Kannada NewsKarnataka NewsPolitics

*ಹೊಸ ವರ್ಷ ಆಚರಿಸಿದರೆ ಹೊಕ್ಕಿ ಹೊಡೆಯುತ್ತೇವೆ: ಪ್ರಮೋದ ಮುತಾಲಿಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನದ ಹಿನ್ನೆಲೆಯಲ್ಲಿ 26ರಿಂದ ಜ.1ರವರೆಗೆ ಕೇಂದ್ರ, ರಾಜ್ಯ ಸರ್ಕಾರ ಶೋಕಾಚರಣೆ ಘೋಷಿಸಿದೆ. ಹೀಗಿರುವಾಗ ಹೊಸ ವರ್ಷ ಹೇಗೆ ಆಚರಣೆ ಮಾಡುತ್ತೀರಿ. ಆಚರಿಸಿದರೆ ಹೊಕ್ಕಿ ಹಿಂದೂ ಸಂಘಟಕರು ಹೊಡೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ

ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚಾಂಗ ಪ್ರಕಾರ, ವೈಜ್ಞಾನಿಕವಾಗಿ ಯುಗಾದಿ ಅತ್ಯಂತ ಸಮರ್ಪಕವಾದ ಹೊಸ ಹಬ್ಬವಾಗಿದೆ. ಕ್ರಿಶ್ಚಿಯನ್ನುರು, ಬ್ರಿಟೀಷರು ಹಾಕಿರುವ ಈ ಪರಂಪರೆಯುವ ಜ,1ರಂದು ಹೊಸ ವರ್ಷ ಎಂದು ಹೇಳುವುದು ವೈಜ್ಞಾನಿಕವಲ್ಲ. ಇದನ್ನು ಆಚರಿಸುವುದು ಖಂಡನೀಯ, ಈ ಆಚರಣೆಯನ್ನು ನಿಲ್ಲಿಸಬೇಕು. ಕೂಡಲೇ ಈ ಆಚರಣೆಗೆ ಸರ್ಕಾರ ಬ್ರೇಕ್ ಹಾಕಬೇಕು. ಇಲ್ಲವಾದಲ್ಲಿ ನಾವೇ ವಿರೋಧಿ ಮುಂದಾಗಿ ನಿಲ್ಲಿಸುತ್ತೇವೆ ಎಂದರು.

ಇನ್ನು ಹೊಸ ವರ್ಷವನ್ನು ಡಿ.31ರ ರಾತ್ರಿ 12 ಗಂಟೆಗೆ ಸ್ವಾಗತ ಮಾಡುತ್ತಾರೆ. ಕುಡಿದು, ಕುಪ್ಪಳಿ ಡ್ರಗ್, ರೇಪ್, ಮರ್ಡರ್, ಹೊಡೆದಾಟಗಳು, ಹುಡುಗಿಯರನ್ನು ಕೆಡಿಸುವುದು ಈ ರೀತಿ ಅಶ್ಲೀಲ, ಅಸಭ್ಯವಾಗಿ ವೆಲ್‌ಕಮ್ ಮಾಡುವುದು ನಿಲ್ಲಿಸಲೇಬೇಕು. ಈ ಆಚರಣೆ ವಿರುದ್ಧ ನಾವು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ನ್ಯೂ ಇಯರ್ ಆಚರಣೆ ನಮ್ಮದಲ್ಲ ಯುಗಾದಿ ನಮ್ಮ ಹೊಸ ವರ್ಷ. ನ್ಯೂ ಇಯರ್ ಆಚರಿಸುವವರನ್ನು ನಾವು ವಿರೋಧಿಸುತ್ತೇವೆ ಎಂದು ಮುತಾಲಿಕ್ ಪುನರುಚ್ಚರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button