*ಚಳಿಗಾಲದ ಅಧಿವೇಶನ: ಅಂತಿಮ‌ ಹಂತದ ಸಿದ್ಧತೆ ಪರಿಶೀಲಿಸಿದ ಸಭಾಧ್ಯಕ್ಷರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಡಿಸೆಂಬರ್ 9 ರಿಂದ ಆರಂಭವಾಗಲಿರುವ  ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು,‌ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಡಿಸೆಂಬರ್ 08ರಂದು ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು. ಮೊದಲಿಗೆ ನೆಲಮಹಡಿಯ ಮಂತ್ರಿಗಳ ಕೊಠಡಿಯ ಕಾರಿಡಾರನಲ್ಲಿ ಸಂಚರಿಸಿದರು. ‘ಬಾಲಕ ಮೋಹನದಾಸ್ ಟು ಮಹಾತ್ಮ’ ಥೀಮ್ ಇಟ್ಟುಕೊಂಡು ಕೆಆರ್ ಐಡಿಎಲ್ ಬೆಳಗಾವಿ ವಿಭಾಗ ಇವರು ಸಿದ್ಧಪಡಿಸಿರುವ ಮಹಾತ್ಮ ಗಾಂಧೀಜಿ ಜೀವನಗಾಥೆಯ 100 ವಿಶೇಷವಾದ ಛಾಯಾಚಿತ್ರಗಳ ವೀಕ್ಷಣೆ‌ ನಡೆಸಿದರು. ಬಳಿಕ ಮೊದಲನೇ … Continue reading *ಚಳಿಗಾಲದ ಅಧಿವೇಶನ: ಅಂತಿಮ‌ ಹಂತದ ಸಿದ್ಧತೆ ಪರಿಶೀಲಿಸಿದ ಸಭಾಧ್ಯಕ್ಷರು*