ಕಸ ವಿಲೇವಾರಿ ವಿಳಂಬಕ್ಕೆ ನಗರ ಸೇವಕರು ಹೈರಾಣ; 20 ದಿನವಾದರೂ ಎತ್ತಂಗಡಿಯಾಗದ ತ್ಯಾಜ್ಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಕಸ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ನಗರಸೇವಕರು ರೋಸಿ ಹೋಗಿದ್ದಾರೆ.
ಮನೆ ಮನೆ ಕಸವನ್ನು ಸಹ ನಾಲ್ಕು ದಿನಕ್ಕೊಮ್ಮೆ ತೆಗೆದುಕೊಂಡು ಹೋಗುವುದನ್ನು ತಪ್ಪಿಸಿ ಪ್ರತಿ ದಿನ ಅಥವಾ ದಿನ ಬಿಟ್ಟು ದಿನ ತೆಗೆದುಕೊಂಡು ಹೋಗಬೇಕು ಎನ್ನುವ ಒತ್ತಾಯ ನಗರಸೇವಕರದ್ದಾಗಿತ್ತು. ಆದರೆ ಅದೂ ಆಗುತ್ತಿಲ್ಲ.
ಇವೆಲ್ಲದರ ನಡುವೆ ರಸ್ತೆ ಪಕ್ಕಕೂಡಿ ಹಾಕಿರುವ ಕಸದ ರಾಶಿಯನ್ನು 20ದಿನವಾದರೂ ವಿಲೇವಾರಿ ಮಾಡುವುದಿಲ್ಲ. ಇದು ಬಹುತೇಕ ನಗರಸೇವಕರ ಆಕ್ರೋಶಕ್ಕೆ ಕಾರಣವಾಗಿದೆ.
ವಾರ್ಡ ನಂಬರ 43 ರಲ್ಲಿ ಕೂಡ ಇಂತಹುದೇ ಸಮಸ್ಯೆ ವಿಕೋಪಕ್ಕೆ ಹೋಗಿದ್ದರಿಂದ ಅಲ್ಲಿನ ನಗರಸೇವಕಿ ವಾಣಿ ಜೋಶಿ ಆಕ್ರೋಶಗೊಂಡು ಪಾಲಿಕೆಗೆ ಖಡಕ್ ಪತ್ರವನ್ನು ಬರೆದಿದ್ದಾರೆ.
ಚಿದಂಬರ ನಗರ ಸೇರಿದಂತೆ ಆ ವಾರ್ಡ್ ನಲ್ಲಿ ಬರುವ ಕಸ ವಿಲೇವಾರಿ ಮಾಡುವಲ್ಲಿ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಇಂದು ಜು.11.ರಂದು ಮಧ್ಯಾಹ್ನ ದೊಳಗೆ ರಸ್ತೆ ಪಕ್ಕ ಕೂಡಿ ಹಾಕಿರುವ ಕಸವನ್ಬು ವಿಲೇವಾರಿ ಮಾಡದಿದ್ದರೆ ಅದನ್ನು ಎತ್ತಿ ಆರ್ ಪಿಡಿ ಕ್ರಾಸ್ ನಲ್ಲಿರುವ ಪಾಲಿಕೆ ಕಚೇರಿ ಎದುರು ಸುರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಾಸಕ ಅಭಯ ಪಾಟೀಲ ಕೂಡ ಸ್ವಚ್ಚತೆ ನಿಟ್ಟಿನಲ್ಲಿ ಹಲವು ಬಾರಿ ಸೂಚನೆ ನೀಡಿದ್ದಾರೆ. ಆದರೂ ಕ್ರಮವಾಗಿಲ್ಲ.ಈ ಹಿಂದೆ ಕೂಡ ಈ ಕಸ ವಿಲೇವಾರಿಯಿಂದ ಬೇಸತ್ತ ಶಾಸಕರು ಕಸವನ್ನು ತಂದು ಆಯುಕ್ತರ ಮನೆ ಮುಂದೆ ಸುರುವಿದ್ದರು. ಈಗ ನಗರಸೇವಕರು ಮುಂದಾಗಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಮತ್ತೊಂದು ಶಾಲಾ ಗೋಡೆ ಕುಸಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ