ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ – ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರಿಗೆ ಬಂಧನದ ಭೀತಿ ಎದುರಾಗಿದ್ದು, ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಇಂದು ರಾತ್ರಿಯೇ ಶ್ರೀಗಳ ಬಂಧನವಾಗುವ ಅನುಮಾನ ವ್ಯಕ್ತವಾಗಿದೆ.
10ನೇ ತರಗತಿ ಓದುತ್ತಿರುವ ಮುರುಘಾಮಠದ ಹಾಸ್ಟೆಲ್ ನಲ್ಲಿದ್ದ ಇಬ್ಬರು ಬಾಲಕಿಯರನ್ನು ಲೈಂಗಿಕ ತೃಷೆಗಾಗಿ ಸ್ವಾಮಿಗಳು ಬಳಸಿಕೊಂಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕಳೆದ ಶನಿವಾರ ಪ್ರಕರಣ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರಿಂದ ಮತ್ತು ಓರ್ವ ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ವಿಷಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ತಮ್ಮನ್ನು ಬಂಧಿಸದಂತೆ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಗುರುವಾರ ವಿಚಾರಣೆ ಇತ್ತಾದರೂ ಶುಕ್ರವಾರಕ್ಕೆ ಮುಂದೂಡಲಾಗಿದೆ. ಇದು ಕೂಡ ಸ್ವಾಮೀಜಿಗಳ ಬಂಧನದ ಅನುಮಾನ ಹುಟ್ಟಿಸಿತ್ತು.
ಜೊತೆಗೆ ಗುರುವಾರ ರಾತ್ರಿಯಾಗುತ್ತಿದ್ದಂತೆ ಮಠದ ಸುತ್ತಲೂ ಮತ್ತು ಚಿತ್ರದುರ್ಗ ನಗರದಾದ್ಯಂತ ಭಾರಿ ಬಂಧೋಬಸ್ತೆ ಕೈಗೊಳ್ಳಲಾಗುತ್ತಿದೆ. ಬೇರೆ ಜಿಲ್ಲೆಗಳಿಂದಲೂ ಹೆಚ್ಚಿನ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಚಿತ್ರದುರ್ಗದಲ್ಲಿ ಬೀಡುಬಿಟ್ಟಿದ್ದು, ತೀವ್ರ ಚರ್ಚೆಯಲ್ಲಿ ತೊಡಗಿದ್ದಾರೆ. ಎಲ್ಲೆಡೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುತ್ತಿದ್ದು, ವಾಹನಗಳ ತಪಾಸಣೆ ತೀವ್ರಗೊಂಡಿದೆ.
ಇವನ್ನೆಲ್ಲ ಗಮನಿಸಿದಾಗ ಶ್ರೀಗಳ ಬಂಧನ ಸನ್ನಿಹಿತವಾಗಿರುವ ಲಕ್ಷಣ ಕಾಣುತ್ತಿದೆ. ಶ್ರೀಗಳು 2 ದಿನಗಳ ಹಿಂದೆ ಅಜ್ಞಾತ ಸ್ಥಳಕ್ಕೆ ತೆರಳಲು ಹೊರಟಿದ್ದಾಗಿ ಪೊಲೀಸರು ಅವರನ್ನು ತಡೆದು ಮಠಕ್ಕೆ ವಾಪಸ್ ಕರೆತಂದಿದ್ದನ್ನು ಇಲ್ಲಿ ಸ್ಮರಿಸಬಹುದು.
https://pragati.taskdun.com/latest/murughasharana-case-ncpr-suomoto-dely-police-fir-arrest/
https://pragati.taskdun.com/latest/sexual-harassment-casemiurughashreearresthaveribankapurahiawaye/
ಮುರುಘಾಶರಣರ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
https://pragati.taskdun.com/latest/murugha-shreesexual-harrasment-caseposco-casefir-file/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ