Latest

ಸೆಲ್ಫಿ ವಿಡಿಯೋ ಮಾಡಿ ಮಕ್ಕಳೆದುರೇ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕುಟುಂಬದವರೇ ಮಾಡಿದ ಮೋಸಕ್ಕೆ ಬೇಸತ್ತ ಮಹಿಳೆ ಸೆಲ್ಫಿ ವಿಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಫಾತಿಮಾ (30) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕೆಲ ವರ್ಷಗಳಿಂದ ಫಾತಿಮಾ ದುಬೈ, ಕುವೈತ್ ನಲ್ಲಿ ಮನೆ ಕೆಲಸ ಮಾಡಿ ತಾನು ಸಂಪಾದಿಸಿದ ಹಣವನ್ನು ತಾಯಿ ಹಾಗೂ ಅಣ್ಣನಿಗೆ ಕಳುಹಿಸಿದ್ದಳು. ಹೀಗೆ 9 ಲಕ್ಷ ರೂ ಹಣವನ್ನು ಕಳುಹಿಸಿದ್ದ ಮಹಿಳೆ ಇದೀಗ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ತನ್ನ ನಿವಾಸಕ್ಕೆ ಮರಳಿದ್ದಾಳೆ. ತಾನು ಕಳುಹಿಸಿದ್ದ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾಳೆ ಆದರೆ ಹಣ ನಿಡದೇ ತಾಯಿ, ಅಕ್ಕ, ಅಣ್ಣ-ಅತ್ತಿಗೆ ವಂಚಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

Home add -Advt

ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಷ್ಟಪಟ್ಟು ದುಡಿದ ಹಣವನ್ನು ಕುಟುಂಬದವರೇ ವಂಚಿಸಿಸಿದ್ದಕ್ಕೆ ನೊಂದ ಫಾತಿಮಾ, ತನ್ನ ಮಕ್ಕಳ ಎದುರೇ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿದ್ದಾಳೆ. ಫಾತಿಮಾ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Related Articles

Back to top button