
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ.
ಈ ಕುರಿತು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು Z+ ಭದ್ರತಾ ಶ್ರೇಣಿಗೆ ಒಳಪಟ್ಟಿದ್ದರಿಂದ ಅವರು ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡುವುದು ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ನಿಸರ್ಗ ದಾಭಾ, ಕೆಪಿಟಿಸಿಎಲ್ ಹಾಲ್ ಮುಂದಿನ ಸ್ಮಾರ್ಟ್ ಸಿಟಿ ರಸ್ತೆ, ಕೆಎಲ್‌ಇ ಆಸ್ಪತ್ರೆ ರಸ್ತೆ, ವಾಯ್-ಜಂಕ್ಷನ್, ಲಕ್ಷ್ಮೀ ಕಾಂಪ್ಲೇಕ್ಸ್, ಬಾಳಿಗಾ ಚಿಕ್ಕ ಮಕ್ಕಳ ಆಸ್ಪತ್ರೆ ಸದಾಶಿವ ನಗರ, ಬ್ಯಾಂಕ್ ಆಫ್ ಮಹಾರಾಷ್ಟ್ರ, ವಿಶ್ವೇಶ್ವರಯ್ಯ ನಗರ ರಸ್ತೆ, ಸ್ಮಾರ್ಟ್ ಸಿಟಿ ಕಮಾಂಡ್ & ಕಟ್ರೋಲ್ ಸೆಂಟರ್, ಕೃಷ್ಣದೇವರಾಯ (ಕೊಲ್ಹಾಪೂರ) ವೃತ್ತ, ಹಳೆ ಪಿಬಿ (ಎಸ್‌ಪಿ ಕಚೇರಿ) ರಸ್ತೆ, ಆರ್‌ಟಿಓ ಸರ್ಕಲ್, ತ್ರಿವೇಣಿ ಹೊಟೇಲ್ ಕ್ರಾಸ್, ಕಿಲ್ಲಾ ಕೆರೆ ಅಶೋಕ ವೃತ್ತ, ಸರ್ಕಿಟ್ ಹೌಸ್, ಲೇಕವ್ಯೂವ್ ಆಸ್ಪತ್ರೆ ರಸ್ತೆ, ಕನಕದಾಸ ಸರ್ಕಲ್ ಹಾಗೂ ಸಾಂಬ್ರಾ ವಿಮಾನ ನಿಲ್ದಾಣ ರಸ್ತೆ ಈ ಮಾರ್ಗಗಳಲ್ಲಿ ಅತೀಗಣ್ಯ ವ್ಯಕ್ತಿಗಳು ಸಂಚರಿಸುತ್ತಿದ್ದುದರಿಂದ ಭದೃತಾ ದೃಷ್ಟಿಯಿಂದ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಿಕೊಳ್ಳುವಂತೆ ಹಾಗೂ ಈ ಅವಧಿಯಲ್ಲಿ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಎಲ್ಲ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ