Kannada NewsKarnataka NewsLatest

*ಅರ್ಧ ಮೀಸೆ, ಗಡ್ಡ ಬೋಳಿಸಿದ ಡ್ರೋಣ್ ಪ್ರತಾಪ್ ಅಭಿಮಾನಿ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಬಿಗ್ ಬಾಸ್ ಸೀಜನ್ -10ರಲ್ಲಿ ಕಾರ್ತಿಕ್ ಗೆಲುವು ಸಾಧಿಸಿದ್ದು, ಕೊನೇ ಕ್ಷಣದವರೆಗೂ ತೀವ್ರ ಪೈಪೋಟಿ ನೀಡಿದ್ದ ಡ್ರೋಣ್ ಪ್ರತಾಪ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಡ್ರೋಣ್ ಪ್ರತಾಪ್ ಗೆಲುವಿನ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ಬೇಸರವಾಗಿದೆ.

ಡ್ರೋಣ್ ಪ್ರತಾಪ್ ಬಿಗ್ ಬಾಸ್ ಸೀಜನ್ ನಲ್ಲಿ ಸೋಲನುಭವಿಸಿದ ಕಾರಣಕ್ಕೆ ನೊಂದ ಅವರ ಅಭಿಮಾನಿಯೊಬ್ಬ ಅರ್ಧ ಮೀಸೆ ಬೋಳಿಸಿಕೊಂಡಿರುವ ಘಟನೆ ನಡೆದಿದೆ.

Home add -Advt

ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನಿಯೊಬ್ಬ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ತನ್ನ ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಝೈನುಲ್ ಆಬಿದ್ ಡ್ರೋಣ್ ಪ್ರತಾಪ್ ಅಭಿಮಾನಿಯಾಗಿದ್ದು, ಬಿಗ್ ಬಾಸ್ ಸೀಜನ್ 10ರಲ್ಲಿ ಪ್ರತಾಪ್ ಗೆಲ್ಲುತ್ತಾರೆ ಎಂದು ಹೇಳಿಕೊಂಡಿದ್ದರು. ಒಂದು ವೇಳೆ ಸೋತರೆ ಅರ್ಧ ಮೀಸೆ ತೆಗೆಯುವುದಾಗಿ ಹಾಗೂ ಹಸಿ ಮೆಣಸಿನ ಕಾಯಿ ತಿನ್ನುವುದಾಗಿ ಚಾಲೇಂಜ್ ಮಾಡಿದ್ದರು.

ಇದೀಗ ಪ್ರತಾಪ್ ರನ್ನರ್ ಅಪ್ ಆಗಿದ್ದರಿಂದ ಅಭಿಮಾನಿ ಝೈನುಲ್ ಆಬಿದ್ ತಮ್ಮ ಅರ್ಧ ಮೀಸೆ, ಗಡ್ಡವನ್ನು ಬೋಳಿಸಿ ಹಸಿ ಮೆಣಸಿನಕಾಯಿ ತಿಂದಿದ್ದಾರೆ.

Related Articles

Back to top button