ಪ್ರಗತಿವಾಹಿನಿ ಸುದ್ದಿ, ಭೋಪಾಲ್ – ಈಗ ಯಾರು ನೋಡಿದರೂ ಕೊರೋನಾ ಭಯದಿಂದಾಗಿ ರಜೆ ಕೇಳುತ್ತಿದ್ದಾರೆ. ಕೆಲವರು ಸೋಂಕಿನಿಂದ, ಇನ್ನು ಕೆಲವರು ಕ್ವಾರಂಟೈನ್ ಗಾಗಿ, ಮತ್ತೆ ಕೆಲವರು ಭಯದಿಂದ.
ಆದರೆ ಮಧ್ಯಪ್ರದೇಶದ ಪೊಲೀಸ್ ಇಲಾಖೆಯ ಸಿಬ್ಬಂದಿ ಒಬ್ಬರು ವಿಚಿತ್ರ ಕಾರಣಕ್ಕಾಗಿ ರಜೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಈಗ ವೈರಲ್ ಆಗಿದೆ.
ವಿಶೇಷ ಪೊಲೀಸ್ ಪಡೆಯ ವಾಹನ ಚಾಲಕನೋರ್ವ ತನ್ನ ಎಮ್ಮೆಯ ಬಾಣಂತನಕ್ಕಾಗಿ ರಜೆಗೆ ಅರ್ಜಿ ಸಲ್ಲಿಸಿದ್ದಾರೆ. ಎಮ್ಮೆಯ ಬಾಣಂತನ ಮತ್ತು ಕರುವನ್ನು ನೋಡಿಕೊಳ್ಳುವ ಸಲುವಾಗಿ 6 ದಿನ ರಜೆ ಬೇಕಾಗಿದೆ ಎಂದಿದ್ದಾರೆ.
ನನ್ನ ಮನೆಯಲ್ಲಿ ತಾಯಿಗೆ ವಯಸ್ಸಾಗಿದೆ, ಮೈಯಲ್ಲಿ ಹುಷಾರಿಲ್ಲ. ಹಾಗಾಗಿ ಎಮ್ಮೆಯ ಬಾಣಂತನ ನೋಡಲು ಯಾರೂ ಇಲ್ಲ. ಈ ಎಮ್ಮೆಯ ಹಾಲು ಕುಡಿದೇ ನಾನು ಪೊಲೀಸ್ ಇಲಾಖೆಗೆ ಸೇರಲು ಸಾಧ್ಯವಾಗಿದೆ. ಹಾಗಾಗಿ ಎಮ್ಮೆಯ ಬಾಣಂತನ ನೋಡುವುದು ನನ್ನ ಜವಾಬ್ದಾರಿ. ಹಾಗಾಗಿ ನನಗೆ ರಜೆ ಕೊಡಿ ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ರಜೆ ಮಂಜೂರಾಗುತ್ತಾ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ