Belagavi NewsBelgaum NewsKannada NewsKarnataka NewsPolitics
*ಡಿನ್ನರ್ ಗೆ ಕರೆದರೆ ಎಲ್ಲರೂ ಹೋಗೆ ಹೋಗುತ್ತೇವೆ: ಯತೀಂದ್ರ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಪಾರ್ಟಿ ವಿಚಾರಕ್ಕೆ ಸಿಎಂ ಪುತ್ರ ಸತೀಶ್ ಯತೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲರೂ ಡಿನ್ನರ್ ಕರೆಯುತ್ತಿದ್ದಾರೆ. ದಿನೇಶ್ ಗುಂಡೂರಾವ್ ಅವರು ಮೊನ್ನೆ ಕರೆದಿದ್ದರು ಅಲ್ಲಿಗೆ ಹೋಗಿದ್ದೆವು. ಸಿಎಲ್ ಪಿ ಮೀಟಿಂಗ್ ಕರೆಯಲಾಗಿತ್ತು ಅಲ್ಲಿಯೂ ಹೋಗಿದ್ದೆವು. ಮಿನಿಸ್ಟರ್ ಡಿನ್ನರ್ ಪಾರ್ಟಿ ಕರೆದರೆ ಹೋಗೆ ಹೋಗುತ್ತೇವೆ ಎಂದು ಯತೀಂದ್ರ ಹೇಳಿದರು.
ಸಿಎಂ ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅದನ್ನು ಅವರು ಮೊದಲಿಂದಲೂ ಹೇಳುತ್ತಿದ್ದಾರೆ. ಪ್ರತಿಪಕ್ಷಗಳ ಟೀಕೆಯಲ್ಲಿ ಹುರುಳಿಲ್ಲ. ಸುಮ್ಮನೇ ಮಾಡುತ್ತಿರುತ್ತಾರೆ. ಅದಕ್ಕೆಲ್ಲ ಉತ್ತರ ಹೇಳೋಕಾಗಲ್ಲ. ಅವರು ಹೇಳೊದು ಹೇಳುತ್ತಾನೇ ಇತ್ತಾರೆ ಎಂದರು.




