
ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಮಹಿಳೆ ಪತಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು ತನ್ನ ಪ್ರಿಯಕರಿನ ಜೊತೆ ತೆರಳಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಿಯಕರಿನಿಗಾಗಿ ತನ್ನ ಮೂವರು ಮಕ್ಕಳನ್ನು ಬಿಟ್ಟು ಆತನೊಂದಿಗೆ ಹೋಗಿದ್ದಾಳೆ. ಪ್ರಿಯಕರನೊಂದಿಗೆ ಹೋದ ಮಹಿಳೆಯನ್ನು ಲೀಲಾವತಿ ಎಂದು ಗುರುತಿಸಲಾಗಿದೆ. ಪೊಲೀಸರ ಎದುರೂ ಮಹಿಳೆ ತನಗೆ ಪತಿ ಹಾಗೂ ಮಕ್ಕಳು ಬೇಡ ತಾನು ಪ್ರಿಯಕರನೊಂದಿಗೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ತಮ್ಮನ್ನು ಬಿಟ್ಟುಹೋದ ತಾಯಿ ನಡೆಗೆ ಮಕ್ಕಳು ಕಣ್ಣಿರಿಟ್ಟಿದ್ದಾರೆ.
ಲೀಲಾವತಿ ಹಾಗೂ ಮಂಜುನಾಥ್ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿ ಮೂವರು ಮಕ್ಕಳಿದ್ದಾರೆ. ಮೂವರು ಮಕ್ಕಳಿದ್ದರೂ ಮಹಿಳೆ ಮತ್ತೋರ್ವನ ಸಹವಾಸ ಮಾಡಿದ್ದು, ಈಗ ಗಂಡ, ಮಕ್ಕಳನ್ನು ಬಿಟ್ಟು ಪ್ರಿಯತಮನ ಜೊತೆ ಎಸ್ಕೇಪ್ ಆಗಿದ್ದಾಳೆ.