
ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕನ್ನಡದಲ್ಲಿ ಬರೆದಿದ್ದ ಬ್ಯಾಂಕ್ ಚೆಕ್ ನನ್ನು ಬ್ಯಾಂಕ್ ತಿರಸ್ಕರಿಸಿದ ಪ್ರಕರಣಕ್ಕೆ ಗ್ರಾಹಕರ ವ್ಯಾಜ್ಯಗಳ ಆಯೋಗ ಬ್ಯಾಂಕ್ ಗೆ 85,177ರೂಪಾಯಿ ದಂಡ ವಿಧಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ವಾದಿರಾಜಾಚಾರ್ಯ ಇನಾಮದಾರ್ ಎಂಬುವವರು ಚೆಕ್ ನಲ್ಲಿ ಕನ್ನಡದಲ್ಲಿ ಬರೆದಿದ್ದರು. ಇದನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಎಸ್ ಬಿ ಐ ಬ್ಯಾಂಕ್ ತಿರಸ್ಕರಿಸಿತ್ತು. 6000 ರೂಪಾಯಿ ವಿದ್ಯುತ್ ಬಿಲ್ ಪಾವತಿಗಾಗಿ ಬ್ಯಾಂಕ್ ಚೆಕ್ ನ್ನು ಕನ್ನಡದಲ್ಲಿ ಬರೆದು ನೀಡಿದ್ದರು. ಕನ್ನಡದ ಅಂಕಿಗಳು ತಿಳಿಯದ ಕಾರಣ ಬ್ಯಾಂಕ್ ಚೆಕ್ ನ್ನು ಅಮಾನ್ಯ ಮಾಡಿದೆ.
ಇದರಿಂದ ವಿದ್ಯುತ್ ಬಿಲ್ ಪಾವತಿಯಾಗದೇ ಬಾಕಿ ಉಳಿದಿದ್ದು, ಧಾರವಾಡ ಜಿಲ್ಲೆಯ ಕಲ್ಯಾಣ ನಗರದ ಎರಡನೇ ಕ್ರಾಸ್ ಮನೆಯ ವಿದುತ್ ಸಂಪರ್ಕ ಕಡಿತಗೊಂಡಿತ ಮಾಡಲಾಗಿತ್ತು. ಇದರಿಂದ ಸಾಕಷ್ಟು ಸಮಸ್ಯೆಯಾಗಿತ್ತು. ನೊಂದ ವಾದಿರಾಜಾಚಾರ್ಯರು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದರು. ವೃತ್ತಿಯಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದ ವಾದಿರಾಜಾಚಾರ್ಯರು ಕನ್ನಡ ಚೆಕ್ ತಿರಸ್ಕಾರ ಇದು ಕನ್ನಡಕ್ಕಾದ ಅವಮಾನ ಎಂದು ಕಾನೂನು ಹೋರಾಟ ಮಾಡಿದ್ದರು.
8 ತಿಂಗಳ ವಿಚಾರಣೆ ಬಳಿಕ ಇದೀಗ ಕೋರ್ಟ್ ಬ್ಯಾಂಕ್ ಗೆ 85,177ರೂಪಾಯಿ ದಂಡ ವಿಧಿಸಿದೆ. ಈ ಮೂಲಕ ಬ್ಯಾಂಕ್ ಗಳಲ್ಲಿ ತ್ರಿಭಾಷಾ ನೀತಿಯಡಿ ಪ್ರಾದೇಶಿಕ ಭಾಷೆಗಳ ಬಳಕೆ ಆದ್ಯತೆಯನ್ನು ಎತ್ತಿ ಹಿಡಿದಿದೆ.
ರಣ ಮಳೆಗೆ ಕುಸಿದ ಗುಡ್ಡ; ಕಳಸ-ಹಿರೇಬೈಲು ಸಂಚಾರ ಸ್ಥಗಿತ