Belagavi NewsBelgaum NewsPolitics

* ಹೈಕಮಾಂಡ್ ಏನು ಹೇಳುತ್ತೆ ಅದೇ ಅಂತಿಮ: ಸಚಿವ ಮಹದೇವಪ್ಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಯಾವುದೂ ರಾಜ್ಯದ ವಿಷಯಗಳಲ್ಲ. ಎಲ್ಲಾ ಹೈಕಮಾಂಡ್ ಮುಂದೆ ಇರುವ ವಿಷಯಗಳು. ಪಕ್ಷ, ಹೈಕಮಾಂಡ್ ಏನು ಹೇಳುತ್ತೆ ಅದೇ ಅಂತಿಮ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಹೇಳಿದರು.

ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಬಿರುಕು ಉಂಟು ಮಾಡಲು ಇಂತಹ ಅಂತೆಕಂತೆಗಳನ್ನು ಸೃಷ್ಟಿಸಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ಇಂತವೆಲ್ಲಾ ನಡೆಯುವುದಿಲ್ಲಾ ಎಂದರು.

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೌಂಟರ್ ನೀಡಲು ಬಿಜೆಪಿಯ ಮಾಜಿ ಶಾಸಕ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಗೆ ಕರೆ ತರಲಾಗುತ್ತಿದೆ ಎಂಬ ಮಾಜಿ ಸಚಿವ ಜನಾರ್ಧನ ರೆಡ್ಡಿ ಟೀಕೆಗೆ ಉತ್ತರಿಸಿದ ಅವರು, ಆ ಅವಕಾಶ ಇಲ್ಲ. ಚುನಾವಣೆ ಸಂದರ್ಭದಲ್ಲಿ ಅನೇಕ ತಂತ್ರಗಾರಿಕೆ ಸಂದರ್ಭದಲ್ಲಿ ಆಗಿರಬಹುದು. ಜನ ನಮಗೆ ಆಶೀರ್ವಾದ ಕೊಟ್ಟಿದ್ದಾರೆ ಸರ್ಕಾರ ನಡೀಸ್ತಾ ಇದ್ದೇವೆ ಎಂದರು.

ಅಹಿಂದ ನಾಯಕರಾಗಿ ಸತೀಶ್ ಜಾರಕಿಹೊಳಿ ಅವರು ಬೆಳಯುತ್ತಿದ್ದಾರೆ ವಾಲ್ಮೀಕಿ ಸಮಾಜದ ನಾಯಕರನ್ನೆ ಕರೆತರುವ ಪ್ರಯತ್ನ ನಡಿತಾ ಇದೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಶ್ನೆ ಅಪ್ರಸ್ತುತ ಇಂತಹ ಯಾವ ಪ್ರಶ್ನೆಗಳು ಕೂಡ ಸರ್ಕಾರ ಹಾಗೂ ಪಕ್ಷದ ಮುಂದೆ ಇಲ್ಲ ಎಂದರು.

ರಾಜ್ಯದಲ್ಲಿ ಮೈಕ್ರೋ ಪೈನಾನ್ಸ್ ಹಾವಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಹಕಾರ ಸಂಘದಿಂದ ಹಾಗೂ ರಿಸರ್ವ್ ಬ್ಯಾಂಕಿನ ಅನುಮತಿ ತಗೊಂಡು ಅದರ ಗೈಡ್ ಲೈನ್ಸ್ ಪ್ರಕಾರ ಪೈನಾನ್ಸ್ ನವರು ಕೆಲಸ ಮಾಡುತ್ತಾರೆ. ಸಾಲದ ನೆಪದಲ್ಲಿ ಮಹಿಳೆಯರ ಮೇಲೆ ಕೇಸ್ ಹಾಕುವುದು ಸರಿಯಲ್ಲ.ಕಾನೂನಿನ ಪ್ರಕಾರ ಮಹಿಳೆಯರಿಗೆ ಶಿಕ್ಷೆ ಕೊಡುವುದಾದರೆ ಕಾನೂನು ಮೂಲಕವೇ ಅವರು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ಅವರು ಇಂದು ಸಭೆ ಕರೆದಿದ್ದಾರೆ. ಇಂತಹ ಘಟನೆ ತಪ್ಪಿಸಲು ಏನ ಕ್ರಮ ಕೈಗೊಳ್ಳಬೇಕು ಅಂತ ಆ ಕ್ರಮ ಕೈಗೊಳ್ಳುತ್ತಾರೆ ಎಂದರು.

ಇನ್ನು ಮೈಸೂರು ಅರಮನೆ ಆಸ್ತಿ ವಿಚಾರವಾಗಿ ಸರ್ಕಾರ ವಿರೋಧ ಮಾಡುತ್ತಿಲ್ಲ. ಕೆಲವು ಆಸ್ತಿಗಳು ಸರ್ಕಾರಕ್ಕೆ ಸೇರಬೇಕು ಎಂದು ವಾದ ನಡೆಯುತ್ತಿದೆ. ಮೈಸೂರಿನಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕೆ ಟಿಡಿಆರ್ ಮಾಡಬೇಕಾಗಿದೆ. ಹೆಚ್ಚಿನ ಪ್ರಮಾಣದ ಅನುದಾನವನ್ನ ನೀಡಲು ಸಾಧ್ಯವಾಗದ ಹಿನ್ನೆಲೆ ನಿನ್ನೆ ತುರ್ತು ಕ್ಯಾಬಿನೆಟ್ ಸಭೆ ಮಾಡಿ ತಿರ್ಮಾನ ಮಾಡಿದ್ದಾರೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button