
ಪ್ರಗತಿವಾಹಿನಿ ಸುದ್ದಿ, ಶಿರಸಿ : ಅನ್ಯ ಕೋಮಿನ ಜನರನ್ನು ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿದ ಹಿನ್ನೆಲೆಯಲ್ಲಿ ಶಿರಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಠಿಕೊಪ್ಪದ ನಿವಾಸಿಗಳಾದ
1] ಗೌಸ್ ಅಜಮ್ @ ಮಹ್ಮದ ಗೌಸ್ ತಂದೆ ಶಬ್ಬೀರ್ ಅಹಮ್ಮದ ಖಾಜಿ ಪ್ರಾಯ: 35 ವರ್ಷ ವೃತ್ತಿ: ಚಾಲಕ ಸಾ: ಹಳೇ ರಾಜಧಾನಿ ಪೈನಾನ್ಸ್ ಹಿಂಭಾಗ, ಪುಟ್ಟನಮನೆ ರಸ್ತೆ, 2 ನೇ ಕ್ರಾಸ್, ಮರಾಠಿಕೊಪ್ಪ, ಶಿರಸಿ
2] ಮೆಹಬೂಬ್ ಸಾಬ್ ತಂದೆ ಹಸನಸಾಬ್ ನಾಗನೂರ ಪ್ರಾಯ: 27 ವರ್ಷ ವೃತ್ತಿ: ಮ್ಯಾಕೆನಿಕಲ್ ಸಾ: ಗೋಲಿಪೈಯರ್, ಮರಾಠಿಕೊಪ್ಪ, ಶಿರಸಿ ಬಂಧಿತರು.
ಇವರು ಅನ್ಯ ಕೋಮಿನ ಜನರನ್ನ ಕೆರಳಿಸುವಂತೆ ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಂಜ್ಞೆಯ ಅಪರಾಧದ ಸಂಚಿನಲ್ಲಿ ತೊಡಗಿರುವುದರಿಂದ, ಮುಂದೆ ಆಗಬಹುದಾದ ಸಂಜ್ಞೆಯ ಅಪರಾಧಗಳನ್ನು ತಡೆದು ಸಮಾಜದಲ್ಲಿ ಕೋಮು ಸೌಹಾರ್ಧತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ (ಠಾಣಾ ಗುನ್ನಾ ನಂ. 36/2022 ಕಲಂ 107, 151 ಸಿ.ಆರ್.ಪಿ.ಸಿ ರಿತ್ಯಾ) ಪ್ರಕರಣ ದಾಖಲಿಸಿ, ಎರಡು ಜನ ಆರೋಪಿತರುಗಳನ್ನು ಬಂಧಿಸಿ ಮಾನ್ಯ ತಾಲೂಕಾ ದಂಡಾಧಿಕಾರಿ ಮುಂದೆ ಹಾಜರ ಪಡಿಸಲಾಗಿದ್ದು, ತಾಲೂಕ ದಂಡಾಧಿಕಾರಿಗಳು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.
DSP ರವಿ ಡಿ. ನಾಯ್ಕ್ ಮಾರ್ಗದರ್ಶನದಲ್ಲಿ CPI ರಾಮಚಂದ್ರ ನಾಯಕ, PSI ಭೀಮಾಶಂಕರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಜರುಗಿಸಿದ್ದಾರೆ.
https://pragati.taskdun.com/politics/6-stateby-electiondate-announce/