Kannada NewsKarnataka NewsLatest

ಕೈ ತಪ್ಪಿಸಿಕೊಂಡ ಶ್ರೀಮಂತ ಪಾಟೀಲ ಎಲ್ಲಿದ್ದಾರೆ ನೋಡಿ…

 

ಕೈ ತಪ್ಪಿಸಿಕೊಂಡ ಶ್ರೀಮಂತ ಪಾಟೀಲ ಎಲ್ಲಿದ್ದಾರೆ ನೋಡಿ…

Related Articles

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 

ರಾತ್ರೋರಾತ್ರಿ ಕಾಂಗ್ರೆಸ್ ಪಾಳಯದಿಂದ ನಾಪತ್ತೆಯಾಗಿದ್ದ ಶ್ರೀಮಂತ ಪಾಟೀಲ ಪತ್ತೆಯಾಗಿದ್ದಾರೆ.

Home add -Advt

ಅವರು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಇಸಿಜಿ ಮಾಡುತ್ತಿರುವ ಫೋಟೋ ಈಗ ಬಿಡುಗಡೆಯಾಗಿದೆ.

ಶ್ರೀಮಂತ ಪಾಟೀಲ ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟ್ ನಿಂದ ಮುಂಬೈಗೆ ಹೇಗೆ ಹೋದರು? ಅವರಿಗೆ ಇಸಿಜಿ ಮಾಡುವಂತಹ ಅನಾರೋಗ್ಯ ಕಾಡಿದ ನಂತರ ಅವರು ರೆಸಾರ್ಟ್ ನಿಂದ ಹೋದರೆ?  ಮುಂಬೈಗೆ ತಲುಪಿದ ನಂತರ ಹದಯಾಘಾತವೇನಾದರೂ ಆಯಿತೆ?  ಮುಂಬೈಗೆ ಹೋಗಿದ್ದು ಏಕೆ?

ಮುಂಬೈನಲ್ಲಿರುವ ಅತೃಪ್ತ ಶಾಸಕರ ಪಾಳಯವನ್ನು ಸೇರಿ, ನಂತರ ಆಸ್ಪತ್ರೆಗೆ ದಾಖಲಾದರೆ? ಅಥವಾ ಸಂದಿಗ್ದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆ ಸೇರಬೇಕಾಯಿತೇ? ಇಂತಹ ಹತ್ತಾರು ಪ್ರಶ್ನೆಗಳಿಗೆ ಇನ್ನಷ್ಟೆ ಉತ್ತರ ಸಿಗಬೇಕಿದೆ.

ಏನೇ ಆದರೂ ಅವರು ವಿಧಾನಸಭೆಯಲ್ಲಿ ಇಂದು ನಡೆಯುತ್ತಿರುವ ವಿಶ್ವಾಸಮತ ಯಾಚನೆಯಿಂದ ದೂರ ಉಳಿದಿದ್ದಂತೂ ನಿಜ. ಶ್ರೀಮಂತ ಪಾಟೀಲ ರಾಜಿನಾಮೆ ನೀಡುತ್ತಾರೆ ಎನ್ನುವ ವದಂತಿ ಬಹಳ ಹಿಂದಿನಿಂದಲೂ ಇತ್ತು. ಆದರೆ ಆರಂಭದಿಂದಲೂ ಅವರು ಅದನ್ನು ನಿರಾಕರಿಸುತ್ತ, ಕಾಂಗ್ರೆಸ್ ಗುಂಪಿನಲ್ಲೇ ಕಾಣಿಸಿಕೊಳ್ಳುತ್ತ ಬಂದಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಅವರ ಮತವನ್ನು ಈ ರೀತಿಯಲ್ಲಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಂತೂ ಊಹಿಸಿರಲಿಲ್ಲ. ಶ್ರೀಮಂತ ಪಾಟೀಲರಿಗೆ ಹೃದಯಾಘಾತವಾಗಿದೆಯೋ ಇಲ್ಲವೋ….  ಮೈತ್ರಿ ಸರಕಾರಕ್ಕಂತೂ ಆಘಾತವಾಗಿದೆ.

ಇದನ್ನೂ ಓದಿ –

ರಾತ್ರೋರಾತ್ರಿ ದೋಸ್ತಿಗೆ ಮತ್ತೊಂದು ಶಾಕ್

 

ಹೆಚ್ಚಿನ ಸುದ್ದಿಗಳಿಗೆ http://pragativahin.com ನೋಡಿ

 

Related Articles

Back to top button