Kannada NewsKarnataka NewsLatest

ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ದೇಕೆ? ಗುಟ್ಟು ಬಹಿರಂಗ!

ಮೊದಲ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತ ಯಾರಿಗೆ ಚಲಾಯಿಸಬೇಕೆಂಬುದು ಇಷ್ಟರಲ್ಲಿಯೇ ವರಿಷ್ಟರು ಹೇಳಲಿದ್ದಾರೆ.

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಕಾಂಗ್ರೇಸ್ ಪಕ್ಷ ದುಡ್ಡಿನ ಮೇಲೆ ನಿಂತಿದ್ದು, ದುಡ್ಡು ಇದ್ದವರಿಗೆ ಮಾತ್ರ ಆ ಪಕ್ಷದಲ್ಲಿ ಬೆಲೆ ಇದೆ. ಹಿಂದುಳಿದ ವರ್ಗಗಳ ನಾಯಕರಿಗಂತೂ ಬೆಲೆಯೇ ಇಲ್ಲ. ಹೀಗಾಗಿ ಆ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಬೇಕಾಯಿತು ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಿಪ್ಪಾಣಿ ಮತಕ್ಷೇತ್ರದ ಗ್ರಾಪಂ, ಪಪಂ ಹಾಗೂ ನಗರಸಭೆ ಸದಸ್ಯರಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸಮಗ್ರ ಪ್ರಗತಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಪರವಾಗಿ ಮತಯಾಚಿಸಲು ಇಲ್ಲಿಗೆ ಬಂದಿದ್ದೇನೆ. ಮೊದಲ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತ ಯಾರಿಗೆ ಚಲಾಯಿಸಬೇಕೆಂಬುದು ಇಷ್ಟರಲ್ಲಿಯೇ ವರಿಷ್ಟರು ಹೇಳಲಿದ್ದಾರೆ. ಅದರಲ್ಲೂ ಕವಟಗಿಮಠ ಅವರನ್ನು ಗೆಲ್ಲಿಸಬೇಕಿದೆ. ಅದರಂತೆ ಕಾಂಗ್ರೇಸ್ ಅಭ್ಯರ್ಥಿಯನ್ನು ಎಲ್ಲರೂ ಒಗ್ಗೂಡಿ ಸೋಲಿಸಬೇಕಿದೆ ಎಂದು ಹೇಳಿದರು.

ಅಭಿನಂದನ ಪಾಟೀಲ, ವಿಲಾಸ ಗಾಡಿವಡ್ಡರ, ಅಶೋಕಕುಮಾರ ಅಸೋಧೆ, ಜಯವಂತ ಕಾಂಬಳೆ, ಸಂಜಯ ಕಾಗೆ, ಅಮೀತ ಸಿಂಧೆ, ಉಮೇಶ ಪಾಟೀಲ, ಸೇರಿದಂತೆ ಇತರೇ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ 2 ಹೇಳಿಕೆಗಳು: ಅಭಿಮಾನಿಗಳಲ್ಲಿ ಖಾತರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button