
ಪ್ರಗತಿವಾಹಿನಿ ಸುದ್ದಿ; ಮಧುರೈ: ಇತ್ತೀಚಿನ ದಿನಗಳಲ್ಲಿ ವಿವಾಹ ಸಮಾರಂಭಗಳು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿವೆ. ಅದರಲ್ಲೂ ಕೊರೊನಾ ಕಾರಣದಿಂದಾಗಿ ವಿವಾಹಗಳಲ್ಲಿ ಹಲವು ಬದಲಾವಣೆಗಳಾಗಿರುವುದಂತು ಸುಳ್ಳಲ್ಲ. ಇಲ್ಲೊಂದು ಮದುವೆ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಕ್ಯೂ ಆರ್ ಕೋಡ್ ಹಾಕಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಈ ಮೂಲಕ ವಧು-ವರರಿಗೆ ಉಡುಗೊರೆ ನೀಡ ಬಯಸುವವರು ಹಣದ ರೂಪದಲ್ಲಿ ಖಾತೆಗೆ ವರ್ಗಾಯಿಸುವಂತೆ ಮಾಡಲಾಗಿದೆ. ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿವಾಹ ಸಮಾರಂಭದಲ್ಲಿ 30 ಬಂಧುಗಳು ಕ್ಯೂ ಆರ್ ಕೋಡ್ ಮೂಲಕ ನವ ದಂಪತಿಗಳಿಗೆ ಉಡುಗೊರೆ ಮೊತ್ತವನ್ನು ಗೂಗಲ್ ಪೇ, ಫೋನ್ ಪೇ ಮಾಡಿದ್ದಾರೆ.