ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಸೇನೆಗೆ ಸೇರುವ ಮೂಲಕ ದೇಶಸೇವೆ ಮಾಡಲು ಬಯಸಿದ್ದೀರಾ? ಹಾಗಾದರೆ ತಡವೇಕೆ? ಇಂದೇ ಅರ್ಜಿ ಸಲ್ಲಿಸಿ. ಬೆಳಗಾವಿಯ ಮಹಾರ್ ಬಟಾಲಿಯನ್‌ನಲ್ಲಿ ಸೈನಿಕ (ಜನರಲ್ ಡ್ಯೂಟಿ) ಸೇರಿದಂತೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅಕ್ಟೋಬರ್ ೧೫ ರಿಂದ ೨೫ ರ ವರಿಗೆ ಸೇನಾ ನೇಮಕಾತಿ ಜರುಗಲಿದ್ದು, ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್ ೭ ಕೊನೆಯ ದಿನವಾಗಿದೆ. ಜಿಡಿ(೪೧), ಗುಮಾಸ್ತ (೦೨), ಬಾಣಸಿಗ (೦೧), ವಿಶೇಷ ಬಾಣಸಿಗ (೦೧), ಹೇರ್ ಡ್ರೆಸ್ಸರ್(೦೧) ಹಾಗೂ ವಾಷರ್ ಮ್ಯಾನ್ (೦೧) ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಸೈನಿಕ –ಜನರಲ್ ಡ್ಯೂಟಿಹುದ್ದೆಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ ೪೫ ರಷ್ಟು ಅಂಕ ಪಡೆದು ಪಾಸಾಗಿರಬೇಕು ಮತ್ತು ಪ್ರತಿ ವಿಷಯದಲ್ಲಿ ಶೇ ೩೩ ರಷ್ಟು ಅಂಕ ಪಡಿದಿರಬೇಕು. ಸೈನಿಕ- ಸಿ ಟ್ರೇಡ್ಸ್‌ಮ್ಯಾನ್ ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿರಬೇಕು. ಹೌಸ್ ಕೀಪರ್ ಮತ್ತು ಮೇಸ್ ಕೀಪರ್‌ಗೆ ೮ನೇ ತರಗತಿ ಉತ್ತಿರ್ಣರಾಗಿರಬೇಕು. ಸೈನಿಕ- ಗುಮಾಸ್ತ ಹುದ್ದೆಗೆ ಪಿ.ಯು.ಸಿ ಯಲ್ಲಿ ಶೆ.೬೦ ರಷ್ಟು ಅಂಕ ಪಡೆದು ಪಾಸಾಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಂಧ್ರಪ್ರದೇಶ, ತೆಲಂಗಾಣ, ಗುಜರಾತಿನ ನಿವಾಸಿಗಳು,. ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮತ್ತು ರಾಜಸ್ತಾನ ಮತ್ತು ಕೇಂದ್ರ ಪ್ರದೇಶದಗಳಾದ ದಾದ್ರಾ ಮತ್ತು ನಗರ ಹಾವೇಲಿ, ಗೋವಾ, ದಮನ್ ಮತ್ತು ಡಿಯು, ಲಕ್ಷದ್ವೀಪ ಮತ್ತು ಪಾಂಡಿಚೇರಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ದೈಹಿಕ ಪರೀಕ್ಷೆ:
ಎತ್ತರ ೧೬೦ ಸೆ.ಮೀ, ತೂಕ ಕನಿಷ್ಠ ೫೦ ಕೆ.ಜಿ, ಎದೆ ಸುತ್ತಳತೆ ಅಳತೆ ೭೭.೫ ಸೆ.ಮೀ ದೇಹದಾರ್ಡ್ಯತೆ ಹೊಂದಿರಬೇಕು. ವಯಸ್ಸು ನೇಮಕಾತಿ ದಿನದಂದು ೧೮ ರಿಂದ ೪೨ ವರ್ಷ ತುಂಬಿರಬೇಕು.
ಲಿಖಿತ ಪರೀಕ್ಷೆ: ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.
ನೇಮಕಾತಿ ರ‍್ಯಾಲಿಯಲ್ಲಿ ಆನ್‌ಲೈನ್ ಮೂಲಕ https://froms.gle/GjQfTYoBTfxyBSkT7 ವೆಬ್‌ಸೈಟ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ದೇಶದ ಪ್ರಪ್ರಥಮ ಮಹಿಳಾ ಸೇನಾ ಭರ್ತಿ ರ‍್ಯಾಲಿ
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ