Kannada NewsKarnataka News

ಬೆಳಗಾವಿಯಲ್ಲಿ ಬುಧವಾರ ಸಂಚಾರ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಗ್ರಾಮ ಪಂಚಾಯತಿಗಳ ಚುನಾವಣೆಯ ಮತ ಎಣಿಕೆ ಕಾರ್ಯವು  ಬುಧವಾರ ನಗರದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಂದು ಬೆಳಗ್ಗೆ 6 ಗಂಟೆಯಿಂದ ಮತಗಳ ಎಣಿಕೆಯ ಕಾರ್ಯ ಮುಗಿದು, ಮತ ಎಣಿಕೆಗೆ ಆಗಮಿಸಿದ ಅಭ್ಯರ್ಥಿ ಹಾಗೂ ಕಾರ್ಯಕರ್ತರು ನಿರ್ಗಮಿಸುವರೆಗೂ ಮಾರ್ಗ ಬದಲಾವಣೆಯಾಗಲಿದೆ.

 ಚುನಾವಣೆ ಮತ ಎಣಿಕೆ ಕರ್ತವ್ಯದ ಮೇಲಿರುವ ವಾಹನಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಮಾದರಿಯ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.

ಮಾರ್ಗ ಬದಲಾವಣೆ :
1) ಖಾನಾಪುರ ಕಡೆಯಿಂದ ಬೆಳಗಾವಿ ನಗರದ ಮೂಲಕ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಗೋವಾವೇಸ್ ಸರ್ಕಲ್ ಕಡೆಯಿಂದ ಹಾಗೂ ಕಾಂಗ್ರೇಸ್ ರೋಡ್ ಮೂಲಕ ಸಂಚರಿಸುವ ಹಾಗೂ ಕಾಂಗ್ರೇಸ್ ರಸ್ತೆ ಮೂಲಕ ಸಂಚರಿಸುವ ವಾಹನಗಳು, ಮಿಲ್ಟ್ರಿ ಮಹಾದೇವ ಗುಡಿಯಿಂದ ಎಡ ತಿರುವು ಪಡೆದುಕೊಂಡು ಮಿಲ್ಟ್ರಿ ಏರಿಯಾದಲ್ಲಿಂದ ಶೌರ್ಯ ಸರ್ಕಲ್, ಗಾಂಧಿ ಸರ್ಕಲ್ ಮಾರ್ಗದಲ್ಲಿ ಸಂಚರಿಸುವುದು.

Home add -Advt

೨) ಚನ್ನಮ್ಮಾ ಸರ್ಕಲ್ ಕಡೆಯಿಂದ ಖಾನಾಪುರ ಕಡೆಗೆ ಸಂಚಾರಿಸುವ ಎಲ್ಲ ಮಾದರಿಯ ವಾಹನಗಳನ್ನು ಚನ್ನಮ್ಮಾ ಗಣೇಶ ಗುಡಿಯ ಹತ್ತಿರ ಬಲ ತಿರುವು ಪಡೆದುಕೊಂಡು ಬಾಚಿ ಕ್ರಾಸ್ ಮೂಲಕ ಗಾಂಧಿ ಸರ್ಕಲ್, ಶೌರ್ಯ ಸರ್ಕಲ್ ಮಿಲ್ಟ್ರಿ ಏರಿಯಾದಲ್ಲಿಂದ ಮಿಲ್ಟ್ರಿ ಮಹಾದೇವ ಗುಡಿಯಿಂದ ಕಾಂಗ್ರೇಸ್ ರೋಡ್ ಮೂಲಕ ಸಂಚರಿಸಬೇಕು.

ನಿರ್ಭಂಧಿತ ಮಾರ್ಗಗಳು :
೧) ಕಾಲೇಜ ರಸ್ತೆ (ಚನ್ನಮ್ಮಾ ವೃತ್ತ ಗಣೇಶ ಗುಡಿ ಹಿಂಭಾಗದಿಂದ)
೨) ಮಂಗಸೂಳಿ ಖೂಟದಿಂದ ಖಾನಾಪುರ ರಸ್ತೆ ಫಿಶ್ ಮಾರ್ಕೇಟ್ ಕಡೆಗೆ
೩) ಇಂಡೆಪೆಂಟ್ ರಸ್ತೆ, ಸೇಂಟ್ ಪಾಲ್ ಸ್ಕೂಲ್ ಕ್ರಾಸ್, ಗೌಳಿ ಗಲ್ಲಿ ಕ್ರಾಸ್, ಹೈ ಸ್ಟೀಟ್ ಕ್ರಾಸ್.
೪) ಚಿಕ್ಕು ಬಗಿಜಾ ರಸ್ತೆ, (ಗ್ಲೋಬ್ ಸರ್ಕಲ್ ಕಡೆಗೆ ಸಾಗಿದ ರಸ್ತೆ )
೫) ಗೋಗಟೆ ಸರ್ಕಲ್ ದಿಂದ (ಖಾನಾಪುರ ರಸ್ತೆ) ಗ್ಲೋಬ್ ಸರ್ಕಲ್ ಕಡೆಗೆ
೬) ಕಾಂಗ್ರೇಸ್ ರಸ್ತೆ ಮಿಲ್ಟ್ರಿ ಮಹಾದೇವ ಗುಡಿ ಕ್ರಾಸ್.
೭) ಅಟಲ್ ಬಿಹಾರಿ ವಾಜಪೇಯಿ ರಸ್ತೆ (ಖಾನಾಪುರ ರಸ್ತೆ) ಗೋವಾವೇಸ್ ಸರ್ಕಲ್‌ದಿಂದ ಗೋಗಟೆ ಸರ್ಕಲ್ ಕಡೆಗೆ (ಗೂಡಶೇಡ್ ರಸ್ತೆ ಕ್ರಾಸ್ )
೮) ರೇಲ್ವೆ ಸೇಷನ್ ರಸ್ತೆ, ಶನಿಮಂದಿರ ಹತ್ತಿರ ಪೋಸ್ಟ್ ಮೆನ್ ಸರ್ಕಲ್ ಹತ್ತಿರ

ಚುನಾವಣೆ ಮತ ಎಣಿಕೆ ಕಾಲಕ್ಕೆ ಅಭ್ಯರ್ಥಿಗಳ ಹಾಗೂ ಏಜೆಂಟರುಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಅಸದಖಾನಾ ದರ್ಗಾದ ಖುಲ್ಲಾ ಜಾಗದಲ್ಲಿ ಮಾಡಲಾಗಿದೆ.

Related Articles

Back to top button