ಮಾಜಿ ಶಾಸಕ ಹಾಗೂ ಮಾಜಿ ಸಚಿವರ ನಡುವೆ ಜಿದ್ದಾಜಿದ್ದಿ
ಪ್ರಗತಿವಾಹಿನಿ ಸುದ್ದಿ : ಈ ಬಾರಿಯ ಉಪ ಚುನಾವಣೆಯಲ್ಲಿ ಬೈರತಿ ಬಸವರಾಜ್ ಬಿ ಜೆಪಿ ಯಿಂದ ಕಣಕ್ಕಿಳಿದರೆ, ಕೆ.ಆರ್.ಪುರಂ ನ ಉಸ್ತುವಾರಿ ತನಗೆ ಬಿಡುವಂತೆ ಕೆ.ಜೆ.ಜಾರ್ಜ್ ಕೇಳಿದ್ದಾರಂತೆ. ಸಧ್ಯ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅತಂತ್ರ ಸ್ಥಿತಿಯಲ್ಲಿರುವ ಬೈರತಿ ಬಸವರಾಜ್ ಏನಾದರೂ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದೇ ಆದರೆ ಅವರನ್ನು ಸೋಲಿಸಿಯೇ ತೀರುತ್ತೇನೆಂದು ಕೆ.ಜೆ ಜಾರ್ಜ್ ಶಪಥ ಮಾಡಿ ತೊಡೆ ತಟ್ಟಿ ನಿಂತಿದ್ದಾರೆ.
ಬೆಂಗಳೂರು, ಕೆ.ಆರ್.ಪುರಂ ಕ್ಷೇತ್ರವನ್ನು ತನ್ನ ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿರುವ ಕೆ.ಜೆ.ಜಾರ್ಜ್ , ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವುದಾಗಿ, ಆ ಕ್ಷೇತ್ರವನ್ನು ತನ್ನ ಜವಾಬ್ದಾರಿಗೆ ಬಿಡುವಂತೆ ಕೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುತ್ತೇನೆ ಎಂದಿದ್ದಾರೆ.
ಇದಕ್ಕೆಲ್ಲಾ ಈ ಹಿಂದೆ ಬೈರತಿ ಬಸವರಾಜ್ ಮತ್ತು ಕೆ.ಜೆ ಜಾರ್ಜ್ ನಡುವೆ ನಡೆದಿದ್ದ ಘರ್ಷಣೆಯೇ ಕಾರಣ ಎಂಬುದು ಬೆಳಕಿಗೆ ಬಂದಿದೆ, ಆಗ ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡೆಸಿದ್ದರು ಸಿದ್ದರಾಮಯ್ಯ, ಆ ನಂತರ ಬೈರತಿ ಬಸವರಾಜ್ ಕೊಟ್ಟ ರಾಜೀನಾಮೆಗೆ ಇದೆ ವಿಷಯ ಕಾರಣವಂತೆ, ಸಿದ್ದರಾಮಯ್ಯ ಜಾರ್ಜ್ ಮೇಲೆ ಯಾವುದೇ ಕ್ರಮ ತೆಗೆದು ಕೊಂಡಿಲ್ಲ, ಎಂಬ ಕಾರಣಕ್ಕೆ ಬೈರತಿ ಬಸವರಾಜ್ ಸಿಟ್ಟಾಗಿದ್ದರು.
ನಂತರ ಬೈರತಿ ಬಸವರಾಜ್ ರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗದ ನಂತರ, ನೇರವಾಗಿ ಸಿದ್ದರಾಮಯ್ಯರವನ್ನೇ ನಿಂದಿಸಿದ್ದರು, ಬೈರತಿ ಬಸವರಾಜ್. ಹಾಗಾಗಿ ಬೈರತಿ ಬಸವರಾಜ್ ವಿರುದ್ಧ ಸಿಡಿದೆದ್ದ ನಾಯಕರು ಎದುರಾಗುತ್ತಿರುವ ಉಪ ಚುನಾವಣೆಯಲ್ಲಿ ಸರಿಯಾದ ಗುಣಪಾಠ ಕಲಿಸಲು ಮುಂದಾಗಿದ್ದಾರೆ. ಕೆ.ಆರ್.ಪುರಂ ರಣರಂಗದಲ್ಲಿ ಬಸವರಾಜ್ ಗೆ ಸೋಲಿನ ರುಚಿ ತೋರಿಸಲು ಜಾರ್ಜ್ ಅಂಡ್ ಟೀಮ್ ಸಜ್ಜಾಗುತ್ತಿದೆ.
ಈ ಮೂಲಕ ಕೆ.ಆರ್.ಪುರಂ ನ ಬೈ ಎಲೆಕ್ಷನ್ ನಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲುವುದಾಗಿ ಜಾರ್ಜ್ ವಿಶ್ವಾಸ ವ್ಯಕ್ತ ಪಡಿಸಿ, ಹಳೆಯ ಸೇಡಿಗೆ ಸೋಲಿನ ಪಾಠ ಮಾಡಲು ತವಕದಲ್ಲಿದ್ದಾರೆ.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ