ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಿಜೆಪಿ ಶಾಸಕರ ವಿಶೇಷ ಪ್ರಯತ್ನದಿಂದ ಕೃಷ್ಣಾ ನದಿಗೆ ನೀರು; ರೈತರ ಮೊಗದಲ್ಲಿ ಸಂತಸ


ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಉತ್ತರ ಕರ್ನಾಟಕದ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಶಾಸಕರಾದ ದುರ್ಯೋಧನ ಐಹೊಳೆ, ನಿಖಿಲ್ ಕತ್ತಿ, ಶಶಿಕಲಾ ಜೊಲ್ಲೆ, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ರೈತ ಮೋರ್ಚಾ ಅಧ್ಯಕ್ಷ ಸಿದ್ದಪ್ಪ ಮುದಕನವರ್ ಅವರೊಂದಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ಕಳೆದ ವಾರ ಭೇಟಿ ಮಾಡಿದ್ದರು.
ಆಗ ಕೃಷ್ಣಾ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರಿಂದ ಮಹಾರಾಷ್ಟ್ರದ ಡ್ಯಾಂನಿಂದ ನೀರು ಬಿಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಇಂದು ಕೃಷ್ಣಾ ನದಿಯಿಂದ ಬಿಡಲಾಗಿದ್ದ ನೀರು ಮಾಂಜರಿ ಬ್ರಿಜ್ ಸೇರುತ್ತಿದ್ದಂತೆ ನದಿ ತೀರದ ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.
ಇದರಿಂದ ನಾಗರಿಕರು ಹಾಗೂ ಜಾನುವಾರುಗಳ ಕುಡಿಯುವ ನೀರು ದೊರೆತಿದ್ದು ಇದಕ್ಕೆ ಮುಂದಾಗಿರುವ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ, ರೈತರು, ನಾಗರಿಕರು ಕೃತಜ್ಞತೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ದಿಲೀಪ ಪವಾರ, ಮೋಹನ ಲೋಕರೆ, ಸಂತೋಷಕುಮಾರ ಕಾಮತ, ಮನೋಜ ಖೀಚಡೇ,,ಅಮರ ಬೊರಗಾಂವೆ, ಅಣ್ಣಾಸಾ, ಚೌಗಲೆ, ಅಣ್ಣಾಸಾಹೇಬ ಪವಾರ, ರಮೇಶ ಮಾನೆ, ಮಹಾದೇವ ಲೋಕರೇ, ಹನುಮಂತ ಮೀರಜೆ, ರಮೇಶ ಕುಡಚೆ, ಮಾಂಜರಿ ಯಡೂರ, ಇಂಗಳಿ, ಚಂದೂರ, ಮಡಿವಾಳ, ಕುಸನಾಳ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ