Latest

ಶಿಕ್ಷಕರೇಕೆ ಅನಗತ್ಯ ಹೋಗಬೇಕು? ತಕ್ಷಣ ರಜೆ ಘೋಷಿಸಿ – ಸಿಎಂಗೆ ಹೊರಟ್ಟಿ ಒತ್ತಾಯ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಯಾವುದೇ ಕೆಲಸವಿಲ್ಲದೆ ಅನವಶ್ಯಕವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರನ್ನು ಶಾಲೆಗೆ ಕರೆಸಲಾಗುತ್ತಿದ್ದು, ಕೂಡಲೇ ಇದನ್ನು ರದ್ದುಪಡಿಸಿ ಶಿಕ್ಷಕರಿಗೆ ಶಾಲೆ ಆರಂಭವಾಗುವವರೆಗೆ ರಜೆ ಘೋಷಿಸಬೇಕು ಎಂದು ಮಾಜಿ ಶಿಕ್ಷಣ ಸಚಿವ, ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಹೊರಟ್ಟಿ ಪತ್ರ ಬರೆದಿದ್ದಾರೆ.

ಜೂನ್ 8ರಿಂದ ಶಿಕ್ಷಕರು ಪ್ರತಿ ನಿತ್ಯ ಶಾಲೆಗೆ ಹೋಗುತ್ತಿದ್ದಾರೆ. ಎಲ್ಲ ಪೂರ್ವ ಸಿದ್ಧತೆಗಳೂ ಈಗಾಗಲೆ ಪೂರ್ಣಗೊಂಡಿವೆ. ಆದಾಗ್ಯೂ ಶಾಲೆಗೆ ಹೋಗುವುದು ವಿನಾಕಾರಣವೆನಿಸುತ್ತದೆ. ಕಾಲೇಜುಗಳಿಗೆ ಕೇಂದ್ರ ಸರಕಾರದ ಸುತ್ತೋಲೆ ಪ್ರಕಾರ ಜೂನ್ ಅಂತ್ಯದವರೆಗೆ ರಜೆ ಘೋಷಿಸಲಾಗಿದೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರನ್ನು ಶಾಲೆಗೆ ಕರೆಸಲಾಗುತ್ತಿದೆ.

ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಶಾಲಾ ಮುಖ್ಯಾಧ್ಯಾಪಕರು ಮತ್ತು ಭೋದಕೇತರ ಸಿಬ್ಬಂದಿ ಬಂದರೆ ಸಾಕಾಗುತ್ತದೆ. ಏನೂ ಕೆಲಸವಿಲ್ಲದೆ ಶಿಕ್ಷಕರು ಪ್ರತಿದಿನ ಶಾಲೆಗೆ ಬಂದು ಹೋಗುವುದು, ಕೆಲಸವಿಲ್ಲದೆ ಕೂಡ್ರುವುದು ಸಮಂಜಸವೆನಿಸುವುದಿಲ್ಲ. ಹಾಗಾಗಿ ಶಾಲೆಗಳು ಆರಂಭವಾಗುವವರೆಗೆ ಶಿಕ್ಷಕರು ಶಾಲೆಗೆ ಬರುವುದು ಅನಗತ್ಯವಾಗಿದೆ. ಕೂಡಲೇ ಈ ಕುರಿತು ಆದೇಶಹೊರಡಿಸಬೇಕು ಎಂದು ಹೊರಟ್ಟಿ ಆಗ್ರಹಿಸಿದ್ದಾರೆ.

—————-

ನಿಖರ ಮತ್ತು ನಿರಂತರ ಸುದ್ದಿಗಳಿಗಾಗಿ ಎಂ.ಕೆ.ಹೆಗಡೆಯವರ ಸಂಪಾದಕತ್ವದ ಪ್ರಗತಿವಾಹಿನಿ ಗ್ರುಪ್ ಸೇರಿ –

https://chat.whatsapp.com/EafT5Wmu1vX9fy6QwlfbOR

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button