Belagavi NewsBelgaum NewsKannada NewsKarnataka NewsPolitics

*ಬೆಂಗಳೂರಿನ ವಿಷಯ ಬೆಳಗಾವಿಯಲ್ಲಿ ಚರ್ಚಿಸುವುದಾದರೆ ಅಧಿವೇಶನ ಏಕೆ? ಸಂಜಯ ಪಾಟೀಲ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರಕಾರ ಕಾಟಾಚಾರಕ್ಕೆ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದೆ. ಕನಿಷ್ಠ  20 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ಮಾಜಿ ಶಾಸಕ ಸಂಜಯ ಪಾಟೀಲ ಆಗ್ರಹಿಸಿದ್ದಾರೆ.

ಹಾಲಿ ಶಾಸಕರು ಮೃತಪಟ್ಟ ಕಾರಣ ಒಂದು ದಿನ ಅಧಿವೇಶನ ನಡೆಯುವದಿಲ್ಲ, ಕಾಂಗ್ರೆಸ್ ಪಕ್ಷ ತನ್ನ ಮರ್ಜಿಗೋಸ್ಕರ, ಮಸೂದೆ ಅಂಗೀಕಾರಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಬೆಂಗಳೂರು ಅಭಿವೃದ್ಧಿ, ಬೆಂಗಳೂರು ಪಾಲಿಕೆ- ಈ ಥರದ ವಿಚಾರಗಳನ್ನು ಈ ಅಧಿವೇಶನದಲ್ಲಿ ತರುತ್ತಿದ್ದಾರೆ. ಹಾಗಾದರೆ ಬೆಳಗಾವಿಯಲ್ಲಿ ಅಧಿವೇಶನ ಯಾಕೆ ಎಂದು ಪ್ರಶ್ನಿಸಿದರು.

ಬೆಂಗಳೂರಿನ ವಿಚಾರಗಳನ್ನೇ ಬೆಳಗಾವಿಯಲ್ಲಿ ಕೈಗೆತ್ತಿಕೊಳ್ಳುವುದಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯ ಏನು? ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಅವರಿದ್ದಾಗ ಅಲ್ಲೊಂದು ಭವನ ಆಗಬೇಕು, ಉತ್ತರ ಕರ್ನಾಟಕದ ಚರ್ಚೆ ಆಗಬೇಕೆಂದು ಅಧಿವೇಶನ ಮಾಡುತ್ತಿದ್ದರು. 20 ದಿನವಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ, ಇಲ್ಲಿನ ಸಮಸ್ಯೆಗಳನ್ನು ಚರ್ಚಿಸಿ ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕದ ವಿಚಾರವನ್ನು ಕೊನೆಗೆ ಪರಿಗಣಿಸುತ್ತಾರೆ. ಹಿಂದಿನ ಅಧಿವೇಶನದಲ್ಲಿ  ಕೊನೆಯಲ್ಲಿ ಮುಖ್ಯಮಂತ್ರಿ ತಿಪ್ಪೆಸಾರಿಸಿ ಭಾಷಣ ಮಾಡಿ ಹೋಗಿದ್ದರು. ಕೈಗಾರಿಕೆ ಸ್ಥಾಪನೆ, ಶಾಲಾರಂಭ, ನೀರಾವರಿ ಯೋಜನೆಗೆ ಹಣದ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೆ ಬಂದಿದೆ ಎಂದು ದೂರಿದರು. ತುಂಗಭದ್ರಾ ಡ್ಯಾಂ ಗೇಟ್ ಕಿತ್ತುಹೋಗಿ ಒಂದು ವರ್ಷವಾಗಿದೆ ಅದರ ರೀಪೆರಿಗೆ 12 ಕೋಟಿ ಕೊಡಬೇಕಿದ್ದು, ಅದನ್ನು ಕೊಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ. ರಾಜ್ಯಸಭಾ ಸದಸ್ಯರ ಪ್ರಯತ್ನದಿಂದ  ಬೆಳಗಾವಿಯಲ್ಲಿ ನೂತನ ಇ.ಎಸ್.ಐ ಆಸ್ಪತ್ರೆ ಬಂದರೂ ಪ್ರಾರಂಭಕ್ಕೆ ಗ್ರಹಣ ಹಿಡದಿದೆ. ಕೇಂದ್ರ ಮಂತ್ರಿಗಳಾಗಿದ್ದ ದಿ.ಸುರೇಶ ಅಂಗಡಿ ಯವರ ಕನಸಿನ ಯೋಜನೆ ಧಾರವಾಡ ಬೆಳಗಾವಿ ನೇರ ರೈಲು ಸಂಪರ್ಕದ ಭೂ ಸ್ವಾಧೀನದಲ್ಲಿ ವಿಳಂಬವನ್ನು ತಕ್ಷಣ ಪರಿಹರಿಸಿ. ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಸಂಸದರಾದ ಜಗದೀಶ್ ಶೆಟ್ಟರ ಅವರ ಸತತ ಪ್ರಯತ್ನದಲ್ಲಿಯು ವಿಳಂಬ ವಾಗುತ್ತಿರುವದು ಖಂಡನೀಯ ಬೆಳಗಾವಿ ಜಿಲ್ಲೆಗೆ ಸಂಬAಧಿಸಿದ ಹತ್ತು ಹಲವಾರು ಜಟೀಲ ಸಮಸ್ಯೆಗಳಿಗೆ ಪರಿಹಾರ ಈ ಅಧಿವೇಶನದಲ್ಲಿ ದೊರೆಯುವಂತಾಗಲಿ.

Home add -Advt

ಜನರಿಗೆ ನೀಡಿದ ಭರವಸೆಗೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ ಇದು ಶೇ 60 ಕಮಿಷನ್ ಸರಕಾರವಾಗಿ ಮಾರ್ಪಟ್ಟಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಕಾಂಗ್ರೆಸ್ಸಿನ ಕೇಂದ್ರ ಹೈಕಮಾಂಡಿಗೆ ಹಣ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಮೊದಲ ದಿನದಿಂದ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳನ್ನೇ ಪ್ರಮುಖವಾಗಿ ತೆಗೆದುಕೊಳ್ಳಬೇಕು ಬೆಳಗಾವಿ, ಯಾದಗಿರಿ, ಕಲ್ಬುರ್ಗಿ, ಬೀದರ್, ಬಾಗಲಕೋಟೆ, ವಿಜಯಪುರ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ಇತ್ತು. ಸರಕಾರ ಈ ವಿಷಯದಲ್ಲಿ ಮೂರ್ನಾಲ್ಕು ತಿಂಗಳಾದ ಬಳಿಕ ನಿದ್ದೆಯಿಂದ ಎದ್ದೇಳುತ್ತಿದೆ. ಬೆಳಗಾವಿ ನೆರೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಶಾಸಕರ ಭವನ ನಿರ್ಮಾಣದಂತಹ ಮಹತ್ತರ ಕಾರ್ಯಗಳಿಗೆ ಅಧಿವೇಶನ ಸಾಕ್ಷಿಯಾಗಲಿ ಕೇವಲ ಕಾಟಾಚಾರಕ್ಕೆ ಅಧಿವೇಶನ ಆಗದೆ ಕನಿಷ್ಠ 20 ದಿನ ನಡೆಸುವ ನಿರ್ಧಾರಕ್ಕೆ ಸರ್ಕಾರ ಬರಬೇಕು ಇಲ್ಲದಿದ್ದರೆ ಇದೊಂದು ಪ್ರವಾಸದ ಮೊಜು ಮಸ್ತಿಯ ಅಧೀವೇಶನಕ್ಕೆ ಸೀಮಿತವಾಗಲಿದೆ ಎಂದರು.

Related Articles

Back to top button