ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕೆಮ್ಮು ಮತ್ತು ನೆಗಡಿಗೆ ಸಂಬಂಧಿಸಿದ ನಾಲ್ಕು ಭಾರತೀಯ ಸಿರಪ್ ಗಳ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಪ್ರೊಮೆಥಾಜಿನ್ ಓರಲ್ ಸೊಲ್ಯೂಷನ್, ಕೊಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮ್ಯಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಹರ್ಯಾಣಾದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಈ ಉತ್ಪನ್ನಗಳ ತಯಾರಕರಾಗಿದ್ದು ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಖಾತರಿ ನೀಡಿಲ್ಲ ಎಂದು WHO ಹೇಳಿದೆ.
ಗ್ಯಾಂಬಿಯಾದಲ್ಲಿ ಮಕ್ಕಳಲ್ಲಿ 66 ಸಾವು ಸಂಭವಿಸಿದ ನಂತರ ಈ ವಿಷಯ ಹೆಚ್ಚು ಮಹತ್ವ ಪಡೆದಿದೆ.
ಈ ಔಷಧಗಳ ಆಕ್ಸಿಕ್ ಪರಿಣಾಮಗಳು ಕಿಬ್ಬೊಟ್ಟೆಯ ನೋವು, ವಾಂತಿ, ಅತಿಸಾರ, ಮೂತ್ರಕೋಶದ ಅಸಮರ್ಥತೆ, ತಲೆನೋವು, ಬದಲಾದ ಮಾನಸಿಕ ಸ್ಥಿತಿ ಮತ್ತು ತೀವ್ರವಾದ ಮೂತ್ರಪಿಂಡದ ಗಾಯವನ್ನು ಉಂಟುಮಾಡಬಹುದಲ್ಲದೆ ಇದು ಸಾವಿಗೂ ಕಾರಣವಾಗಬಹುದು ಎಂದು WHO ಹೇಳಿದೆ.
ಅಭಿಷೇಕ್- ಜಯಾ ಬಚ್ಚನ್ ತಾಳ್ಮೆ ಕೆಡಿಸಿದ ಸೆಲ್ಫಿ ಚಟಗಾರರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ