ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ನಂತರ ಟಿಎಂಸಿಯ ಗೂಂಡಾ ಕಾರ್ಯಕರ್ತರಿಂದ ಬಿಜೆಪಿ ಕಛೇರಿಗಳನ್ನು ಧ್ವಂಸ ಮಾಡಿದ್ದಲ್ಲದೆ 11 ಬಿಜೆಪಿ ಕಾರ್ಯಕರ್ತರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿರುವ ಘಟನೆ ಖಂಡಿಸಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದಿಂದ ಚಿಕ್ಕೋಡಿಯ ಬಸವೇಶ್ವರ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಟಿಎಂಸಿ ಕಾರ್ಯಕರ್ತರ ವರ್ತನೆ ಪ್ರಜಾಪ್ರಭುತ್ವ ದ ವಿರೋಧಿಯಾಗಿದ್ದು ಈ ರೀತಿ ದಂಗೆ ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿರುವ ಟಿಎಂಸಿ ಸರಕಾರವನ್ಮು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರೆಲ್ಲರು ಕೂಡ ಮಾಸ್ಕ ಹಾಕಿದ್ದಲ್ಲದೆ ಸಾಮಾಜಿಕ ಅಂತರವನ್ನು ಕೂಡ ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯಮಾವಳಿ ಗಳನ್ನು ಪಾಲಿಸಲಾಯಿತು.
ಪ್ರತಿಭಟನೆಯ ಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶಾಂಭವಿ ಅಶ್ವತಪುರ, ಪದಾಧಿಕಾರಿಗಳಾದ ಶಕುಂತಲಾ ಡೋಣವಾಡೆ, ಹರೀಶ ಚೌಗಲಾ, ವಿಶ್ವನಾಥ ಕಾಮಗೌಡ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಚಾಮರಾಜನಗರ ದುರಂತ; ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ