ರಾಜ್ಯಪಾಲರ ನಡೆ ಸಂವಿಧಾನದ ಕಗ್ಗೊಲೆ- ಪ್ರಜಾಪ್ರಭುತ್ವದ ಸರ್ವನಾಶ; ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ; ಮುಖ್ಯಮಂತ್ರಿಗಳಿಗೆ ನೀಡಿರುವ ನೋಟೀಸ್ ಹಿಂಪಡೆಯಿರಿ: ಸಂಪುಟ ಸಭೆ ನಿರ್ಣಯ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮುಡಾ ಪ್ರಕರಣದ ಕುರಿತು ಸಮಗ್ರ ಮಾಹಿತಿ ನೀಡಿದ ನಂತರವೂ ರಾಜ್ಯಪಾಲರು ನೋಟೀಸ್ ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ, ಇದರ ಹಿಂದೆ ರಾಜಕಾರಣವಿದೆ. ಹಾಗಾಗಿ ತಕ್ಷಣ ರಾಜ್ಯಪಾಲರು ನೋಟೀಸ್ ಹಿಂದಕ್ಕೆ ಪಡೆಯಬೇಕೆಂದು ಕೋರುವ ನಿರ್ಣಯವನ್ನು ಗುರುವಾರ ನಡೆದ ಸಚಿವಸಂಪುಟ ಸಭೆ ತೆಗೆದುಕೊಂಡಿದೆ.
ಸಭೆಯ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ರಾಜ್ಯಪಾಲರು ನೋಟೀಸ್ ನೀಡಿರುವ ವಿಷಯ ನೇರವಾಗಿ ತಮಗೆ ಸಂಬಂಧಿಸಿದ್ದಾಗಿರುವುದರಿಂದ ತಾವು ಸಂಪುಟ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಹಾಗಾಗಿ ನನ್ನ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸುದೀರ್ಘವಾಗಿ ಚರ್ಚಿಸಿದ ನಂತರ ನೋಟೀಸ್ ಹಿಂದಕ್ಕೆ ಪಡೆಯುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಈ ಪ್ರಕರಣದಲ್ಲಿ ರಾಜಕಾರಣ ಮಾಡುತ್ತಿದೆ. ಆದರೆ ರಾಜ್ಯಪಾಲಕರು ವಿವೇಚನೆಯಿಂದ ವರ್ತಿಸುತ್ತಾರೆ ಎನ್ನುವ ವಿಶ್ವಾಸವಿದೆ. ರಾಜ್ಯಪಾಲರ ಸ್ಥಾನಕ್ಕೆ ಕುಂದುಂಟಾಗಬಾರದು. ಅದಕ್ಕೆ ರಾಜ್ಯಪಾಲರು ಅವಕಾಶ ನೀಡುವುದಿಲ್ಲ, ನೋಟೀಸ್ ಹಿಂದಕ್ಕೆ ಪಡೆಯಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ರಾಜಭವನದಿಂದ ಮೊದಲಬಾರಿಗೆ ವಿವರಣೆ ಕೇಳಿದಾಗಲೇ ಸರಕಾರ ಸಮಗ್ರವಾಗಿ ಮಾಹಿತಿ ಒದಗಿಸಿದೆ. ಇದರಲ್ಲಿ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪಿಲ್ಲ ಎನ್ನುವುದನ್ನು ಮನವರಿಕೆ ಮಾಡಿದ್ದೇವೆ. ಅದಾದ ನಂತರವೂ ನೋಟೀಸ್ ನೀಡಲಾಗಿದೆ. ಮುಖ್ಯಮಂತ್ರಿಗಳ ಪತ್ನಿಗೆ ತಮ್ಮ ಸಹೋದರನಿಂದ ಬಂದಿರುವ ಜಮೀನನ್ನು ಮುಡಾ ವಶಕ್ಕೆ ಪಡೆದಿದೆ. ಅದಕ್ಕಾಗಿ ಸೈಟ್ ನೀಡಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಖಾಸಗಿ ವ್ಯಕ್ತಿಯೊಬ್ಬರು ಮಾಡಿದ ಮನವಿಗೆ ಸಂಬಂಧಿಸಿದಂತೆ ನೋಟೀಸ್ ನೀಡುವ ಅಗತ್ಯವಿರಲಿಲ್ಲ ಎಂದು ಅವರು ತಿಳಿಸಿದರು.
ಎಚ್.ಕೆ.ಪಾಟೀಲ, ಡಾ.ಜಿ.ಪರಮೇಶ್ವರ, ಮುನಿಯಪ್ಪ, ಪ್ರಿಯಾಂಕ ಖರ್ಗೆ ಸೇರಿದಂತೆ ಹಲವಾರು ಸಚಿವರು ಪತ್ರಿಕಾಗೋಷ್ಠಿಯಲ್ಲಿದ್ದರು.
ರಾಜ್ಯಪಾಲರ ನಡೆ ಸಂವಿಧಾನದ ಕಗ್ಗೊಲೆ – ಪ್ರಜಾಪ್ರಭುತ್ವದ ಸರ್ವನಾಶ
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ
ಕನ್ನಡಿಗರ ಆಶೀರ್ವಾದದೊಂದಿಗೆ ಮತ್ತು ಕಾನೂನ್ಮಾತಕವಾಗಿ ಆಯ್ಕೆವಾಗಿರುವಂತಹ ಬಹುಮತ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಬುಡಮೇಲು ಮಾಡುವ ಕ್ರಮಕ್ಕೆ ಮತ್ತೊಮ್ಮೆ ಕೇಂದ್ರ ಸರ್ಕಾರ ಮುಂದಾಗಿದ್ದು ಈ ಬಾರಿ ರಾಜ್ಯಪಾಲರನ್ನು ಅವರ ಕೈಗೊಂಬೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಮಾನ್ಯ ಮುಖ್ಯ ಮಂತ್ರಿಯವರಿಗೆ ನೊಟೀಸು ಕಾನೂನು ಹಾಗೂ ಸಂವಿಧಾನ ಬಾಹಿರವಾಗಿದೆ.
ಟಿ.ಜೆ. ಅಬ್ರಾಹಂ, ಒಬ್ಬ ಅಪರಾಧ ಹಿನ್ನೆಲೆಯುಳ್ಳ ಮತ್ತು ಕಾನೂನನ್ನು ದುರ್ಬಳಕೆಗೆ ಪ್ರಸಿದ್ದವಾಗಿದ್ದು, ಈಗಾಗಲೇ ಮಾನ್ಯ ಸರ್ವೊಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ವೇದಿಕೆಯನ್ನು ದುರ್ಬಳಕೆಗೊಳಿಸಿರುವ ಹಿನ್ನೆಲೆಯಲ್ಲಿ ರೂ.25.00 ಲಕ್ಷ ದಂಡ ವಿಧಿಸಿದೆ. ಈ ಹಿನ್ನೆಲೆಯ ವ್ಯಕ್ತಿಯ ಅರ್ಜಿಯ ಮೇಲೆ ರಾಜ್ಯಪಾಲರು ಮಾನ್ಯ ಮುಖ್ಯಮಂತ್ರಿಗಳಿಗೆ ತಾರೀಖು 26.07.2024ರಂದು ತಮ್ಮ ವಿರುದ್ಧ ಕಲಂ 17A, 19 ಭ್ರಷ್ಠಾಚಾರ ನಿಗ್ರಹ ಕಾಯ್ದೆ1988 ಮತ್ತು ಕಲಂ 218 BNSS ಅಡಿಯಲ್ಲಿಅಭಿಯೋಜನಾ ಮಂಜೂರಾತಿ ಏಕೆ ನೀಡಬಾರದು ಎಂದು ಏಳು ದಿನಗಳೊಳಗೆ ಉತ್ತರ ನೀಡಿ ಎಂದು ಕಾರಣ ಕೇಳಿ ನೋಟೀಸ್ ನೀಡಿರುತ್ತಾರೆ.
ಈ ನೋಟೀಸ್ ಸಂಪೂರ್ಣವಾಗಿ ಕಾನೂನು ಮತ್ತು ಸಂವಿಧಾನ ಬಾಹಿರವಲ್ಲದೆ ರಾಜಕೀಯ ಪ್ರೇರಿತವಾಗಿರುತ್ತದೆ. ರಾಜಭವನವನ್ನು ಪಶ್ಚಿಮ ಬಂಗಾಳ, ಕೇರಳ, ದೆಹಲಿ, ತಮಿಳುನಾಡು ಮತ್ತು ಇತರ ಬಿಜೆಪಿಯೇತರ ಸರ್ಕಾರ ಅಸ್ತಿತ್ವದಲ್ಲಿ ಇರುವ ರಾಜ್ಯಗಳ ಮಾದರಿಯಲ್ಲಿ ಕೇಸರಿಕರಣಗೊಳಿಸಿ ರಾಜ ಭವನಗಳನ್ನು ಭಾರತೀಯ ಜನತಾ ಪಕ್ಷದ ಪ್ರಾದೇಶಿಕ ಕಚೇರಿಗಳನ್ನಾಗಿ ಬಳಸಿ, ಈಗ ಅದೇ ಪ್ರವೃತ್ತಿಯನ್ನು ಕರ್ನಾಟಕದಲ್ಲೂ ಕೂಡ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಟಿ.ಜೆ. ಅಬ್ರಾಹಂ ದಿ: 18.7.2024ರಂದು ಲೋಕಾಯುಕ್ತ ಪೊಲೀಸರಿಗೆ ಒಂದು ದೂರನ್ನು ನೀಡಿರುತ್ತಾರೆ. ಈ ದೂರಿನಲ್ಲಿ MUDA ಸಂಸ್ಥೆಯು ಮಾನ್ಯ ಮುಖ್ಯಮಂತ್ರಿಗಳಾದಂತಹ ಶ್ರೀ ಸಿದ್ದರಾಮಯ್ಯ ರವರ ಧರ್ಮಪತ್ನಿ ಶ್ರೀಮತಿ ಪಾರ್ವತಿ ಅವರಿಗೆ ತಾವು ಕಳೆದು ಕೊಂಡಿರುವಂತಹ ಭೂ ಮಾಲಿಕತ್ವಕ್ಕೆ ಪರಿಹಾರದ ರೂಪದಲ್ಲಿ ನೀಡಿರುವಂತಹ ನಿವೇಶನಗಳು, ಒಬ್ಬ ಸಾರ್ವಜನಿಕ ಸೇವಕ ಅನೈತಿಕವಾದ ಲಾಭವನ್ನು ಪಡೆದ ಅಪರಾಧವಾಗಿರುತ್ತದೆ ಮತ್ತು ಭ್ರಷ್ಟಾಚಾರ ಕಾಯ್ದೆ ಮತ್ತು BNSS ಹಲವಾರು ಅಪರಾಧಗಳಾಗಿರುತ್ತದೆಯೆಂದು ಆರೋಪಿಸಿರುತ್ತಾರೆ. ಕೇವಲ ಒಂದೇ ವಾರದಲ್ಲಿ
ದಿ: 26.07.2024 ರಂದು ಗೌರವಾನ್ವಿತ ರಾಜ್ಯಪಾಲರಿಗೂ ಒಂದು ಅರ್ಜಿಯನ್ನು ಸಲ್ಲಿಸಿ ಕಲಂ 17A, 19 ಭ್ರಷ್ಠಾಚಾರ ನಿಗ್ರಹ ಕಾಯ್ದೆ1988 ಮತ್ತು ಕಲಂ 218 BNSS ಅಡಿಯಲ್ಲಿಅಭಿಯೋಜನಾ ನೀಡಲು ಕೋರಿರುತ್ತಾರೆ. ಈ ಅರ್ಜಿಯನ್ನು ದಿ:26.07.2024ರಂದು ಬೆಳಿಗ್ಗೆ 11.30 ಗಂಟೆಗೆ ನೀಡಿದ್ದು, ನಂತರ ಅರ್ಜಿಗೆ ಸೇರ್ಪಡೆ ಅರ್ಜಿಯನ್ನು ಕೂಡ ನೀಡಿರುತ್ತಾರೆ.
ಇದೇ MUDA ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: 05.07.2024ರಂದು ಸ್ವಯಂಪ್ರೇರಿತವಾಗಿ ಗೌರವಾನ್ವಿತ ರಾಜ್ಯಪಾಲರು ಮಾಧ್ಯಮದ ಮೂಲಕ ಮತ್ತು ಸಾರ್ವಜನಿಕ ವಲಯದಲ್ಲಿ MUDA ಸಂಸ್ಥೆಯ ಬಗ್ಗೆ ವ್ಯಾಪಕ ಭ್ರಷ್ಟಾಚಾರದ ಚರ್ಚೆ ಕೇಳಿ ಬಂದಿರುತ್ತದೆ ಆದ್ದರಿಂದ ತಮ್ಮ ವರದಿಯನ್ನು ಸಲ್ಲಿಸಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿರುತ್ತಾರೆ. ಹಾಗೆಯೇ ದಿ: 15.07.2024ರಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸಂಸ್ಥೆಯಿಂದ ಸ್ವೀಕೃತವಾಗಿರುವಂತಹ ಅರ್ಜಿ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲು ಮತ್ತು ಸ್ವೀಕೃತವಾಗಿರುವಂತಹ ಅರ್ಜಿಯ ಬಗ್ಗೆ ಕ್ರಮ ಜರುಗಿಸಲು ಪತ್ರವನ್ನು ಬರೆದಿರುತ್ತಾರೆ.
ಈ ಪತ್ರಗಳ ಹಿನ್ನೆಲೆಯಲ್ಲಿ, ಮುಖ್ಯ ಕಾರ್ಯದರ್ಶಿಗಳು ತಮ್ಮ ಸುದೀರ್ಘವಾದ ವರದಿಯನ್ನು 26.07.2024ರಂದು ಲಿಖಿತವಾಗಿ ಮಾನ್ಯ ರಾಜ್ಯಪಾಲರಿಗೆ ಖುದ್ದಾಗಿ ರಾಜಭವನಕ್ಕೆ ತೆರಳಿ ಸಂಜೆ 6.30 ಗಂಟೆಯಲ್ಲಿ ನೀಡಿ, ಸಂಜೆ 6.30 ರಿಂದ 7.30 ರವರೆಗೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ಹಾಗೂ ಪ್ರಸ್ತಾಪಿಸಿದಂತಹ ವಿಷಯಗಳ ಬಗ್ಗೆ ಸಂಪೂರ್ಣವಾದಂತಹ ವಿವರಣೆಯನ್ನು ನೀಡಿರುತ್ತಾರೆ.
ಆದರೂ ಕೂಡ ಅದೇ ದಿನ 26.07.2024ರಂದು ಮಾನ್ಯ ರಾಜ್ಯಪಾಲರ ಕಛೇರಿಯಿಂದ ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳಾದಂತಹ ಶ್ರೀ ಪ್ರಭುಶಂಕರ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮುಖ್ಯಮಂತ್ರಿಗಳಿಗೆ ಮಾನ್ಯ ರಾಜ್ಯಪಾಲರಿಂದ ಕಾರಣ ಕೇಳಿ ನೋಟೀಸ್ ನೀಡಬೇಕು ಎಂದು ತಿಳಿಸಿರುತ್ತಾರೆ. ಸಮಯ ತಡವಾಗಿರುವುದರಿಂದ ಮರು ದಿನ ನೀಡಿ ಎಂದು ಅಪರ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಕ್ಕಾಗಿ, ಮರುದಿನ ಅಂದರೆ ದಿ:27.07.2024 ರಂದು ಮಧ್ಯಾಹ್ನ 2.00ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಈ ನೋಟೀಸ್‌ನ್ನು ರಾಜಭವನದ ಸಿಬ್ಬಂದಿಗಳು ತಲುಪಿಸಿರುತ್ತಾರೆ.
ಮಾನ್ಯ ರಾಜ್ಯಪಾಲರ ಎಂದೂ ಕಾಣದ ತರಾತುರಿಯ ಆಶ್ಚರ್ಯದ ಕ್ರಮ ಈ ಪ್ರಕರಣದಲ್ಲಿ ಎದ್ದು ಗೋಚರಿಸುತ್ತಿದೆ. ದಿ: 26.07.2024 ರಂದು ಮುಖ್ಯ ಕಾರ್ಯದರ್ಶಿಯವರು ನೀಡಿರುವ ವಿವರಣೆ ಮತ್ತು ಲಿಖಿತ ಉತ್ತರವನ್ನು ಯಾವುದೇ ಪರಾಮರ್ಶೆ ಮಾಡದೇ, ಟಿ.ಜೆ. ಅಬ್ರಾಹಂ ರವರು ನೀಡಿರುವ ಅದೇ ದಿನದ ಅರ್ಜಿಯನ್ನು ಸ್ವೀಕರಿಸಿ ಕೆಲವೇ ಗಂಟೆಗಳಲ್ಲಿ, ಸ್ವೀಕರಿಸಿದಂತಹ ಅರ್ಜಿ ಹಾಗೂ ದಾಖಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಳ್ಳದೆ ಮಾನ್ಯ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿರುವುದು ಕೇವಲ ರಾಜಕೀಯ ಉದ್ದೇಶಕ್ಕೋಸ್ಕರ ನೀಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದಲ್ಲದೇ ತಮ್ಮ ನೋಟೀಸ್‌ನಲ್ಲಿ ಮೇಲ್ನೋಟಕ್ಕೆ ಅಪರಾಧಗಳು ಆಗಿರುವಂತಹ ಸಾಧ್ಯತೆಗಳು ಎದ್ದು ಕಾಣುತ್ತದೆ ಎಂದು ತೀರ್ಪನ್ನು ಮಾನ್ಯ ರಾಜ್ಯಪಾಲರು ನೀಡಿದ್ದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ.
ಮುಖ್ಯವಾಗಿ 15.07.2024ರ ರಾಜ್ಯಪಾಲರ ಪತ್ರ ಮತ್ತು ಸಲಹೆಯಂತೆ ರಾಜ್ಯ ಸರ್ಕಾರವು ತಡವಿಲ್ಲದೆ ನಿವೃತ್ತ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಪಿ.ಎನ್. ದೇಸಾಯಿ ರವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿದ್ದು, 23.07.2024 ರಂದು ಸುಧೀರ್ಘವಾದಂತಹ terms of reference ಅನ್ನು ಕೂಡ ಸಮಿತಿಗೆ ವಹಿಸಿರುತ್ತದೆ. ಈ ಎಲ್ಲಾ ಮಾಹಿತಿ ಮಾನ್ಯ ರಾಜ್ಯಪಾಲರ ಗಮನಕ್ಕೆ ಇದ್ದರೂ ಕೂಡ, ಈ ವಿಷಯಗಳನ್ನು ಪರಿಗಣಿಸದೆ ಮಾನ್ಯ ಮುಖ್ಯ ಮಂತ್ರಿಗಳಿಗೆ ನೋಟೀಸನ್ನು ಜಾರಿ ಮಾಡಿರುವುದು ರಾಜ ಭವನವು ಕೇಸರಿಕರಣಕ್ಕೆ ಮುಂದಾಗಿದೆ.
ಮಾನ್ಯ ರಾಜ್ಯಪಾಲರ ಮುಂದೆ ಹಲವು ವರ್ಷಗಳಿಂದ ಇತ್ಯರ್ಥಗೊಳ್ಳದಂತಹ ಬಿಜೆಪಿ ನಾಯಕರ ಅಭಿಯೋಜನಾ ಅರ್ಜಿಗಳು ಕಲಂ 17A, 19 ಭ್ರಷ್ಠಾಚಾರ ನಿಗ್ರಹ ಕಾಯ್ದೆ1988 ಅಡಿ ಬಾಕಿ ಇದ್ದರೂ ಕೂಡ ಅವುಗಳನ್ನು ಇತ್ಯರ್ಥಗೊಳಿಸದೆ, ಕೆಲವೇ ಗಂಟೆಗಳಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಮೇಲೆ ವಿಚಾರ ಕೇಳಿ ನೊಟೀಸು ಜಾರಿಗೊಳಿಸಿರುವುದು ಮಾನ್ಯ ರಾಜ್ಯಪಾಲರ ಉನ್ನತ ಸಂವಿಧಾನ ಹುದ್ದೆಯ ದುರ್ಬಳಕೆ.
ಈ ಹಿಂದೆ ED ಸಂಸ್ಥೆಯ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ವಿಫಲವಾಗಿದ್ದು, ಈಗ ರಾಜ್ಯಪಾಲರನ್ನು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ತರಾತುರಿಯ ನಡೆ ಸಂವಿಧಾನಿಕ ತತ್ವಗಳನ್ನು ಗಾಳಿಗೆ ತೂರಿ ಕಾನೂನಿನ ವಿರುದ್ದವಿದ್ದು, ಕನ್ನಡಿಗರ ಆಶೀರ್ವಾದವನ್ನು ಅವಮಾನ ಮಾಡುತ್ತಿದ್ದಾರೆ. ಪದೇ ಪದೇ ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಕನ್ನಡಿಗರ ಅಸ್ಮಿತೆಯನ್ನು ಕಡೆಗಣಿಸುವ ಸತತ ಪ್ರಯತ್ನ ಮಾಡುತ್ತಿದ್ದು, ಮಾನ್ಯ ರಾಜ್ಯಪಾಲರ ಈ ನಡೆಯೂ ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ರಾಜ್ಯಪಾಲರ ಈ ಅಸಂವಿಧಾನಿಕ ನಡೆ ಮತ್ತು ರಾಜ ಭವನವನ್ನು ಕೇಸರಿಕರಣಗೊಳಿಸುವ ಕೇಂದ್ರ ಸರ್ಕಾರದ ಈ ಪ್ರಯತ್ನವನ್ನು ತೀವ್ರವಾಗಿ ಖಂಡಿಸುತ್ತೇವೆ.
ಕನ್ನಡಿಗರ ಆಶೀರ್ವಾದದಿಂದ ಆಯ್ಕೆಯಾದಂತಹ ಈ ಸರ್ಕಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ಆಶಯದಂತೆ ನಾವು ನಮ್ಮ ಜನರ ಹಿತಾಸಕ್ತಿ ಹಾಗೂ ಈ ಸರ್ಕಾರದ ಅಸ್ತಿತ್ವನ್ನು ಕಾಪಾಡಲು ಕಾನೂನು ಹಾಗೂ ರಾಜಕೀಯ ಹೋರಾಟವನ್ನು ಮಾಡಲಿಕ್ಕೆ ಸಿದ್ದರಿದ್ದೇವೆ.
DECISION
The cabinet/council of ministers, after having threadbare discussed the issue of issuance of show cause notice to the Hon’ble Chief Minister, Government of Karnataka, dated 26.07.2024, by the Hon’ble Governor of Karnataka,on taking note of the entire factual matrix as well as the well settled legal position and for the reasons herein mentioned, unanimously resolves to advise the Hon’ble Governor as follows:
- The Hon’ble Governor ought to have, under the present set of facts and circumstances, acted only on the aid and advise of the council of ministers and not in his discretion.
- The Hon’ble governor while proceeding to issue the show cause notice has failed to apply his mind to the facts of the case and not considered the material available on record. The governor ought to have taken in to consideration the reply submitted by the chief secretary dated 26.07.2024, received by him at around 6.30 pm on the same day. It is to be noted that the Chief Secretary in his reply has, inter alia, highlighted that direction contained in Governor’s letter dated 15/07/2024 was already acted upon by way of constitution of a Judicial Commission of enquiry under the Chairmanship of Justice P. N.Desai, vide Government Order of 14/07/2024. The issuance of show cause notice without consideration of these and all other relevant material available on the record suffers from total non- application of mind.
- The Hon’ble Governor has failed to take note of the fact that the application for sanction dated 26.07.24, suffers from serious legal infirmities and was not maintainable on a reading of the provisions of section 17A, 19 OF The prevention of corruption act,1988 and section 218 of the BNSS 2023 along with settled legal position as envisaged from the judgments referred to in the cabinet note. An application for previous approval under section 17A of the Prevention of corruption Act, 1988, can be made only by police officer and not anyone else.
- The Hon’ble Governor failed to take note of the fact that the application for sanction was also premature since the applicant had filed a complaint to the Lokayuktha Police on 18.07.2024 and thereafter had also not followed the mandatory procedure as laid down by the Hon’ble Supreme Court in Priyanka Srivastava in (2015) 6 SCC 287 and Lalitha Kumari (2014) 2 SCC 1.
- The Hon’ble Governor failed to take note of the fact that the entire allegations made by the applicant does not reveal any offence punishable under the provisions of the Prevention of Corruption Act, 1988 or the BNSS 2023.
- The Hon’ble Governor failed to take note of the fact that T.J. Abraham comes with criminal antecedents having criminal cases of blackmail and extortion registered against him and his conduct in misusing the public interest jurisdiction has also been frowned upon by the Hon’ble Supreme Court, levying costs on him. His acts are motivated and lacks bonafides and suffers from factual and legal malafides.
- The Hon’ble Governor in issuing the show cause notice has acted in undue haste, throwing to wind all procedural requirements. The fact that the Governor has proceeded to issue the notice on the very same day as he received the petition and on a petition by a person with criminal antecedents and without examining the records, relevant material as well as the reply of the Chief secretary dated 26.07.2024, added to the fact that several applications,such as the proposal for prior approval under section 17A of the Prevention of Corruption Act, 1988 against Smt Shashikala Jolle, former Minister, dated 09/12/2021, the proposal dated 26/02/2024 against Shri MurugeshNirani, former Minister, and the application for sanction under section 19 of the Prevention of Corruption Act, dated 13/05/2024, against Shri Janardhana Reddy, MLA and former Minister, before him are long pending, is therefore an act that suffers from legal malafides as laid down by the Hon’ble Supreme court in a catena of judgments including the ones referred to supra.
- A reading of the show cause notice, more so the finding by the Governor that “on persual of the request, it is seen that the allegations against you are of serious nature and prima facie seem plausible” leads to an undeniable conclusion that there is pre-judging of the issue, disregarding the report of the Chief Secretary dated 26/07/20223.
- The entire sequence of events and the admitted facts and circumstances based on the available records lead to an unequivocal conclusion that there is gross misuse of the Constitutional Office of the Governor and a concerted effort is beingto destabilise a lawfully elected majority government in Karnataka for political considerations.
Therefore, the council of Ministers, for all the aforesaid facts and reasons, strongly advises the Hon’ble Governor to withdraw the notice dated 26.07.2024,issued by him to the Hon’ble Chief Minister, based on the petition and addendum dated 26.07.2024, filed by one T.J. Abraham, and to proceed forthwith to reject the said application for sanction by denying previous approval and sanction as requested by the petitioner Abraham.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ