ಪ್ರಗತಿವಾಹಿನಿ ಸುದ್ದಿ; ಹಾವೇರಿ: ಅಕ್ರಮ ಸಂಬಂಧಗಳಿಗೆ ಬೇಸತ್ತ ಪತಿ ಆಕೆಯನ್ನು ಹತ್ಯೆ ಮಾಡಲು ನಿರ್ಧರಿಸಿ; ಬಾಮೈದನಿಂದಲೆ ಸಹಾಯಪಡೆದು ಕೊಲೆ ಮಾಡಿರುವ ಘಟನೆ ಹಾವೇರಿಯ ಕೆರೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಶಕುಂತಲಾ ಉಪ್ಪಾರ್ (32) ಕೊಲೆಯಾದ ದುರ್ದೈವಿ. 15 ವರ್ಷಗಳ ಹಿಂದೆ ಶಕುಂತಲಾ ಹಾಗೂ ಹನುಮಂತಪ್ಪ ವಿವಾಹವಾಗಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ಪತ್ನಿ ಪರಪುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಹಿಂದೊಮ್ಮೆ ಪರಪುಷನೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಳು ಎನ್ನಲಾಗಿದೆ. ಬಳಿಕ ಶಕುಂತಲಾ ತಾಯಿ ಹಾಗೂ ಪೊಲೀಸರು ಆಕೆಗೆ ಬುದ್ಧಿ ಹೇಳಿ ಮತ್ತೆ ಗಂಡನ ಮನೆಗೆ ಸೇರಿಸಿದ್ದರು. ಆದರೂ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಳು ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಬೇಸತ್ತ ಪತಿ ಹನುಮಂತಪ್ಪ, ಶಕುಂತಲಾ ಸಹೋದರ ಬಸವರಾಜ್ ಜೊತೆ ಸೇರಿ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿಗಳಾದ ಹನುಮಂತಪ್ಪ ಹಾಗೂ ಬಸವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿವೃದ್ಧಿ ಸಹಿಸದವರ ಕುಚೋದ್ಯ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ದೂರು
ಇ ಲೈಬ್ರರಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ (Updated News)
ಪತ್ರಕರ್ತ ಯಲ್ಲಪ್ಪ ಕಾನಾರ ಕುಟುಂಬಕ್ಕೆ ಪರಿಹಾರ ನೀಡಿದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ