Belagavi NewsBelgaum NewsKannada NewsKarnataka NewsPolitics

*ನಮ್ಮ ಡಿನ್ನರ್ ಬಗ್ಗೆ ಅವರಿಗೆ ಯಾಕೆ ಚಿಂತೆ; ಬಿಜೆಪಿ ವಿರುದ್ಧ ಸಲೀಂ ಅಹ್ಮದ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಮ್ಮ ಡಿನ್ನರ್ ಬಗ್ಗೆ ವಿಪಕ್ಷಗಳಿಗೆ ಯಾಕೆ ಚಿಂತೆ. ಇವರನ್ನು ಕರೆಯುತ್ತೇವೆ ಅವರೂ ಊಟಕ್ಕೆ ಬರಲಿ ಎಂದು ಡಿನ್ನರ್ ಸಭೆ ವಿಚಾರವಾಗಿ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.‌

ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಜೊತೆ ಮತನಾಡಿದ ಅವರು, ದ್ವೇಷ ಭಾಷಣ ಬಿಲ್ ಪಾಸ್ ಮಾಡುತ್ತಿದ್ದೇವೆ. ಅದರ ಬಗ್ಗೆ ನ್ಯೂನತೆಗಳ ಚರ್ಚೆ ಮಾಡಲಿ. ಹತ್ತು ದಿನಗಳ ಕಾಲ ಲಂಚ್, ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ್ರು. ವಿರೋಧ ಪಕ್ಷದ ನಾಯಕರು ಸಮಯ ವ್ಯರ್ಥ ಮಾಡಿದ್ದಾರೆ‌. ವಿಶೇಷವಾಗಿ ಉತ್ತರ ಕರ್ನಾಟಕದ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಬಜೆಟ್ ನಲ್ಲೂ ಹಣ ಕೂಡ ಇಟ್ಟಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ. ಎಲ್ಲರಿಗೂ ನ್ಯಾಯ ಕೊಡೊ ಸರ್ಕಾರ ನಮ್ಮದಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನಮ್ಮ ಸಂಕಲ್ಪ ಎಂದರು. 

Home add -Advt

Related Articles

Back to top button