Latest

ಸೀರೆಗೆ ಬೆಂಕಿ; 5 ಸ್ಟಾರ್ ಹೋಟೆಲ್ ನಲ್ಲಿ ಸಜೀವ ದಹನಗೊಂಡ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: 5 ಸ್ಟಾರ್ ಹೋಟೆಲ್ ನಲ್ಲಿ ಮಹಿಳೆಯೊಬ್ಬರ ಸೀರೆಗೆ ಬೆಂಕಿ ತಗುಲಿದ ಪರಿಣಾಮ ಮಹಿಳೆ ಸಜೀವ ದಹನಗೊಂಡಿರುವ ಘಟನೆ ಅಹಮದಾಬಾದ್ ನ ಎಲಿಸ್ ಬ್ರಿಡ್ಜ್ ಪ್ರದೇಶದಲ್ಲಿ ನಡೆದಿದೆ.

ಮಣಿನಗರದ ನಿವಾಸಿ ರಶ್ಮಿಕಾ ಶಾ (54) ಮೃತ ಮಹಿಳೆ. ಹೋಟೆಲ್ ನಲ್ಲಿ ನಡೆದ ಔತಣಕೂಟದಲ್ಲಿ ಮಹಿಳೆ ಪಾಲ್ಗೊಂಡಿದ್ದರು. ಈ ವೇಳೆ ಅವರ ಸೀರೆಗೆ ಬೆಂಕಿ ತಗುಲಿ ಮಹಿಳೆ ದೇಹ ಬಹುಪಾಲು ಸುಟ್ಟು ಹೋಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದರು.

Home add -Advt

5 ಸ್ಟಾರ್ ಹೋಟೆಲ್ ನಲ್ಲಿ ಸಂಭವಿಸಿದ ಈ ದುರಂತವನ್ನು ಪೊಲೀಸರು ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಔತಣ ಕೂಟದಲ್ಲಿ ಮಹಿಳೆ ತಮ್ಮ ಪ್ಲೇಟ್ ಗೆ ಆಹಾರ ಬಡಿಸಿಕೊಳ್ಳುತ್ತಿದ್ದಾಗ ಅಲ್ಲಿಯೇ ಇದ್ದ ಒಲೆಯಿಂದಾಗಿ ಅವರು ಧರಿಸಿದ್ದ ಸಿಂಥೆಟಿಕ್ ಸೀರೆಗೆ ಬೆಂಕಿ ತಗುಲಿದೆ. ಹೋಟೆಲ್ ಸಿಬ್ಬಂದಿ ಹಾಗೂ ನೆರೆದ ಜನ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಮಹಿಳೆ ಅಷ್ಟರಲ್ಲಾಗಲೇ ಬೆಂಕಿ ತೀವ್ರತೆಗೆ ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದರು. ಸುಟ್ಟಗಾಯಗಳಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯನ್ನೇ ಹರಾಜಿಗಿಟ್ಟ ಪತ್ನಿ

Related Articles

Back to top button