಗೂ ಹಣಕಾಸು ಅಧಿಕಾರಿಗಳಾದ ಎಮ್. ಎ. ಸಪ್ನ ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಿವಿಲ್ ವಿಭಾಗದ ಚೇರ್ ಪರ್ಸನ್ ಡಾ ನಾಗರಾಜ್ ಪಾಟೀಲ್ ವಂದಿಸಿದರು.

Related Articles

Back to top button