Kannada NewsKarnataka NewsLatest

*ಪತಿಯನ್ನೇ ಹತ್ಯೆಗೈದ ಪತ್ನಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತ್ನಿಯೇ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ.

ಉಮೇಶ್ ದಾಮಿ (27) ಮೃತ ವ್ಯಕ್ತಿ. ಮನಿಷಾ ದಾಮಿ ಪತಿಯನ್ನು ಕೊಂದ ಪತ್ನಿ. ಈ ದಂಪತಿ ಕಾಲೇಜೊಂದರಲ್ಲಿ ಸೆಕ್ಯೂರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು.

ಅನೈತಿಕ ಸಂಬಂಧ ಅನುಮಾನ ಹಿನ್ನಲೆಯಲ್ಲಿ ಪತಿ-ಪತ್ನಿ ನಡುವೆ ಜಗಳವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಪತ್ನಿ ಮನಿಷಾ, ಚಾಕುವಿನಿಂದ ಪತಿಯ ಎದೆಗೆ ಇರಿದು ಕೊಂದಿದ್ದಾಳೆ.

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button