ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿ ರಾಜ್ಯಸಭೆಗೆ ಇದೇ 19ರಂದು ನಡೆಯಲಿರುವ ಚುನಾವಣೆಗೆ ರಾಜ್ಯದಿಂದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಇದು ಜನಸಾಮಾನ್ಯರಿಗಷ್ಟೇ ಅಲ್ಲ, ಮುಖಂಡರಿಗೂ, ಕೊನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೂ ಅಚ್ಛರಿ ತಂದಿದೆ. ಡಾ.ಪ್ರಭಾಕರ ಕೋರೆ, ಉಮೇಶ ಕತ್ತಿ, ವಿಜಯ ಸಂಕೇಶ್ವರ, ಪ್ರಕಾಶ ಶೆಟ್ಟಿ, ಕೆ.ವಿ.ಕಾಮತ್ ಅವರಂತಹ ಘಟಾನುಘಟಿಗಳ ಮಧ್ಯೆ ಈರಣ್ಣ ಕಡಾಡಿ, ಅಶೋಕ ಗಸ್ತಿ ಅಂತವರು ಆಯ್ಕೆಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.
ವಿಶೇಷವೆಂದರೆ, ಬೆಳಗಾವಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ಹಾಲಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ತಾವೇ ತಮಗೆ ರಾಜ್ಯಸಭೆಗೆ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಕಾರಣವೆಂದರೆ ಅವರು ರಾಜ್ಯಸಭೆಗೆ ಟಿಕೆಟ್ ಕೇಳೇ ಇಲ್ಲವಂತೆ.
ಭಾನುವಾರ ರಾತ್ರಿ 11 ಗಂಟೆಗೆ ಈರಣ್ಣ ಕಡಾಡಿ ಪ್ರಗತಿವಾಹಿನಿ ಜೊತೆ ಮಾತನಾಡಿದ್ದರು. ರಾಜ್ಯಸಭೆಗೆ ರಾಜ್ಯದಿಂದ ಯಾರನ್ನು ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ, ನಾನು ವಿಧಾನಪರಿಷತ್ತಿಗೆ ಟಿಕೆಟ್ ಕೇಳಿದ್ದೇನೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇನೆ. ಸಮಾಜ ಸೇವಕರೊಬ್ಬರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡುವುದಕ್ಕೆ ಅವಕಾಶವಿದೆ. ಅದರಲ್ಲಿ ನನ್ನ ಹೆಸರನ್ನು ಪರಿಗಣಿಸುವಂತೆ ಕೇಳಿದ್ದೇನೆ ಎಂದು ಕಡಾಡಿ ಹೇಳಿದ್ದರು.
ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯನನ್ನಾಗಿ ಮಾಡುವಾಗ, ಅಧ್ಯಕ್ಷನನ್ನಾಗಿ ಮಾಡುವಾಗ ಪಕ್ಷವೇ ಕರೆದು ನನಗೆ ಅವಕಾಶ ಕೊಟ್ಟಿತ್ತು. ಹಾಗಾಗಿ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಇಂದಲ್ಲ ನಾಳೆ ಅವಕಾಶ ಕೊಡುತ್ತದೆ ಎನ್ನುವ ವಿಶ್ವಾಸವಿದೆ. ನಾವು ತಾಳ್ಮೆಯಿಂದ ಕಾಯಬೇಕಷ್ಟೆ ಎಂದೂ ಕಡಾಡಿ ಹೇಳಿದ್ದರು.
ಇಂದು ಬೆಳಗ್ಗೆ ಕಡಾಡಿ ಆಯ್ಕೆಯಾಗಿರುವ ಕುರಿತು ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷರು ಕರೆ ಮಾಡಿ ತಿಳಿಸಿದಾಗ ಕಡಾಡಿ ನಂಬಿರಲಿಲ್ಲಂತೆ. ಇದು ಫೇಕ್ ನ್ಯೂಸ್ ಇರಬೇಕು ಎಂದರಂತೆ. ನಂತರ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೊಬ್ಬರು ಕರೆ ಮಾಡಿ ತಿಳಿಸಿದಾಗ ಕಡಾಡಿ ನಂಬಬೇಕಾಯಿತು. ಒಟ್ಟಾರೆ ನಿರೀಕ್ಷೆಯನ್ನೇ ಮಾಡಿರದ ರಾಜ್ಯಸಭೆ ಬಾಗಿಲು ಕಡಾಡಿ ಪಾಲಿಗೆ ತೆರೆದುಕೊಂಡಿದೆ.
ರಾಜ್ಯದಿಂದ ನಾಲ್ವರು ರಾಜ್ಯಸಭೆ ಪ್ರವೇಶಿಸಬೇಕಿದ್ದು, ಕಣಕ್ಕಿಳಿಯುತ್ತಿರುವವರೂ ನಾಲ್ವರು ಮಾತ್ರವಾಗಿರುವುದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.
ಈರಣ್ಣ ಕಡಾಡಿ ಪರಿಚಯ
ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಕುಟುಂಬದಲ್ಲಿ 01-06-1966ರಂದು ಜನಿಸಿದ ಈರಣ್ಣ ಕಡಾಡಿ, 1989 ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.
ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭ ಮಾಡಿದ್ದಾರೆ.
ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಈರಣ್ಣ ಕಡಾಡಿಯವರು
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದರು. 1994 ರಲ್ಲಿ ಅರಭಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಮಾಜಿ ಸಚಿವ ವ್ಹಿ.ಎಸ್.ಕೌಜಲಗಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.
2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲಿನಿಂದಲೂ ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ, ಸದ್ಯ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಪ್ಪಟ ಗ್ರಾಮೀಣ, ಸರಳ ವ್ಯಕ್ತಿತ್ವದ ಕಡಾಡಿ, ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದಿದ್ದಲ್ಲದೆ, ಪ್ರತಿ ಕಾರ್ಯಕರ್ತರನ್ನೂ ಹೆಸರು ಹೇಳಿ ಮಾತನಾಡುವ ಸೌಜನ್ಯತೆ ಮತ್ತು ಸರಳತೆ ಹೊಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ