Belagavi NewsBelgaum NewsKannada NewsKarnataka NewsTech

*ಶುಕ್ರವಾರ ವಿಟಿಯು 25ನೇ ವಾರ್ಷಿಕ ಘಟಿಕೋತ್ಸವ; ಮೂವರಿಗೆ ಗೌರವ ಡಾಕ್ಟರೇಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ವಾರ್ಷಿಕ ಘಟಿಕೋತ್ಸವದ ಮೊದಲ ಭಾಗ -1 ನ್ನು ಇದೇ ಶುಕ್ರವಾರ,   ಜುಲೈ 04 ರಂದು  ಸ್ನಾತಕ (ಯು ಜಿ – ಬಿ. ಇ./ಬಿ. ಟೆಕ್./ಬಿ. ಆರ್ಚ್./ ಬಿ. ಪ್ಲಾನ್./ ಬಿ. ಎಸ್ಸಿ. ಹಾನರ್ಸ್ ಪದವಿ)ಮತ್ತು ಸಂಶೋಧನಾ ಪದವಿಗಳನ್ನು ಪ್ರದಾನಮಾಡಲು ಪೂರ್ವಾಹ್ನ 11 ಕ್ಕೆ ವಿ ಟಿ ಯು ಬೆಳಗಾವಿಯ ಜ್ಞಾನ ಸಂಗಮ ಆವರಣದ ಡಾ ಎ ಪಿ ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕವನ್ನು ಜಾಗತಿಕ ಅಧ್ಯಯನ ತಾಣವನ್ನಾಗಿ ರೂಪಿಸುವ ಮತ್ತು ಶಿಕ್ಷಣದ ಅಂತರಾಷ್ಟ್ರೀಕರಣಕ್ಕೆ ವಿ. ಟಿ. ಯು. ಸಂಶೋಧನೆಗೆ ಮತ್ತು ನಾವಿನ್ಯತೆಗೆ ಒತ್ತು ಕೂಡುವ ಉದ್ದೇಶದಿಂದ ಮತ್ತು ಹೊಸದಾದ ಬೋಧನಾ ಆಯಾಮಗಳ ಬಗ್ಗೆ ಚಿಂತನೆ ನಡೆಸಿದ್ದು ಉತ್ತಮ ಗುಣಮಟ್ಟದ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನ್ ಶಿಪ್ / ತರಬೇತಿ ರೀತಿಯಲ್ಲಿಅಧ್ಯಾಪಕರು/ವಿದ್ಯಾರ್ಥಿ ವಿನಿಮಯದಂತಹ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.

ಜೊತೆಗೆ  ವಿದೇಶಿ ವಿಶ್ವವಿದ್ಯಾಲಯಗಳಲ್ಲಿ/ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡುವ ನಮ್ಮ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ, ಅಡೆತಡೆಗಳು/ತೊಂದರೆಗಳನ್ನು ಎದುರಿಸಬಾರದು ಎಂದು ವಿ ಟಿ ಯು ಅಂತರಾಷ್ಟ್ರೀಯ  ಶೈಕ್ಷಣಿಕ ಕ್ಯಾಲೆಂಡರ್‌ನೊಂದಿಗೆ ವಿ ಟಿ ಯು ಶೈಕ್ಷಣಿಕ ಕ್ಯಾಲೆಂಡರ್‌ ನ್ನು ಸರಿ ಹೊಂದುವಂತೆ ಮಾಡಿ ದಾಖಲೆ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ನೀಡುವ ಮೂಲಕ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ/ಪ್ರತಿಷ್ಠಿತ ಸಂಸ್ಥೆಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ.

Home add -Advt

ಅಷ್ಟೇ ಅಲ್ಲದೆ ಮೇಲೆ ತಿಳಿಸಿದಂತೆ ಉನ್ನತ ವ್ಯಾಸಂಗ ಜೊತೆಗೆ  ಔದ್ಯೋಗಿಕ ಕ್ಷೇತ್ರದಲ್ಲಿನ  ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ನೀಡುವಲ್ಲಿ ವಿಳಂಬವನ್ನು ತಪ್ಪಿಸಲು,  ಕಾರಣ ಪದವಿ ಶಿಕ್ಷಣ ಮುಗಿಸಿ   ಕ್ಯಾಂಪಸ್ ಆಯ್ಕೆ ಅಥವಾ ನೇರ ಆಯ್ಕೆ ಮುಖಾಂತರ ಉದ್ಯೋಗ ಸೇರುವ ಪದವೀಧರರಿಗೆ ಹಲವಾರು ಕಂಪನಿಗಳು ಮತ್ತು ಸರ್ಕಾರೀ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಗಳು ಉದ್ಯೋಗಕ್ಕೆ  ಸೇರಿಕೊಳ್ಳುವ  ಸಮಯದಲ್ಲೇ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಲು ಸೂಚಿಸುತ್ತಿರುವುದರಿಂದ ವಿಶ್ವವಿದ್ಯಾಲಯವು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಕಳೆದ ಎರಡು ಘಟಿಕೋತ್ಸವಗಳಿಂದ ಸ್ನಾತಕ ಪದವಿ ಪ್ರಧಾನಕ್ಕೆ ಭಾಗ ಒಂದು  ಮತ್ತು ಸ್ನಾತಕೋತ್ತರ ಪದವಿಗಳಿಗೆ ಭಾಗ ಎರಡು ಒಟ್ಟು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  

• ಶ್ರೀ.ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಅಧ್ಯಕ್ಷತೆ ವಹಿಸುವರು

• ಡಾ.ಎಂ.ಸಿ.ಸುಧಾಕರ್, ಸಚಿವರು, ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳು ಉಪಸ್ಥಿತರಿರುವರು.

• ಪ್ರೊ ಅಜಯ್ ಕುಮಾರ್ ಸೂದ್, ಪದ್ಮಶ್ರೀ ಪುರಸ್ಕೃತರು ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರರು, ಭಾರತ ಸರಕಾರ ಇವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು.

ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ವಿಜ್ಞಾನ, ತಾಂತ್ರಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ಮೂರೂ ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ಡಾಕ್ಟರ್ ಆಫ್  ಸೈನ್ಸ್ ಪ್ರದಾನ  ಮಾಡಲಿದ್ದಾರೆ.

1 . ಡಾ. ವಿ. ನಾರಾಯಣನ್ , ಅಧ್ಯಕ್ಷರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ

2 .ಶ್ರೀ ಪ್ರಶಾಂತ್ ಪ್ರಕಾಶ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಎಕ್ಸೆಲ್ ಇಂಡಿಯಾ ಸಂಸ್ಥಾಪಕರು.

3 . ಶ್ರೀ ಸಿ. ಎಸ. ಸುಂದರ್ ರಾಜು, ಕುಲಾಧಿಪತಿಗಳು, ಎಟ್ರಿಯ ವಿಶ್ವವಿದ್ಯಾಲಯ, ಬೆಂಗಳೂರು.

ವಿಶ್ವವಿದ್ಯಾಲಯದ ಈ 25ನೇ ವಾರ್ಷಿಕ ಘಟಿಕೋತ್ಸವದ (ಭಾಗ -1 ) ಸಮಯದಲ್ಲಿ B.E.-38154+20707(Autonomous Colleges)=58,861, B.Tech.-117, B.Plan.-10, B.Arch.-806+234(Autonomous Colleges)=1040, B.Sc.(Honours)- 24,

Total UG degrees to be awarded – 60,052 

ಹಾಗೂ ಸಂಶೋಧನಾ ಪದವಿಗಳಾದ  ಪಿ.ಎಚ್ ಡಿ .262 .,  ಹಾಗೂ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ 02ಪದವಿಗಳನ್ನು ನೀಡಲಾಗುವುದು.

  • ಬಸ್ಗಳ ವ್ಯವಸ್ಥೆ

ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಶುಕ್ರವಾರ, ದಿನಾಂಕ 04ನೇ ಜುಲೈ, 2025 ರಂದು ಕೇಂದ್ರ ಬಸ್ ನಿಲ್ದಾಣ, ಬೆಳಗಾವಿಯಿಂದ ಬೆಳಗ್ಗೆ7.00 ರಿಂದ 9.00 ಘಂಟೆಯವರೆಗೆ ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಕುಲಪತಿಗಳಾದ ಪ್ರೊ. ವಿದ್ಯಾಶಂಕರ್ ಎಸ್. ಅವರು ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.  ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಟಿ ಎನ್ ಶ್ರೀನಿವಾಸ್ ಹಾಜರಿದ್ದರು.

ಪದಕ ವಿಜೇತರು (ಮೊದಲ 08 ವಿಜೇತರ ಪಟ್ಟಿ)

1. 12+1(13) ಚಿನ್ನದ ಪದಕ  ಕುಮಾರಿ ನಮ್ರತಾ ಸಿ ಪ್ರಭು (1OX21CV021) ಸಿವಿಲ್ ಎಂಜಿನಿಯರಿಂಗ್, ಆಕ್ಸ್ ಫರ್ಡ್ ಕಾಲೇಜು ಆಫ್ ಇಂಜಿನಿಯರಿಂಗ್ ಬೆಂಗಳೂರು

2. 10+1(11) ಚಿನ್ನದ ಪದಕ  ಕುಮಾರಿ ನವ್ಯಶ್ರೀ ಗಣಪಿಶೆಟ್ಟಿ (1RF21EC035) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಆರ್. ವಿ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು

3. 06+1(07) ಚಿನ್ನದ ಪದಕ  ಕು. ಕಾರ್ತಿಕ್ ಎಲ್., (1BI21ME028) ಮೆಕ್ಯಾನಿಕಲ್ ಇಂಜಿನಿಯರಿಂಗ್, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು.

3. 06+1(07) ಚಿನ್ನದ ಪದಕ  ಕುಮಾರಿ ಕವನಾ ಎ. (4GW21EE014) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಜಿ.ಎಸ.ಎಸ.ಎಸ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ವುಮೆನ್, ಮೈಸೂರು

4. 05+1 (06) ಚಿನ್ನದ ಪದಕ  ಕುಮಾರಿ ಮೋಹಿನಿ ವಿ. (1DT21CS090) ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ದಯಾನಂದ್ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಬೆಂಗಳೂರು.

5. 03+1 (04) ಚಿನ್ನದ ಪದಕ – ಕುಮಾರಿ ಜಾಹ್ನವಿ ಕೆ. (1RN21EI018) ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್, R.N.S ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (RNSIT), ಬೆಂಗಳೂರು

5. 03+1(04) ಚಿನ್ನದ ಪದಕ – ಕುಮಾರಿ ಮೇದಿನೀ ಎಸ ರಾವ್,(4MT21IS022), ಇನ್ಫೋರ್ಮೇಷನ್  ಸೈನ್ಸ್ ಮತ್ತು ಎಂಜಿನಿಯರಿಂಗ್, ಮಂಗಳೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್, ಮೂಡಬಿದರೆ.

6. 01+1(02) ಚಿನ್ನದ ಪದಕ – ಕುಮಾರಿ ರಕ್ಷಿತಾ ಎಂ. (1EE21AE032), ಏರೋನಾಟಿಕಲ್ ಇಂಜಿನಿಯರಿಂಗ್, ಈಸ್ಟ್ ವೆಸ್ಟ್ ಕಾಲೇಜು ಆಫ್ ಇಂಜಿನಿಯರಿಂಗ್, ಬೆಂಗಳೂರು.

25th Annual Convocation (Part-1) of VTU

To promote Karnataka as a global study destination and Internationalization of education VTU has taken many measures such as facilitating research / teaching collaborations and faculty /student exchange with high-quality foreign HEIs.

University is all set to help our students who wish to go to abroad for higher studies by announcing calendar of events in line with the International Academic Calendar so that our students will not face any hurdles/difficulties in admissions process at foreign universities.

In view of the above and also to avoid delay in award of degree certificates to graduates as many companies and public sector entities are instructing to submit degree certificates at the time of joining, University is planned to conduct two Convocations in a year since 2023.

Part 1 of 25th Annual Convocation was held on 1st August 2023 to confer degrees of UG (B.E./B.Tech./B.Plan./B.Arch.) and Research (Ph.D./M.Sc.(Engg.)by Research) Degrees.

Visvesvaraya Technological University, Belagavi will be organizing Part-1 of 25th Annual Convocation on Friday, 04th July, 2025 at 11.00AM at Dr.A.P.J. Abdul Kalam auditorium ‘Jnana Sangama’, VTU, Belagavi to confer degrees of Under Graduation UG (B.E./B.Tech./B.Plan./B.Arch./B.Sc. Honors)  and Research Degrees (Ph.D., M.Sc. (Engg.) by Research and Integrated dual Degrees)

  • Shri Thawar chand Gehlot

Hon’ble Governor of Karnataka and Chancellor of the University will preside.

  • Dr.M.C.Sudhakar,

Hon’ble minister for Higher Education, Govt. of Karnataka and Pro- Chancellor of the University will grace the occasion.

  • Prof. Ajay Kumar Sood,

Padmashri awardee and Principal Scientific Advisor to Govt. of India.

Will be the Chief Guest and deliver the Convocation Address.

On this occasion VTU will confer Honorary Doctorate Degree “Doctor of Science” on three following eminent personalities.

  1. Dr. V. Narayanan

Chairman, Indian Space Research Organization (ISRO) and

Secretary, Department of Space

  • Shri Prashant Prakash

Padma Shri Awardee and Founder, Excel India.

  • Shri C. S. Sunder Raju

Chancellor, Atria University, Bangalore.

During Part-1 of 25th Annual Convocation, VTU is conferring B.E.-38154+20707(Autonomous Colleges)=58,861, B.Tech.-117, B.Plan.-10, B.Arch.-806+234(Autonomous Colleges)=1040, B.Sc.(Honours)- 24,

Total UG degrees to be awarded – 60,052

Research Degrees-

In this 25th Annual Convocation, University is awarding 262 Ph.D.,and 02 Integrated Dual degrees to Research Scholars. (Total 264 Research Degrees)

Ø Transportation facility for Graduates and their Parents-

Transportation facility is arranged from CBT Bus Stand to University Campus for the students, Principals and parents for attending the Convocation on Friday  04th July 2025 from 7.30am to 9.00am.

Vice-Chancellor Prof. Vidyashankar addressed the press conference, Registrar Prof. B. E. Rangaswamy and Registrar (Evaluation) Prof. T. N. Sreenivasa were present.

Gold Medalists (List of First Eight)

  1. 12+1 (13) Gold Medals – Miss Namrata C Prabhu (1OX21CV021) Civil Engineering, Oxford College of Engineering Bangalore
  • 10+1 (11) Gold Medals –Miss Navyashree Ganpishetty (1RF21EC035) Electronics and Communication Engineering, R. V. Institute of Technology, Bangalore
  • A. 06+1(07) Gold Medals – Mr. Karthik L., (1BI21ME028) Mechanical Engineering, Bangalore Institute of Technology, Bangalore.

B. 06+1(07) GOLD MEDALS – Miss Kavana A. (4GW21EE014) Electrical and Electronics Engineering, G.S.S.S. Institute of Technology for Women, Mysore

  • 05+1 (06) GOLD MEDALS – Miss Mohini V. (1DT21CS090) Computer Science and Engineering, Dayanand Sagar Academy of Technology and Management, Bangalore.
  • A. 03+1 (05) GOLD MEDALS – Miss Jahnavi K. (1RN21EI018) Electronics and Instrumentation Engineering, R.N.S Institute of Technology (RNSIT), Bangalore

B. 03+1 (04) GOLD MEDALS – Miss Medinee S. Rao, (4MT21IS022), Information Science and Engineering, Mangalore Institute of Technology and Engineering, Moodbidri.

  • 01+1(02) Gold Medals – Miss Rakshita M. (1EE21AE032), Aeronautical Engineering, East West College of Engineering, Bangalore.

Top Five places with Highest Number of VTU Ranks

Rank College Name UG Ranks
1Mangalore Institute of Technology and Engineering,(MITE) Moodabidri16
2Bangalore Institute of Technology (BIT), Bengaluru 13
3ACS College of Engineering, Bengaluru10
BMS School of Architecture, Bengaluru10
EAST WEST College of Engineering and Technology, Bengaluru10
CANARA Engineering College, Bantwal10
4JSS Academy of Technical Education (JSSATE) Bengaluru09
    5Dr. T. Thimmaiah Institute of Technology, KGF07
Sai Vidya Institute of Technology, Bengaluru07
RNS Institute of Technology, Bengaluru07
Vivekananda College of Engineering & Technology, Puttur07
JNNCE Shivamogga07
  • Category wise split-up (Only for CBCS Scheme):
Course/Degree(CBCS)No of Students Appeared     No of Students Passed% of Passing
B.E.                 72262                  58861     81.45   
BoysGirlsBoysGirls
43218290443278076.11%2608189.79%
SC/ST  – 8727 SC/ST  BOYS – 5066SC/ST  GIRLS -3661SC/ST  – 6457SC/ST  BOYS – 3516SC/ST  GIRLS -2941     73.9869.4080.33
B.Tech.147117     79.59
B.Arch.(UG Architecture)103480677.94
B.Plan.111090.91
B.Sc. (Honors) in Physics, Chemistry and Mathematics 272488.89

Related Articles

Back to top button