
ಅವನ ಸಾವಿಗೆ ಕಾರಣವಾಯ್ತು “ರಾಖಿ”
ಪ್ರಗತಿವಾಹಿನಿ ಸುದ್ದಿ : ಆ ದಂಪತಿಗಳಿಬ್ಬರು ಪ್ರೀತಿಸಿ ಮದುವೆಯಾಗಿದ್ದರು, ತಮ್ಮ ಕುಟುಂಬಗಳನ್ನು ವಿರೋಧಿಸಿ ದೈರ್ಯದಿಂದ ತಮ್ಮ ಬಾಳು ಕಟ್ಟಿಕೊಂಡಿದ್ದರು, ಆದರೆ ಇಂದಿನ ರಕ್ಷಾ ಬಂಧನ್ ಪತ್ನಿಯ ಎದುರೇ ಪತಿ ಸಾಯುವಂತೆ ಮಾಡಿದೆ ಎನ್ನುವುದು ದುರಾದೃಷ್ಟಕರ ಸಂಗತಿ.
ನಮ್ಮ ನೆರೆಯ ರಾಜ್ಯ ಆಂದ್ರಪ್ರದೇಶದ ವಾರಾಂಗಲ್ ನಲ್ಲಿ ಈ ಒಂದು ಘಟನೆ ನಡೆದಿದೆ, ವಿವಾಹ ನಂತರ ಬಂದ ಮೊದಲ ರಾಖಿ ಹಬ್ಬಕ್ಕೆ ತನ್ನ ಸಹೋದರನಿಗೆ ರಾಖಿ ಕಟ್ಟಲು ಹಂಬಲಿಸಿದ ಪತ್ನಿ, ಗಂಡನ ಬಳಿ ಬೆಳ್ಳಿ ರಾಖಿ ಕೇಳುತ್ತಾಳೆ, ತನ್ನ ಸಹೋದರನಿಗೆ ರಾಖಿ ಕಟ್ಟಬೇಕು, ನನಗೆ ಬೆಳ್ಳಿಯ ರಾಖಿ ತಂದು ಕೊಡಿ ಎಂದು ಕೇಳಿದ್ದಾಳೆ.
ಅದಕ್ಕೆ ಪತಿ ಅಗತ್ಯವಿಲ್ಲ, ಈಗ ನೀನು ಊರಿಗೆ ಹೋಗುವುದು ಬೇಡ, ರಾಖಿ ಕಟ್ಟುವುದು ಬೇಡ ಎಂದಿದ್ದಾನೆ. ಇದೆ ವಿಚಾರವಾಗಿ ಇಬ್ಬರ ನಡುವೆ ಘರ್ಷಣೆಯಾಗಿದೆ. ಆಗಿದ್ದು ಆಗೋಯ್ತು ಅಂತ ರಾತ್ರಿ ಮಲಗಿದ ಪತ್ನಿ ಬೆಳಿಗ್ಗೆ ಎದ್ದು ನೋಡಿದರೆ ಪತಿ ತನ್ನ ಮುಂದೆ ನೇಣಿಗೆ ಶರಣಾಗಿ ನೇತಾಡುತ್ತಿದ್ದದ್ದು ಕಂಡಿದೆ.
ಮಾಹಿತಿಯ ಪ್ರಕಾರ, ವಾರಾಂಗಲ್ ವಾಸಿ ರವೀಂದ್ರಚಾರಿ (23) ಎರಡು ತಿಂಗಳ ಹಿಂದೆ, ವಾರಂಗಲ್ ಗ್ರಾಮೀಣ ಜಿಲ್ಲೆಯ ಗುಡೆಪ್ಪಾಡ್ ಗ್ರಾಮದ ಯುವತಿಯನ್ನು ಪ್ರೀತಿಸಿ ವಿವಾಹವಾದರು. ನಂತರ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರ ಜೀವನ ಚನ್ನಾಗಿಯೇ ನಡೆಯುತ್ತಿತ್ತು.
ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ರವೀಂದ್ರಚಾರಿ , ಆಟೋ ಗೆ ಪಡೆದಿದ್ದ ಸಾಲದ ಕಂತನ್ನು ಕಟ್ಟಡ ಕಾರಣ, ಆಟೋವನ್ನು ವಶ ಪಡಿಸಿಕೊಂಡಿದ್ದರು. ಅಂದಿನಿಂದ ಸಂಪಾದನೆ ಇಲ್ಲದೆ ಮನೆಯಲ್ಲಿಯೇ ಇದ್ದು ಬಿಟ್ಟಿದ್ದ ರವೀಂದ್ರಚಾರಿ.
ಮೃತನ ಪತ್ನಿ ತವರು ಮನೆಗೆ ಹೋಗಿ ಸಹೋದರನಿಗೆ ರಾಖಿ ಕಟ್ಟಬೇಕು, ತನಗೆ ಬೆಳ್ಳಿ ರಾಖಿ ಬೇಕು ಎಂದು ಕೇಳಿದ್ದಾಳೆ. ಇದೆ ವಿಚಾರವಾಗಿ ಮಂಗಳವಾರ ರಾತ್ರಿ ಇಬ್ಬರೂ ಮಾತಿನ ಚಕಮಕಿಯಲ್ಲಿ ಸಿಲುಕಿ ಪರಸ್ಪರರ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರನೇ ದಿನ (ಬುಧವಾರ) ಪತ್ನಿ ಎದ್ದೇಳುವ ಮುನ್ನ ಪತಿ ರವೀಂದ್ರಾಚಾರಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ.
ಪ್ರಕರಣ ದಾಖಲಿಸಿರುವ ಪೊಲೀಸರು , ಮರಣೋತ್ತರ ಪರೀಕ್ಷೆಯ ನಂತರ ದೇಹವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. /////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ