Kannada NewsKarnataka NewsNationalPolitics

*ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎಸ್.ಪಿ.ಪಿ ಬದಲಾವಣೆ ಬಗ್ಗೆ ಗೃಹ ಸಚಿವ ಪರಮೇಶ್ವರ ಹೇಳಿದ್ದೇನು…?*

ಪ್ರಗತಿವಾಹಿನಿ ಸುದ್ದಿ: ಯಾವ ಪ್ರಭಾವ, ಒತ್ತಡಕ್ಕೂ ಮಣಿಯದೆ ತನಿಖೆ ನಡೆಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಎಸ್.ಪಿ.ಪಿ ಅವರನ್ನು ಬದಲಿಸುವ ಅವಶ್ಯಕತೆ ಇದೆ ಎಂದಾದರೆ ಬದಲಿಸುತ್ತೇವೆ ಎಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರದ ಪರ ವಕಾಲತ್ತು ವಹಿಸಿರುವ ಎಸ್.ಪಿ.ಪಿ ಅವರನ್ನು ಬದಲಾವಣೆ ಮಾಡುವ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೇಣುಕಾಸ್ವಾಮಿ ಪ್ರಕರಣವನ್ನು ದುರ್ಬಲಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಯಾವ ಪ್ರಭಾವ, ಒತ್ತಡಕ್ಕೂ ಮಣಿಯದೆ ತನಿಖೆ ನಡೆಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಎಸ್.ಪಿ.ಪಿ ಅವರನ್ನು ಬದಲಿಸುವ ಅವಶ್ಯಕತೆ ಇದೆ ಎಂದಾದರೆ ಬದಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಸರ್ಕಾರ ಸುಮ್ಮನೆ ಯಾರನ್ನೂ ಬದಲಿಸುವುದಿಲ್ಲ. ದರ್ಶನ್ ಅವರ ಫಾರ್ಮ್ ಹೌಸ್ ಮ್ಯಾನೇಜರ್ ಮಲ್ಲಿಕಾರ್ಜುನ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಈಗಷ್ಟೇ ಬೆಳಕಿಗೆ ಬಂದಿದ್ದು, ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆ ಪ್ರಕರಣದ ಬಗ್ಗೆಯೂ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.

ಇನ್ನು ತೈಲ ಬೆಲೆ ಹೆಚ್ಚಳ ಖಂಡಿಸಿ ಬಿಜೆಪಿ ನಾಯಕರು ನಾಳೆಯೂ ಪ್ರತಿಭಟನೆ ನಡೆಸಲಿರುವ ಕುರಿತು ಮಾತನಾಡಿದ ಸಚಿವರು, ಪ್ರತಿಭಟನೆ ಮಾಡಲಿ ಬೇಡ ಎನ್ನಲ್ಲ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಆ ಹಕ್ಕಿದೆ. ಆದರೆ ಜನರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಿತಿ ಮೀರಿದರೆ ಲಾಠಿ ಚಾರ್ಜ್ ಕೂಡ ಮಾಡುತ್ತೇವೆಂದು ಎಚ್ಚರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button