Belagavi NewsBelgaum NewsKarnataka News

*ಪತಿಯ ಕೊಲೆಗೆ ಪತ್ನಿಯಿಂದಲೆ ಸುಪಾರಿ: 24 ಗಂಟೆಯಲ್ಲಿ 3 ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವಣ್ಣೂರ ಗ್ರಾಮದಲ್ಲಿ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಪ್ರಕರಣದ ಸಂಬಂಧ ಮೃತನ ಪತ್ನಿ, ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡು ದಿನದ ಹಿಂದೆಯಷ್ಟೇ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ನಿಂಗಪ್ಪ ಅರವಳ್ಳಿ ಎಂಬಾತ ಮನೆಯ ಕಟ್ಟೆಯ ಮೇಲೆ ಮಲಗಿದ್ದ ವೇಳೆ ಇಬ್ಬರು ಕೊಲೆ ಮಾಡಿ ಎಸ್ಕೆಪ್ ಆಗಿದ್ದರು.

ಈ ಘಟನೆಯ ಸಂಬಂಧ ಮೃತ ನಿಂಗಪ್ಪನ ಹೆಂಡತಿ ನೀಲಮ್ಮ ಹಾಗೂ ಆಕೆಯ ಗೆಳೆಯ ಮಹೇಶ್ ಗೂಳನ್ನರ್ ಸೇರಿಕೊಂಡು ಪಕ್ಕದ ಗ್ರಾಮದ ಯಲ್ಲಪ್ಪ ಎಂಬಾತನಿಗೆ ಸುಪಾರಿಯನ್ನು ನೀಡಿದ್ದರು.

ಅದರಂತೆ ನಿಂಗಪ್ಪ ಮಲಗಿದ್ದಾಗ ಆರೋಪಿ ಯಲ್ಲಪ್ಪ ಬಂದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬೆನ್ನಟ್ಟಿ ಹೋರಟ ನೇಸರಗಿ ಪೊಲೀಸರು 24 ಗಂಟೆಯಲ್ಲಿ 3 ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button