Kannada NewsKarnataka NewsLatest

ಬೆಳಗಾವಿ ರಸ್ತೆ ಕಾಯುವುದು ಯಾರ ಕೆಲಸ?; ಈ ವಿಡೀಯೋ ನೋಡಿ ಹೇಳಿ

ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಇವೆಲ್ಲ ಬಂದಿವೆಯೋ ಇಲ್ಲವೋ?

ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಕೆಲವು ಗುತ್ತಿಗೆದಾರರು ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರಂತೆ. ಆದರೆ ಕೆಲವು ಪ್ರದೇಶದಲ್ಲಿ ಮಹಿಳೆಯರು ಮತ್ತು ಕಳ್ಳರು ಗ್ಯಾಂಗ್ ಕಟ್ಟಿಕೊಂಡು ಬಂದು ಸೆಕ್ಯುರಿಟ್ ಗಾರ್ಡ್ ಗಳಿಗೆ ಮನಬಂದಂತೆ ಥಳಿಸಿ ಸಾಮಗ್ರಿ ಹೊತ್ತೊಯ್ದಿದ್ದಾರಂತೆ. ಅಂದರೆ ಕಳ್ಳರಿಗೆ ಸ್ವಲ್ಪವೂ ಭಯವೇ ಇಲ್ಲ ಎನ್ನುವಂತಾಗಿದೆ. ಸೆಕ್ಯುರಿಟ್ ಗಾರ್ಡ್ ಗಳಿಗೆ ಥಳಿಸುವುದನ್ನು ನೋಡಿದ ಮೇಲೆ ಸಾಮಗ್ರಿ ಹೋದರೆ ಹೋಗಲಿ ಅವರಿಗೆ ಥಳಿಸುವುದನ್ನು ನೋಡಲಾಗುತ್ತಿಲ್ಲ ಎಂದು ಗುತ್ತಿಗೆದಾರರು ಕೈಚೆಲ್ಲುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆ, ಮಹಾನಗರ ಪಾಲಿಕೆ ಕಾಮಗಾರಿ, ಬಿಎಸ್ಎನ್ಎಲ್, ಕೆಯುಡಬ್ಲುಎಸ್ ಹೀಗೆ ಹಲವು ಇಲಾಖೆಗಳು ಎಡೆಬಿಡದೆ ರಸ್ತೆಗಳಲ್ಲಿ ಕಾಮಗಾರಿ ನಡೆಸುತ್ತಿವೆ.

ಆದರೆ ಈ ಕಾಮಗಾರಿಗಳಿಗೆ ಕಳ್ಳರ ಹಾವಳಿ ವಿಪರೀತವಾಗಿವೆ. ಕಾಮಗಾರಿಗೆಂದು ಇಳಿಸಿಟ್ಟ ಸಾಮಗ್ರಿಗಳನ್ನು ಕಳ್ಳರು ಹೊತ್ತೊಯ್ಯುತ್ತಿದ್ದಾರೆ. ಪ್ರತಿ ನಿತ್ಯ ಲಕ್ಷಾಂತರ ರೂ. ವೆಚ್ಚದ ಸಾಮಗ್ರಿಗಳು ಕಳ್ಳರ ಪಾಲಾಗುತ್ತಿವೆ.

ಈಚೆಗೆ ಬಿಎಸ್ಎನ್ಎಲ್ ಕೇಬಲ್ ಗಳನ್ನು ಕಳ್ಳರು ಕತ್ತರಿಸಿ ಒಯ್ದಿದ್ದಾರೆ. ನೀರಿನ ಪೈಪ್ ಗಳನ್ನು ಕದ್ದೊಯ್ದಿದ್ದಾರೆ. ಪೇವರ್ಸ್ ಗಳಂತೂ ನಿರಂತರ ಕಳ್ಳರ ಪಾಲಾಗುತ್ತಿವೆ. ಇಟ್ಟಿಗೆ, ಸಿಮೆಂಟ್, ಕಡಿ, ಉಸುಕು, ಕಬ್ಬಿಣದ ಸಾಮಗ್ರಿಗಳು ಹೀಗೆ ಎಲ್ಲ ಸಾಮಗ್ರಿಗಳನ್ನೂ ಕಳ್ಳರು ಕದ್ದೊಯ್ಯುತ್ತಿದ್ದಾರೆ.

ಆದರೆ ಕಳ್ಳರಿಗೆ ಹೇಳಕೇಳುವವರಿಲ್ಲ ಎನ್ನುವಂತಾಗಿದೆ. ರಾಜಾರೋಷವಾಗಿ ವಾಹನಗಳನ್ನು ತಂದು ನಿಲ್ಲಿಸಿಕೊಂಡು ತುಂಬಿಕೊಂಡು ಹೋಗುತ್ತಾರೆ. ಪೊಲೀಸರ ಭಯವಂತೂ ಇಲ್ಲವೇ ಇಲ್ಲ. ಸಿಸಿಟಿವಿ ಕ್ಯಾಮರಾಗಳಲ್ಲಿ ಈ ದೃಷ್ಯಗಳು ಸೆರೆಯಾದರೂ ಪೊಲೀಸರು ಏನೂ ಮಾಡುತ್ತಿಲ್ಲ.

ಗುತ್ತಿಗೆದಾರರು ಪೊಲೀಸರಿಗೆ ದೂರು ನೀಡಲು ಹೋದರೆ, ನಿಮ್ಮ ಸಾಮಗ್ರಿಗಳಿಗೆ ನೀವೇ ಜವಾಬ್ದಾರರು ಎಂದು ಮುಖದ ಮೇಲೆ ಹೊಡೆದಂತೆ ಹೇಳುತ್ತಿದ್ದಾರೆ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆರೋಪಿಸುತ್ತಾರೆ. ಸಿಸಿಟಿವಿ ದೃಶ್ಯಗಳನ್ನು ಕೊಟ್ಟರೂ ಪೊಲೀಸರು ನೋಡುವುದಕ್ಕೂ ಸಿದ್ದವಿಲ್ಲವಂತೆ.

ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಇವೆಲ್ಲ ಬಂದಿವೆಯೋ ಇಲ್ಲವೋ ಗೊತ್ತಿಲ್ಲ, ಆದರೆ   ಇಲಾಖೆಗಳು ಮತ್ತು ಗುತ್ತಿಗೆದಾರರೇ ತಮ್ಮ ತಮ್ಮ ಸಾಮಗ್ರಿಗಳನ್ನು ಕಾಯಲು ಜನರನ್ನು ನಿಯೋಜಿಸಬೇಕೆಂದಾದರೆ ಪೊಲೀಸರ ಕೆಲಸವೇನು?

ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಕೆಲವು ಗುತ್ತಿಗೆದಾರರು ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರಂತೆ. ಆದರೆ ಕೆಲವು ಪ್ರದೇಶದಲ್ಲಿ ಮಹಿಳೆಯರು ಮತ್ತು ಕಳ್ಳರು ಗ್ಯಾಂಗ್ ಕಟ್ಟಿಕೊಂಡು ಬಂದು ಸೆಕ್ಯುರಿಟ್ ಗಾರ್ಡ್ ಗಳಿಗೆ ಮನಬಂದಂತೆ ಥಳಿಸಿ ಸಾಮಗ್ರಿ ಹೊತ್ತೊಯ್ದಿದ್ದಾರಂತೆ. ಅಂದರೆ ಕಳ್ಳರಿಗೆ ಸ್ವಲ್ಪವೂ ಭಯವೇ ಇಲ್ಲ ಎನ್ನುವಂತಾಗಿದೆ. ಸೆಕ್ಯುರಿಟ್ ಗಾರ್ಡ್ ಗಳಿಗೆ ಥಳಿಸುವುದನ್ನು ನೋಡಿದ ಮೇಲೆ ಸಾಮಗ್ರಿ ಹೋದರೆ ಹೋಗಲಿ ಅವರಿಗೆ ಥಳಿಸುವುದನ್ನು ನೋಡಲಾಗುತ್ತಿಲ್ಲ ಎಂದು ಗುತ್ತಿಗೆದಾರರು ಕೈಚೆಲ್ಲುತ್ತಿದ್ದಾರೆ.

ರಾತ್ರಿ ವೇಳೆಯಲ್ಲಿ ಬೆಳಗಾವಿಯಲ್ಲಿ ಪೊಲೀಸ್ ಬಲ ಹೆಚ್ಚಿಸದಿದ್ದಲ್ಲಿ, ಬೀಟ್ ಪೊಲೀಸರ ಮೇಲೆ ಹಿರಿಯ ಅಧಿಕಾರಿಗಳು ನಿಯಂತ್ರಣವಿಟ್ಟುಕೊಳ್ಳದಿದ್ದಲ್ಲಿ ಬೆಳಗಾವಿಯನ್ನೇ ಕಳ್ಳರು ಹೊತ್ತೊಯ್ದಾರು…. ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ನೋಡಿಯಾದರೂ ಕಠಿಣ ಕ್ರಮ ಕೈಗೊಳ್ಳಲಿ.

ಬಿಜೆಪಿ ಅಂಗಳದಲ್ಲಿ ಹೀಗೊಂದು ಸುದ್ದಿ…. 3 ತಲೆ ಉರುಳಿಸಲು ನಿರ್ಧಾರ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button