
ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಂಬರಗಟ್ಟೆ ಗ್ರಾಮದಲ್ಲಿ ದೆವ್ವ ಬಂದಿದೆ ಎಂದು ಮಹಿಳೆಗೆ ಮನಸೋಯಿಚ್ಛೆ ಥಳಿಸಲಾಗಿದೆ. ಥಳಿತದಿಂದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಗೀತಮ್ಮ(53) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಗೀತಮ್ಮ ಮೇಲೆ ಹಲ್ಲೆ ಮಾಡಿದ ಆಶಾ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಆಶಾ ಮೈಮೇಲೆ ದೇವಿ ಬರ್ತಾಳೆ ಎಂದು ಗ್ರಾಮಸ್ಥರು ನಂಬಿದ್ದರು. ಹೀಗಾಗಿಯೇ ವಿಚಿತ್ರ ರೀತಿ ವರ್ತಿಸುತ್ತಿದ್ದ ಗೀತಮ್ಮಳನ್ನು ಅವಳ ಬಳಿ ಕರೆದೋಯ್ಯಲಾಗಿದೆ.ದೆವ್ವ ಬಿಡಿಸೋ ನೆಪದಲ್ಲಿ ಗೀತಮ್ಮಳನ್ನು ಮನಸೋಯಿಚ್ಛೆ ತಳಿಸಲಾಗಿದೆ. ಥಳಿತಕ್ಕೊಳಗಾದ ಗೀತಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಳಿಕ ಅವರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಗೀತಮ್ಮ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.