Latest

ಜೈಲು ಪಾಲಾದ ಆರ್ಯನ್ ಖಾನ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮುಂಬೈನ ಅರ್ಥುರ್ ಜೈಲು ಸೇರಿದ್ದಾರೆ.

ಆರ್ಯನ್ ಖಾನ್ ನನ್ನು ನಿನ್ನೆಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಜೈಲಿನಲ್ಲಿ ಉಂಟಾದ ಆಡಳಿತಾತ್ಮಕ ಸಮಸ್ಯೆಯಿಂದಾಗಿ ಇಂದು ಜೈಲಿಗೆ ಸೇರಿದ್ದಾರೆ. ಮುಂಬೈನ ಅರ್ಥುರ್ ರೋಡ್ ನಲ್ಲಿರುವ ಜೈಲಿನಲ್ಲಿ ಆರ್ಯನ್ ಖಾನ್ ನನ್ನು ಇರಿಸಲಾಗಿದೆ.

Home add -Advt

ಆರ್ಯನ್ ಖಾನ್ ಜೊತೆಗೆ ಡ್ರಗ್ಸ್ ಪ್ರಕರಣದ ಉಳಿದ 7 ಆರೋಪಿಗಳು ಕುಡ ಜೈಲು ಪಾಲಾಗಿದ್ದಾರೆ. ಈ ನಡುವೆ ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಕೂಡ ಆರಂಭವಾಗಿದೆ. ಮುಂಬೈ ಎಸ್ಪ್ಲಾನೆಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿರುವ ಎನ್ ಡಿ ಪಿಎಸ್ ಪೀಠ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದೆ.

ಆನ್ ಲೈನ್ ಗೇಮ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ಗೆಲ್ಲುವ ಆಮಿಷ; ಡ್ರೀಮ್ ಗೇಮ್ ವಿರುದ್ಧ ಎಫ್ ಐಆರ್ ದಾಖಲು

ಇನ್ನೋರ್ವ ಶಾಸಕರ ಮನೆ ಮೇಲೆ ಕಲ್ಲು ತೂರಾಟ; 8 ಕಾರುಗಳ ಗಾಜು ಪುಡಿ ಪುಡಿ

Related Articles

Back to top button