
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ವಾಣಿ ಕುದರಿ ಇವಳು ಮಕ್ಕಳಾದ ಪೃಥ್ವಿರಾಜ, ಕೃಷ್ಣಾ ಮತ್ತು ಪಾಯಲ್ ಕುದರಿ ಇವರನ್ನು ಆ. ೦೮ ರಂದು ಮನೆಯಿಂದ ಕರೆದುಕೊಂಡು ಕಾಣೆಯಾಗಿರುತ್ತಾಳೆ ಎಂದು ಪತಿ ನಾಗೇಶ ಹಣಮಂತ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದವರ ವಿವರ: ವಾಣಿ ವಯಸ್ಸು ೩೩ ವರ್ಷ, ಮಕ್ಕಳು ೧೩, ೧೨, ೧೦ ವರ್ಷ ವಯಸ್ಸು ಇರುತ್ತವೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಲಗೋಡ ಪೊಲೀಸ್ ಠಾಣಾಧಿಕಾರಿಗಳಿಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ