![](https://pragativahini.com/wp-content/uploads/2019/10/p-rajeev.jpg)
ಪ್ರಗತಿವಾಹಿನಿ ಸುದ್ದಿ, ಮುಗಳಖೋಡ – ಮುಗಳಖೋಡ ಪುರಸಭೆಯ ಫೈಲ್ ಗಳು ಯಾರ ಮನೆಗೆ ಹೋಗುತ್ತಿವೆ?
ಇಂತದ್ದೊಂದು ಪ್ರಶ್ನೆ ಎದುರಾಗಿದ್ದು ಶಾಸಕ ಪಿ.ರಾಜೀವ್ ಅಧಿಕಾರಿಗಳಿಗೆ ನೀಡಿದ ಗಂಭೀರ ಎಚ್ಚರಿಕೆಯಿಂದ.
ಮಂಗಳವಾರ ಯಲ್ಲಾಲಿಂಗೇಶ್ವರ ಜಾತ್ರೆ ನಿಮಿತ್ತ ನಡೆದ ಪೂರ್ವಭಾವಿ ಸಭೆಯ ವೇಳೆ ರಾಜೀವ್ ಇಂತದ್ದೊಂದು ವಾರ್ನಿಂಗ್ ನೀಡಿದರು ಪುರಸಭೆಯ ಅಧಿಕಾರಿಗಳಿಗೆ.
ಕಚೇರಿಯಲ್ಲಿರುವ ಕಡತ (ಫೈಲ್) ಗಳು ಸಹಿಗಾಗಿ ಕೆಲವರ ಮನೆಗೆ ಹೋಗಿ ಬರುವುದು ನನ್ನ ಗಮನಕ್ಕೆ ಬಂದಿದೆ ಎಂದು ಮುಗಳಖೋಡ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಇಂಜಿನೀಯರ್ ಉದ್ದೇಶಿಸಿ ರಾಜೀವ ಹೇಳಿದರು.
ಇನ್ನು ಮುಂದೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಯಾವ ಸದಸ್ಯರಾಗಲಿ, ಅಧಿಕಾರಿಗಳು ಗುಲಾಮರಂತೆ ಯಾರ ಮನೆಗೂ ಹೋಗಿ ಸಹಿಮಾಡಿಸುವಂತಿಲ್ಲ. ಅವರವರು ಫೈಲ್ಗಳಿಗೆ ಕಛೇರಿಗೆ ಬಂದು ಸಹಿ ಮಾಡಬೇಕು. ಅಧಿಕಾರಿಗಳು ಮನೆಗೆ ಹೋಗಿ ಸಹಿಮಾಡಿಸುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆಯೊಳಗೆ ಸದಸ್ಯರನ್ನು ಬಿಟ್ಟು ಬೇರೆ ವ್ಯಕ್ತಿಗಳು ಆಡಳಿತ ನಡೆಸುವ ಹಾಗಿಲ್ಲ ಎಂದು ಶಾಸಕ ಪಿ ರಾಜೀವ ವಾರ್ನಿಂಗ್ ಮಾಡಿದರು.
ಈ ಸಂದರ್ಭದಲ್ಲಿ ರಾಯಬಾಗ ಗ್ರೆಡ್೨ ತಹಶಿಲ್ದಾರ ಪರಮಾನಂದ ಮಂಗಸೂಳೆ, ತಾಪಂ ಇ.ಓ.ವ್ಹಿ ಪ್ರಕಾಶ, ತಾಲೂಕಾ ವೈದ್ಯಾಧಿಕಾರಿ ಎಸ್.ಎಸ್.ಬಾನೆ, ಹಾರೂಗೇರಿ ಠಾಣಾಧಿಕಾರಿ ಯಮನಪ್ಪ ಮಾಂಗ, ಪಿ.ಡಬ್ಲೂ.ಡಿ ಆರ್.ಕೆ.ನಿಂಗನೂರೆ, ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಹೆಸ್ಕಾಂನ ಮಹೇಶ ಬಾಗಡಿ, ಡಾ. ಸೋಮನಗೌಡ ಪಾಟೀಲ, ಆಶಿಪ್ ಕಾಗವಾಡ, ಸತೀಶ ಜಾಧವ, ಸಮೀರ ಪವಾರ, ಶ್ರೀ ಮಠದ ಮುಖ್ಯ ವ್ಯವಸ್ಥಾಪಕ ಬಸವರಾಜ ಜೋಪಾಟಿ, ಅರುಣ ಮಠಪತಿ, ಪುರಸಭೆ ಕೆಲ ಸದಸ್ಯರು ಹಾಗೂ ಶ್ರೀಮಠದ ಭಕ್ತಾಧಿಗಳು ಮತ್ತು ವಿವಿಧ ಇಲಾಖೆಯ ತಾಲುಕಾಧಿಕಾರಿಗಳು ಪಾಲ್ಗೊಂಡಿದ್ದರು.
ಸರಳ ರೀತಿಯಲ್ಲಿ ಮುಗಳಖೋಡ ಜಾತ್ರೆ – ಪಿ.ರಾಜೀವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ