Kannada NewsLatestNational

*ಮಹಿಳಾ ಕಾನ್ಸ್ ಟೇಬಲ್ ಗೆ ಕಮಿಷನರ್ ಕಚೇರಿಯಲ್ಲಿಯೇ ಲೈಂಗಿಕ ಕಿರುಕುಳ*

ಪ್ರಗತಿವಾಹಿನಿ ಸುದ್ದಿ; ಲಖನೌ: ಮಹಿಳಾ ಕಾನ್ಸ್ ಟೇಬಲ್ ಓರ್ವರಿಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಹೆಡ್ ಕಾನ್ಸ್ ಟೇಬಲ್ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ಈ ಹಿಂದೆ ಬಾರಾಬಂಕಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್ ಟೇಬಲ್, ಲಖನೌಗೆ ವರ್ಗಾವಣೆಯಾಗಿದ್ದರು. ರಕ್ಷಾಬಂಧನ ಹಬ್ಬದ ದಿನ ಕರ್ತವ್ಯಕ್ಕೆ ಹಜರಾಗಲು ಮೆಟ್ರೋ ಪಾಲಿಟನ್ ಕಚೇರಿಯ ಕೊಠಡಿ 57ರಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಹೆಡ್ ಕಾನ್ಸ್ ಟೇಬಲ್, ಮಹಿಳಾ ಕಾನ್ಸ್ ಟೇಬಲ್ ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಕಾನ್ಸ್ ಟೇಬಲ್ ಲಿಖಿತ ದೂರು ನೀಡಿದ್ದಾರೆ.

ಕರ್ತವ್ಯಕ್ಕೆ ಹಾಜರಾಗಲು ಕಚೇರಿಗೆ ಬಂದಿದ್ದ ಮಹಿಳಾ ಕಾನ್ಸ್ ಟೇಬಲ್ ಗೆ ಹೆಡ್ ಕಾನ್ಸ್ ಟೇಬಲ್ ಕುರ್ಚಿ ಮೇಲೆ ಕೂರುವಂತೆ ಹೇಳಿ ಅಸಭ್ಯವಾಗಿ ವರ್ತಿಸಿದ್ದಾರೆ. ನೊಂದ ಮಹಿಳ ಅಕಾನ್ಸ್ ಟೇಬಲ್ ಕಚೇರಿಯಿಂದ ಹೊರಟು ಬಂದು ಮೇಲಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ದೂರಿನ ಅನ್ವಯ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆಂತರಿಕ ಸಮಿತಿ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಆದರೆ ಮಹಿಳಾ ಕಾನ್ಸ್ ಟೇಬಲ್, ಘಟನೆ ಬಗ್ಗೆ ದೂರು ನೀಡಿದರೂ ಹೆಡ್ ಕಾನ್ಸ್ ಟೇಬಲ್ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಪ್ರಕರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button