ಮುರುಗೇಶ ನಿರಾಣಿ ದಾನ ಮಾಡಿದ ವಸ್ತುಗಳನ್ನು ಅವರಿಗೇ ವಾಪಸ್ ಮಾಡುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಚಿವ ಮುರುಗೇಶ ನಿರಾಣಿಯ ಬೆಂಬಲಿಗರಲ್ಲಿ ಕೆಲವರು ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ನಿರಾಣಿ ಏನೇನೋ ದಾನ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದು ಇದರಿಂದ ನನಗೆ ಮತ್ತು ಭಕ್ತರ ಮನಸ್ಸಿಗೆ ಅಪಾರ ನೋವಾಗಿದೆ. ಹಾಗಾಗಿ ನಿರಾಣಿಯವರು ನೀಡಿದ ದಾನದ ವಸ್ತುಗಳನ್ನು ಅವರಿಗೇ ವಾಪಸ್ ಮಾಡಲಾಗುತ್ತದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬುಧವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಪಂಚಮಸಾಲಿ ೨ ಎ ಮೀಸಲಾತಿ ಹೋರಾಟದ ಮುಂದಿನ ಪ್ರಕ್ರಿಯೆಗಳ ಸಲುವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ರಾಜ್ಯ ಕಾರ್ಯಕಾರಿಣಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಚಿವ ಮುರಗೇಶ ನಿರಾಣಿಯವರು ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ದಾನದ ರೂಪದಲ್ಲಿ ವಸ್ತುಗಳನ್ನು ನೀಡಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಪೀಠಕ್ಕೆ ಯಾರೇ ಏನನ್ನೇ ನೀಡಿದ್ದರೂ ಅದು ಸಮಾಜದ ಕಾರ್ಯಗಳಿಗಾಗಿ ವಿನಿಯೋಗಿಸಲಾಗುತ್ತದೆ. ದಾನ ನೀಡಿದ್ದರೂ ಎಡಗೈಯ್ಯಲ್ಲಿ ನೀಡಿದ್ದು ಬಲಗೈಗೆ ಗೊತ್ತಾಗಬಾರದು ಎಂಬ ಸಂಪ್ರದಾಯವಿದೆ. ಆದರೆ ದಾನ ನೀಡಿದ್ದನ್ನು ಲೇವಡಿ ಮಾಡುವ ರೀತಿಯಲ್ಲಿ ಸಂದೇಶ ಬಿತ್ತರಿಸಲಾಗುತ್ತಿದೆ.
ಇದನ್ನು ಮುರುಗೇಶ ಮುರುಗೇಶ ನಿರಾಣಿಯವರು ಖಂಡಿಸುತ್ತಿಲ್ಲ. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ. ನಾನು ಸಮಾಜದ ಋಣದಲ್ಲಿ ಇರಲು ಬಯಸುತ್ತೇನೆ. ಯಾವುದೇ ಒಬ್ಬ ವ್ಯಕ್ತಿಯ ಋಣದಲ್ಲಿ ಇರಲು ಬಯಸುವುದಿಲ್ಲ. ನಿರಾಣಿಯವರು ಏನು ಕೊಟ್ಟಿದ್ದಾರೆ ಎಂಬುದು ನನಗೆ ನೆನಪಿಲ್ಲ. ಸ್ವತಃ ನಿರಾಣಿಯವರೇ ತಾವು ಪೀಠಕ್ಕೆ ಏನೇನು ದಾನ ನೀಡಿದ್ದಾರೆಂಬುದನ್ನು ಹೇಳಿದರೆ ಅದನ್ನು ಅವರಿಗೆ ಮರಳಿಸುತ್ತೇವೆ ಎಂದು ಹೇಳಿದರು.
ಅಲ್ಲದೇ ರಾಜ್ಯ ಬಜೆಟ್‌ಗೂ ಪೂರ್ವದಲ್ಲಿ ಪಂಚಮಸಾಲಿ ಸಮಾಜವನ್ನು ೨ ಎ ಮೀಸಲಾತಿಗೆ ಸೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲೇ ಭರವಸೆ ನೀಡಿದ್ದು ಅದನ್ನು ಈಡೇರಿಸುವಂತೆ ಹಕ್ಕೊತ್ತಾಯ ಮಂಡಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಅಲ್ಲದೇ ಪಂಚಮಸಾಲಿ ಸಮಾಜವನ್ನು ಒಡೆಯುವವರನ್ನು ದೂರವಿಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪಂಚಮಸಾಲಿ ಮೂರು ಬಿಟ್ಟು ನೂರು ಪೀಠ ಸ್ಥಾಪಿಸಿದರೂ ಏನೂ ವ್ಯತ್ಯಾಸವಾಗಲ್ಲ: ಯತ್ನಾಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ