Belagavi NewsBelgaum NewsKannada NewsKarnataka NewsNational

*ಉದ್ಯಮಿ ಸಂತೋಷ್ ಪದ್ಮಣ್ಣ ಕೊಲೆ ಪ್ರಕರಣದಲ್ಲಿ ಪತ್ನಿ ಉಮಾ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉದ್ಯಮಿ ಸಂತೋಷ್ ಪದ್ಮಣ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಉಮಾ ಹಾಗೂ ಆಕೆಯ ಪ್ರಿಯಕರ ಶೋಭೇಶ್ ಗೌಡ ಹಾಗೂ ಸ್ನೇಹಿತ ಪವನ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. 

ಅ.9 ರಂದು ಮೃತಪಟ್ಟಿದ್ದ ಸಂತೋಷ್ ಪದ್ಮಣ್ಣ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತನ ಪುತ್ರಿ ಸಂಜನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.‌ ಅ.9 ರಂದು ಸಂತೋಷ್ ಮೃತಪಟ್ಟಿದ್ದು, ಇದನ್ನು ಹೃದಯಾಘಾತವೆಂದು ಬಿಂಬಿಸಲಾಗಿತ್ತು. ಆದರೆ ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಹಾಗೂ ಸಿಸಿಟಿವಿ ದೃಶ್ಯಗಳು ಕಣ್ಮರೆಯಾಗಿರುವುದು ಸಂಜನಾ ಅನುಮಾನಕ್ಕೆ ಕಾರಣವಾಗಿತ್ತು. ಸಂಜನಾ ದಾಖಲಿಸಿದ ದೂರನ್ನಾಧರಿಸಿ ಪೊಲೀಸರು ತನಿಖೆ ಕೈಗೊಂಡಾಗ, ಮೃತನ ಪತ್ನಿ ಉಮಾ ಪದ್ಮಣ್ಣ ಹಾಗೂ ಆಕೆಯ ಪ್ರಿಯಕರ ಶೋಭೇಶ್ ಗೌಡ ಉಸಿರುಕಟ್ಟಿಸಿ ಕೊಲೆ ಮಾಡಿರುವುದು ತಿಳಿದುಬಂದಿತ್ತು.

ಮಂಗಳೂರು ಮೂಲದವರಾದ ಶೋಭೇಶ್ ಗೌಡ ಹಾಗೂ ಪವನ್ ರನ್ನು ವಶಕ್ಕೆ ಪಡೆದ ಮಾಳಮಾರುತಿ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದ್ದು, 14 ದಿನ ನ್ಯಾಯಾಂಗ್ ಬಂಧನದಲ್ಲಿ ಇಡಲಿದ್ದಾರೆ.

Home add -Advt

Related Articles

Back to top button