
ಪ್ರಗತಿ ವಾಹಿನಿ ಸುದ್ದಿ ರಾಯಚೂರು –
ದಿನಕ್ಕೆ ೧೨ ತಾಸು ಕೆಲಸ ಮಾಡುವಂತೆ ಸರಕಾರ ವಿಧಿಸಿರುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಯಚೂರಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಿಬ್ಬಂದಿ, ಹಾಸಿಗೆ, ದಿಂಬು ಹಿಡಿದು ಕುಟುಂಬ ಸಮೇತ ಕಚೇರಿಗೇ ಬಂದು ಮಲಗುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮೊದಲು ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಇದ್ದ ಕೆಲಸದ ಅವಧಿಯನ್ನು ಇತ್ತೀಚೆಗೆ ಬೆಳಗ್ಗೆ ೯ರಿಂದ ಸಂಜೆ ೭ರವರೆಗೆ ವಿಸ್ತರಿಸಲಾಗಿತ್ತು. ಬಳಿಕ ಸಧ್ಯ ಮತ್ತೊಮ್ಮೆ ಕೆಲಸದ ಅವಧಿಯನ್ನು ಹೆಚ್ಚಿಸಲಾಗಿದ್ದು ಬೆಳಗ್ಗೆ ೮ರಿಂದ ಸಂಜೆ ೮ರವರೆಗೆ ಒಟ್ಟು ೧೨ ತಾಸು ಕೆಲಸ ಮಾಡುವ ಆದೇಶ ಹೊರಡಿಸಲಾಗಿದೆ.
ನಮಗೂ ಕುಟುಂಬ ಇದೆ, ಹೆಂಡತಿ ಮಕ್ಕಳಿದ್ದಾರೆ. ಹೀಗೆ ದಿನದ ೧೨ ತಾಸು ಕಚೇರಿಯಲ್ಲಿ ಕೆಲಸ ಮಾಡುವುದಾದರೆ ನಮಗೂ ವಯಕ್ತಿಕ ಬದುಕಿಲ್ಲವೇ ಎಂದು ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ ಜಾಗೃತಿ ಕಿಟ್‌ನಲ್ಲಿರುವ ಆ ವಸ್ತು !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ