Kannada NewsKarnataka NewsLatest

*ಆತ್ಮಹತ್ಯೆ ತಡೆಗೆ ವಿ ಕೇರ್ ಹೆಲ್ಪ್ ಲೈನ್ ಆರಂಭ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು, ಯುವಜನತೆ, ಮಹಿಳೆಯರು ಒಂದಲ್ಲ ಒಂದು ಕಾರಣಕ್ಕೆ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೆಲ್ಪ್ ಲೈನ್ ಆರಂಭಿಸಿದೆ.

ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ‘ವಿ ಕೇರ್’ ಎಂಬ ಆತ್ಮಹತ್ಯಾ ತಡೆ ಸಹಾಯವಾಣಿಯನ್ನು ಆರಂಭಿಸಿದ್ದಾರೆ.

Related Articles

ಸಹಾಯವಾಣಿ ಸಂಖ್ಯೆ: 8277946600ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಕನ್ನಡ ಮಾತ್ರವಲ್ಲದೇ ಹಿಂದಿ, ಇಂಗ್ಲೀಷ್ ಭಾಷೆಯಳಲ್ಲಿಯೂ ಮಾತನಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಬಹುಭಾಷಾ ಸಹಾಯವಾಣಿಯಿಂದಾಗಿ ಬೇರೆ ಬೇರೆ ರಾಜ್ಯದವರು ಬೆಂಗಳೂರಿನಲ್ಲಿ ವಾಸವಾಗುತ್ತಿರುವುದರಿಂದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದಾಗಿದೆ.

Home add -Advt

ಈ ಬಗ್ಗೆ ಮಾತನಾಡಿರುವ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ, ಸಂಕಷ್ಟದಲ್ಲಿರುವವರು ಅಥವಾ ಅವರ ಸಂಬಂಧಿಕರು ಅಥವಾ ಪೋಷಕರು ಸಹಾಯಕ್ಕಾಗಿ 8277946600 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

Related Articles

Back to top button