ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಫೆಬ್ರವರಿ 6 ರ ರಸ್ತಾರೋಕೋ ಚಳುವಳಿಗೆ ಭಾರತೀಯ ಕಿಸಾನ್ ಸಂಘ ಬೆಂಬಲಿಸುವುದಿಲ್ಲ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಾಸರಘಟ್ಟ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮ್ಮ ನಿರ್ಧಾರಕ್ಕೆ ಕರಣಗಳನ್ನೂ ಪಟ್ಟಿ ಮಾಡಿದ್ದಾರೆ. ಅಂತರಾಷ್ಟ್ರೀಯ ಸೆಲೆಬ್ರಿಟಿ ಗಳು ಹೋರಾಟವನ್ನು ಬೆಂಬಲಿಸುತ್ತಿದ್ದು, ಇದು ವಿದೇಶದ ಹುನ್ನಾರ ಸಹ ಆಗಿರಬಹುದು ಎನ್ನುವ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಅವರು ನೀಡಿರುವ ಕಾರಣಗಳು…
1. ಭಾರತೀಯ ಕಿಸಾನ್ ಸಂಘ ರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಸಂಘಟನೆ ಯಾಗಿದ್ದು, ರಾಷ್ಟ್ರ ದ ಹಿತಾಸಕ್ತಿಗೆ ಅನುಗುಣವಾಗಿ ರೈತರ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಕೆ ಮಾಡುತ್ತಾ ಬಂದಿದೆ.
2.ಜ 26 ರಂದು ರಾಷ್ಟ್ರ ಕ್ಕೆ ಹಾಗೂ ರಾಷ್ಟ್ರ ಧ್ವಜಕ್ಕೆ ಅವಮಾನಿಸಿ ತಲವಾರಿನಿಂದ ಹಿಂಸೆ ಮಾಡಿದ ಈ ಸಂಘಟನೆ ಗಳು ಇದೇ 6ರಂದು ಮತ್ತೆ ಹಿಂಸೆಗಿಳಿಯುವ ಸಾಧ್ಯತೆ ಇದೆ.
3. ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ಇವರನ್ನು ಬೆಂಬಲಿಸುತ್ತಿದ್ದು, ಇದು ವಿದೇಶದ ಹುನ್ನಾರ ಸಹ ಆಗಿರಬಹುದು.
4. ಇತ್ತಲಾಗಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ರೈತರ ಚಳುವಳಿಯನ್ನು ದುರುಪಯೋಗ ಮಾಡಿ ದಾರಿತಪ್ಪಿಸುತ್ತಿದ್ದು, ಇತರ ರೈತ ಸಂಘಟನೆಗಳು ಸ್ವತಂತ್ರ ತೀರ್ಮಾನ ತೆಗೆದುಕೊಳ್ಳಲಾಗದೆ ರಾಜಕೀಯ ಪಕ್ಷಗಳ ಹಿಡಿತಕ್ಕೆ ಸಿಲುಕಿ ನರಳುತ್ತಿವೆ
ಭಾರತೀಯ ಕಿಸಾನ್ ಸಂಘ ಪಕ್ಷಾತೀತವಾಗಿದೆ.
4. ಕಾಯ್ದೆಯಲ್ಲಿನ ಲೋಪ ದೋಷಗಳನ್ನು ಈಗಾಗಲೇ ಗುರುತಿಸಿ ಸರಕಾರಕ್ಕೆ ಮನವರಿಕೆ ಮಾಡಿದ್ದೇವೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಚರ್ಚೆ ಮಾಡಿ ಸರಿಪಡಿಸಲು ಒಪ್ಪಿದೆ.
5. ಕಾಯ್ದೆಗೆ ತಿದ್ದುಪಡಿ ತರಲು ಈಗ ಪ್ರತಿಭಟನೆ ಮಾಡುತ್ತಿರುವ ರೈತ ಸಂಘಟನೆಗಳೂ ಸೇರಿದಂತೆ ಭಾರತೀಯ ಕಿಸಾನ್ ಸಂಘ 2004 ರಿಂದಲೂ ಹೋರಾಟ ಮಾಡುತ್ತಾ ಎಲ್ಲಾ ರಾಜಕೀಯ ಪಕ್ಷಗಳ ಮೇಲೂ ಒತ್ತಡ ತಂದಿದ್ದೇವೆ.
6. ಈಗ ಕಾಯ್ದೆಯನ್ನೇ ಹಿಂಪಡೆಯಿರಿ ಎಂಬುದರ ಹಿಂದೆ ಯಾವ ದೇಶಗಳ ಕೈವಾಡವಿದೆ ಅಥವಾ ಅಂತರಾಷ್ಟ್ರೀಯ ಹಿತಾಸಕ್ತಿ ಕೆಲಸ ಮಾಡುತ್ತಿದೆ ಎಂಬುದು ದೇಶದ ಪ್ರಜ್ಞಾವಂತರಿಗೆ ಗೊತ್ತಿದೆ
ರೈತರಾದ ನಮಗೂ ಗೊತ್ತಿದೆ
ಆದ್ದರಿಂದ ಈ ಅಂತರಾಷ್ಟ್ರೀಯ ಹಿತಾಸಕ್ತಿಯ ಕೈಗೊಂಬೆಗಳಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಡಲು ನಾವು ಸಿದ್ದರಿಲ್ಲ
ನಿಜವಾಗಿ ಕಾಯ್ದೆಯಲ್ಲಿನ ದೋಷಗಳಿಂದ ರೈತರಿಗೆ ತೊಂದರೆ ಆಗಿರುವುದನ್ನು ಈ ನರೇಂದ್ರ ಮೋದಿ* ನೇತೃತ್ವದ BJP ಸರ್ಕಾರ ಸರಿಪಡಿಸದೇ ಹೋದರೆ ಮುಂದಿನ ಚುನಾವಣೆಯಲ್ಲಿ ರೈತ ಸಮುದಾಯವೆಲ್ಲಾ ಸೇರಿ BJP ಪಕ್ಷವನ್ನು ಸೋಲಿಸುವುದರ ಮೂಲಕ ಅವರ ಅಧಿಕಾರವನ್ನು ಕಿತ್ತುಕೊಳ್ಳೋಣ.
ಅದನ್ನು ಬಿಟ್ಟು ನಮ್ಮ ದೇಶದ ಸಮಸ್ಯೆಯನ್ನು ಬೇರೆ ದೇಶದವರ ಬೆಂಬಲ ಪಡೆದು ಅವರ ಸಹಾಯದಿಂದ ಹೋರಾಟ ಮಾಡಿ ನಂತರ ದೇಶವನ್ನು ಅವರ ವಶಕ್ಕೆ ಕೊಡಲಾಗದು.
ಇದು ಭಾರತೀಯ ಕಿಸಾನ್ ಸಂಘದ ನಿಲುವು ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ