Kannada NewsLatestNational

*ಇಬ್ಬರು ಯೋಧರ ಗಲಾಟೆ ಕೊಲೆಯಲ್ಲಿ ಅಂತ್ಯ: ಕರ್ತವ್ಯನಿರತ ಸೈನಿಕನನ್ನೇ ಗುಂಡಿಕ್ಕಿ ಕೊಂದ ಸಹೋದ್ಯೋಗಿ*

ಪ್ರಗತಿವಾಹಿನಿ ಸುದ್ದಿ: ಕರ್ತವ್ಯನಿರತ ಬಿಎಸ್ ಎಫ್ ಯೋಧರೊಬ್ಬರನ್ನು ಸಹೋದ್ಯೋಗಿಯೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Related Articles

ಇಲ್ಲಿನ ಮುರ್ಷಿದಾಬಾದ್ ಎಂಬಲ್ಲಿ ಇಬ್ಬರು ಯೋಧರ ನಡುವೆ ಗಲಾಟೆ ನಡೆದು, ಜಗಳ ತಾರಕಕ್ಕೇರಿದ್ದು, ಎಸ್.ಕೆ.ಮಿಶ್ರಾ ಎಂಬಾತ ತನ್ನ ಸಹೋದ್ಯೋಗಿ ಯೋಧ ರತನ್ ಲಾಲ್ ಸಿಂಗ್ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ತನಿಖೆ ಮಡೆಸಿದ್ದಾರೆ.

Home add -Advt

Related Articles

Back to top button