Latest

ಹಿರೋಯಿನ್ ಮಾಡುತ್ತೇನೆಂದು ಯುವತಿ ಬೆನ್ನುಬಿದ್ದಿದ್ದ ಯುವಕ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೆಬ್ ಸಿರೀಸ್ ಹೀರೋಯಿನ್ ಆಗು ಎಂದು ಯುವತಿಗೆ ಕಾಟಕೊಡುತ್ತಿದ್ದ ನಕಲಿ ಡೈರೆಕ್ಟರ್ ಓರ್ವನನ್ನು ಬೆಂಗಳೂರು ಪರಪ್ಪನ ಅಗ್ರಹಾರ ಠಾಣೆ ಪೊಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮನೀಶ್ ಎಂದು ಗುರುತಿಸಲಾಗಿದೆ. ತಾನು ವೆಬ್ ಸಿರೀಸ್ ಡೈರೆಕ್ಟರ್ ಆಗಿದ್ದು, ವೆಬ್ ಸಿರೀಸ್ ಹಿರೋಯಿನ್ ಮಾಡುತ್ತೇನೆ ತನ್ನ ಆಫರ್ ಒಪ್ಪಿಕೊಳ್ಳುವಂತೆ ತನ್ನದೇ ಏರಿಯಾದ 18 ವರ್ಷದ ಯುವತಿಗೆ ಪ್ರತಿದಿನ ಯುವಕ ಕಿರುಕುಳ ನೀಡುತ್ತಿದ್ದ.

ಯುವಕನ ಕಾಟಕ್ಕೆ ಬೇಸತ್ತ ಯುವತಿ ಕೊನೆಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಅಸಲಿಗೆ ಯುವಕ ಯಾವುದೇ ವೆಬ್ ಸಿರೀಸ್ ಡೈರೆಕ್ಟರ್ ಕೂಡ ಆಗಿರಲಿಲ್ಲ. ಸುಳ್ಳು ಹೇಳಿ ಓಡಾಡುತ್ತಿದ್ದ ಯುವಕ ಮನೀಶ್, ವೆಬ್ ಸೀರೀಸ್ ಹಿರೋಯಿನ್ ಮಾಡುತ್ತೇನೆ ಎಂದು ಯುವತಿ ಬೆನ್ನುಬಿದ್ದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಬೆಳಗಾವಿ: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನಿಗೆ ಧರ್ಮದೇಟು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button